Friday, October 20, 2023

ನವರಾತ್ರಿ ದಿನ - 9 ಶ್ರೀ ಸಿದ್ಧಿದಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ

🕉️ ಓಂ ಶ್ರೀ ಗುರುಭ್ಯೋ ನಮಃ 🕉️ll ಶ್ರೀ ಸಿದ್ಧಿದಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ ll

ಓಂ ಸಿದ್ಧಿದಾತ್ರ್ಯೈ ನಮಃ
ಓಂ ಸಿದ್ಧಾಯೈ ನಮಃ
ಓಂ ಸಿದ್ಧೇಶ್ವರ್ಯೈ ನಮಃ
ಓಂ ಸಿದ್ಧ್ಯೈ ನಮಃ
ಓಂ ಸಿದ್ಧಾಮ್ಬಾಯೈ ನಮಃ
ಓಂ ಸಿದ್ಧಮಾತೃಕಾಯೈ ನಮಃ
ಓಂ ಸಿದ್ಧಾರ್ಥದಾಯಿನ್ಯೈ ನಮಃ
ಓಂ ಸಿದ್ಧಾಢ್ಯಾಯೈ ನಮಃ
ಓಂ ಸಿದ್ಧಸಮ್ಮತಾಯೈ ನಮಃ
ಓಂ ಸ್ಥಿತ್ಯೈ ನಮಃ 10

ಓಂ ಸಿದ್ಧವಿದ್ಯಾಧರಾರ್ಚಿತಾಯೈ ನಮಃ
ಓಂ ಸಿತಾತಪತ್ರಾಯೈ ನಮಃ
ಓಂ ಸಿದ್ಧಿದಾಯೈ ನಮಃ
ಓಂ ಸಿದ್ಧಪೂಜಿತಾಯೈ ನಮಃ
ಓಂ ಸಿದ್ಧಾನ್ತಗಮ್ಯಾಯೈ ನಮಃ
ಓಂ ಸಿದ್ಧೇಶಪ್ರಿಯಾಯೈ ನಮಃ
ಓಂ ಸಿದ್ಧಜನಾರ್ಥದಾಯೈ ನಮಃ
ಓಂ ಸ್ಥಿತಿಪ್ರದಾಯೈ ನಮಃ
ಓಂ ಸ್ಥಿರಾಯೈ ನಮಃ
ಓಂ ಸಿದ್ಧಿವಿದ್ಯಾಸ್ವರೂಪಿಣ್ಯೈ ನಮಃ 20

ಓಂ ಸುನ್ದರಾಲಕಾಯೈ ನಮಃ
ಓಂ ಸಮಸ್ತಾಸುರಘಾತಿನ್ಯೈ ನಮಃ
ಓಂ ಸುಧಾಮಯ್ಯೈ ನಮಃ
ಓಂ ಸುಧಾಮೂರ್ತ್ಯೈ ನಮಃ
ಓಂ ಸುಧಾಯೈ ನಮಃ
ಓಂ ಸುಖದಾಯೈ ನಮಃ
ಓಂ ಸುರೇಶಾನ್ಯೈ ನಮಃ
ಓಂ ಸ್ವಾಹಾಯೈ ನಮಃ
ಓಂ ಸ್ವಾಹೇಶನೇತ್ರಾಯೈ ನಮಃ
ಓಂ ಸುಮುಖಾಯೈ ನಮಃ 30

ಓಂ ಸುಮುಖಪ್ರೀತಾಯೈ ನಮಃ
ಓಂ ಸಮಾನಾಧಿಕವರ್ಜಿತಾಯೈ ನಮಃ
ಓಂ ಸಂಸ್ತುತಾಯೈ ನಮಃ
ಓಂ ಸ್ತುತಿಸುಪ್ರೀತಾಯೈ ನಮಃ
ಓಂ ಸತ್ಯವಾದಿನ್ಯೈ ನಮಃ
ಓಂ ಸದಾಸ್ಪದಾಯೈ ನಮಃ
ಓಂ ಸತ್ಯಾಯೈ ನಮಃ
ಓಂ ಸತ್ಯಾಸತ್ಯಸ್ವರೂಪಿಣ್ಯೈ ನಮಃ
ಓಂ ಸುನ್ದರ್ಯೈ ನಮಃ
ಓಂ ಸಾಮದಾನಾಸುಖಪ್ರದಾಯೈ ನಮಃ 40

ಓಂ ಸರ್ವರೋಗಪ್ರಶಮನ್ಯೈ ನಮಃ
ಓಂ ಸರ್ವಜ್ಞತ್ವಫಲಪ್ರದಾಯೈ ನಮಃ
ಓಂ ಸಂಕ್ರಮಾಯೈ ನಮಃ
ಓಂ ಸಮದಾಯೈ ನಮಃ
ಓಂ ಸೋಮ್ಯಾಯೈ ನಮಃ
ಓಂ ಸರ್ಗಾದಿಕರಣಕ್ಷಮಾಯೈ ನಮಃ
ಓಂ ಸಂಕಟಾಯೈ ನಮಃ
ಓಂ ಸಂಕಟಹರಾಯೈ ನಮಃ
ಓಂ ಸಕುಂಕುಮವಿಲೇಪನಾಯೈ ನಮಃ ಓಂ ಸಮಿದ್ಧಾಯೈ ನಮಃ 50

ಓಂ ಸಾಮಿಧೇನ್ಯೈ ನಮಃ
ಓಂ ಸಾಮಾನ್ಯಾಯೈ ನಮಃ
ಓಂ ಸಾಮವೇದಿನ್ಯೈ ನಮಃ
ಓಂ ಸಮುತ್ತೀರ್ಣಾಯೈ ನಮಃ
ಓಂ ಸದಾಚಾರಾಯೈ ನಮಃ
ಓಂ ಸಂಹಾರಾಯೈ ನಮಃ
ಓಂ ಸರ್ವಪಾವನ್ಯೈ ನಮಃ
ಓಂ ಸರ್ಪಿಣ್ಯೈ ನಮಃ
ಓಂ ಸರ್ವಮಾತ್ರೇ ನಮಃ
ಓಂ ಸತ್ಯಜ್ಞಾನಸ್ವರೂಪಿಣ್ಯೈ ನಮಃ 60

ಓಂ ಸಮ್ಪತ್ಕರ್ಯೈ ನಮಃ
ಓಂ ಸಮಾನಾಂಗ್ಯೈ ನಮಃ
ಓಂ ಸರ್ವಭಾವಸುಸಂಸ್ಥಿತಾಯೈ ನಮಃ
ಓಂ ಸನ್ಧ್ಯಾವನ್ದನಸುಪ್ರೀತಾಯೈ ನಮಃ
ಓಂ ಸನ್ಮಾರ್ಗಕುಲಪಾಲಿನ್ಯೈ ನಮಃ
ಓಂ ಸಂಜೀವಿನ್ಯೈ ನಮಃ
ಓಂ ಸರ್ವಮೇಧಾಯೈ ನಮಃ
ಓಂ ಸಭ್ಯಾಯೈ ನಮಃ
ಓಂ ಸಾಧುಸುಪೂಜಿತಾಯೈ ನಮಃ
ಓಂ ಸಾಮರ್ಥ್ಯವಾಹಿನ್ಯೈ ನಮಃ 70

ಓಂ ಸಾಂಖ್ಯಾಯೈ ನಮಃ
ಓಂ ಸಾನ್ದ್ರಾನನ್ದಪಯೋಧರಾಯೈ ನಮಃ
ಓಂ ಸಂಕೀರ್ಣಮನ್ದಿರಸ್ಥಾನಾಯೈ ನಮಃ
ಓಂ ಸಾಕೇತಕುಲಪಾಲಿನ್ಯೈ ನಮಃ
ಓಂ ಸಂಹಾರಿಣ್ಯೈ ನಮಃ
ಓಂ ಸುಧಾರೂಪಾಯೈ ನಮಃ
ಓಂ ಸಾಕೇತಪುರವಾಸಿನ್ಯೈ ನಮಃ
ಓಂ ಸಂಬೋಧಿನ್ಯೈ ನಮಃ
ಓಂ ಸಮಸ್ತೇಶ್ಯೈ ನಮಃ
ಓಂ ಸಾಧ್ವ್ಯೈ ನಮಃ 80

ಓಂ ಸರ್ವಜ್ಞಾನಪ್ರದಾಯಿನ್ಯೈ ನಮಃ
ಓಂ ಸರ್ವದಾರಿದ್ರ್ಯಶಮನ್ಯೈ ನಮಃ
ಓಂ ಸರ್ವದುಃಖವಿಮೋಚನ್ಯೈ ನಮಃ
ಓಂ ಸರ್ವರೋಗಪ್ರಶಮನ್ಯೈ ನಮಃ
ಓಂ ಸರ್ವಪಾಪವಿಮೋಚನ್ಯೈ ನಮಃ
ಓಂ ಸಮದೃಷ್ಟ್ಯೈ ನಮಃ
ಓಂ ಸಮಗುಣಾಯೈ ನಮಃ
ಓಂ ಸರ್ವಗೋಪ್ತ್ರ್ಯೈ ನಮಃ
ಓಂ ಸಹಾಯಿನ್ಯೈ ನಮಃ
ಓಂ ಸಹಾಯೈ ನಮಃ 90

ಓಂ ಸಮಾರಾಧ್ಯಾಯೈ ನಮಃ
ಓಂ ಸಾಮದಾಯೈ ನಮಃ
ಓಂ ಸಿನ್ಧುಸೇವಿತಾಯೈ ನಮಃ
ಓಂ ಸಮ್ಮೋಹಿನ್ಯೈ ನಮಃ
ಓಂ ಸದಾಮೋಹಾಯೈ ನಮಃ
ಓಂ ಸರ್ವಮಾಂಗಲದಾಯಿನ್ಯೈ ನಮಃ
ಓಂ ಸಮಸ್ತಭುವನೇಶಾನ್ಯೈ ನಮಃ
ಓಂ ಸರ್ವಕಾಮಫಲಪ್ರದಾಯೈ ನಮಃ
ಓಂ ಸರ್ವಸಿದ್ಧಿಪ್ರದಾಯೈ ನಮಃ
ಓಂ ಸವ್ಯಸಧ್ರೀಚ್ಯೈ ನಮಃ 100

ಓಂ ಸಹಾಯಿನ್ಯೈ ನಮಃ
ಓಂ ಸಕಲಾಯೈ ನಮಃ
ಓಂ ಸಾಗರಾಯೈ ನಮಃ
ಓಂ ಸಾರಾಯೈ ನಮಃ
ಓಂ ಸಾರ್ವಭೌಮಸ್ವರೂಪಿಣ್ಯೈ ನಮಃ
ಓಂ ಸನ್ತೋಷಜನನ್ಯೈ ನಮಃ
ಓಂ ಸೇವ್ಯಾಯೈ ನಮಃ
ಓಂ ಸರ್ವೇಶ್ಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಸಿದ್ಧಿದಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

ನವರಾತ್ರಿ ದಿನ -8 ಶ್ರೀ ಮಹಾಗೌರಿದೇವಿ ಅಷ್ಟೋತ್ತರ ಶತನಾಮಾವಳಿ

🕉️ ಓಂ ಶ್ರೀ ಗುರುಭ್ಯೋ ನಮಃ 🕉️ll ಶ್ರೀ ಮಹಾಗೌರಿದೇವಿ ಅಷ್ಟೋತ್ತರ ಶತನಾಮಾವಳಿ ll 

ಓಂ ಮಹಾಗೌರಿದೇವ್ಯೈ ನಮಃ
ಓಂ ಮಹಾಗರ್ತಾಯೈ ನಮಃ
ಓಂ ಮಹಾಗುಪ್ತಾಯೈ ನಮಃ
ಓಂ ಮಹಾಶೌರ್ಯಾಯೈ ನಮಃ 
ಓಂ ಮಹಾಮಾರ್ಯೈ ನಮಃ 
ಓಂ ಮಹಾವೀರಾಯೈ ನಮಃ 
ಓಂ ಮಹಾಶ್ಯಾಮಾಯೈ ನಮಃ 
ಓಂ ಮಹೇಶ್ವರ್ಯೈ ನಮಃ 
ಓಂ ಮಾಹೇನ್ದ್ರ್ಯೈ ನಮಃ 
ಓಂ ಮಹಾಲಕ್ಷ್ಮ್ಯೈ ನಮಃ 10

ಓಂ ಮಹಾಕಾಲ್ಯೈ ನಮಃ 
ಓಂ ಮಹಾಕನ್ಯಾಯೈ ನಮಃ 
ಓಂ ಮಹಾಮಾಯಾಯೈ ನಮಃ 
ಓಂ ಮಹಾಪ್ರಜ್ಞಾಯೈ ನಮಃ 
ಓಂ ಮಹಭೂತಮಹಾಭಯವಿನಾಶಿನ್ಯೈ ನಮಃ
ಓಂ ಮಹಾಭಾಗ್ಯಾಯೈ ನಮಃ 
ಓಂ ಮಹಾವಿಘ್ನವಿನಾಶಿನ್ಯೈ ನಮಃ
ಓಂ ಮಹಾನುಭಾವಾಯೈ ನಮಃ 
ಓಂ ಮಹಾಮಂಗಲದೇವತಾಯೈ ನಮಃ
ಓಂ ಮಹಾಪಥಾಯೈ ನಮಃ 20

ಓಂ ಮಹಾಭೋಗಾಯೈ ನಮಃ
ಓಂ ಮಹಾರೂಪಾಯೈ ನಮಃ
ಓಂ ಮಹಾಭೈರವಪೂಜಿತಾಯೈ ನಮಃ
ಓಂ ಮಹಾಮಂಗಲದೇವತಾಯೈ ನಮಃ
ಓಂ ಮಹಾಗಗನಾಯೈ ನಮಃ
ಓಂ ಮನಶ್ಚಾಂಚಲ್ಯಸಂಹರ್ತ್ರ್ಯೈ ನಮಃ 
ಓಂ ಮರಕತಶ್ಯಾಮಾಯೈ ನಮಃ 
ಓಂ ಮಗಧ್ಯೈ ನಮಃ 
ಓಂ ಮದಹನ್ತ್ರ್ಯೈ ನಮಃ 
ಓಂ ಮನೋಜ್ಞಾಯೈ ನಮಃ 30

ಓಂ ಮನ್ದಾರಕುಸುಮಾರ್ಚಿತಾಯೈ ನಮಃ 
ಓಂ ಮಂಜುಮಂಜೀರಚರಣಾಯೈ ನಮಃ 
ಓಂ ಮನಮೋಹಿನ್ಯೈ ನಮಃ 
ಓಂ ಮಂಜುಭಾಷಿಣ್ಯೈ ನಮಃ 
ಓಂ ಮಧುರದ್ರಾವಿಣ್ಯೈ ನಮಃ 
ಓಂ ಮುದ್ರಾಯೈ ನಮಃ 
ಓಂ ಮಲಯಾಯೈ ನಮಃ 
ಓಂ ಮಧುಕೈಟಭಸಂಹರ್ತ್ರ್ಯೈ ನಮಃ 
ಓಂ ಮಾನಮಾನಿನ್ಯೈ ನಮಃ 
ಓಂ ಮನಸ್ವಿನ್ಯೈ ನಮಃ 40

ಓಂ ಮನ್ದೋದರ್ಯೈ ನಮಃ 
ಓಂ ಮಸೃಣಪ್ರಿಯಾಯೈ ನಮಃ 
ಓಂ ಮಾಲಿನ್ಯೈ ನಮಃ 
ಓಂ ಮಾನ್ಯಾಯೈ ನಮಃ 
ಓಂ ಮಧುಮತ್ಯೈ ನಮಃ 
ಓಂ ಮುಕುನ್ದಪದವಿಕ್ರಮಾಯೈ ನಮಃ 
ಓಂ ಮೂಲಾಧಾರಸ್ಥಿತಾಯೈ ನಮಃ 
ಓಂ ಮುಗ್ಧಾಯೈ ನಮಃ 
ಓಂ ಮಣಿಪುರನಿವಾಸಿನ್ಯೈ ನಮಃ 
ಓಂ ಮೃಗಾಕ್ಷ್ಯೈ ನಮಃ 50

ಓಂ ಮಹಿಷಾರೂಢಾಯೈ ನಮಃ 
ಓಂ ಮಹಿಷಾಸುರಮರ್ದಿನ್ಯೈ ನಮಃ 
ಓಂ ಮಾಯಾತೀತಾಯೈ ನಮಃ 
ಓಂ ಮೃತ್ಯುಂಜಯಾಯೈ ನಮಃ 
ಓಂ ಮಧುಮಾಂಸಾಯೈ ನಮಃ 
ಓಂ ಮಧುದ್ರವಾಯೈ ನಮಃ 
ಓಂ ಮಾನವ್ಯೈ ನಮಃ 
ಓಂ ಮಧುಸಮ್ಭೂತಾಯೈ ನಮಃ 
ಓಂ ಮಾನೈಕ್ಯಾಯೈ ನಮಃ 
ಓಂ ಮನ್ತ್ರಢ್ಯಾಯೈ ನಮಃ 60

ಓಂ ಮಾತಾಯೈ ನಮಃ 
ಓಂ ಮಾಯಾಯೈ ನಮಃ 
ಓಂ ಮೂಲಕಾರಣಾಯೈ ನಮಃ 
ಓಂ ಮಧುಜಿಹ್ವಾಯೈ ನಮಃ 
ಓಂ ಮನುಪ್ರಿಯಾಯೈ ನಮಃ 
ಓಂ ಮಾಯಾಜ್ಞಾಯೈ ನಮಃ
ಓಂ ಮಾನದಾಯಿನ್ಯೈ ನಮಃ 
ಓಂ ಮಯಾಸಂಕಲ್ಪಜನನ್ಯೈ ನಮಃ
ಓಂ ಮಾಯಾಮಾಯವಿನೋದಿನ್ಯೈ ನಮಃ
ಓಂ ಮಾಯಾಪ್ರಪಂಚಶಮನ್ಯೈ ನಮಃ 70

ಓಂ ಮಾಯಾಸಂಹಾರರೂಪಿಣ್ಯೈ ನಮಃ
ಓಂ ಮಾಯಾಮನ್ತ್ರಪ್ರಸಾದಾಯೈ ನಮಃ
ಓಂ ಮಾಯಾಜನವಿಮೋಹಿನ್ಯೈ ನಮಃ
ಓಂ ಮಲಯಾನ್ವಿತಾಯೈ ನಮಃ
ಓಂ ಮತ್ಸ್ಯೋದರ್ಯೈ ನಮಃ
ಓಂ ಮನೋವೈಕಲ್ಯಶಮನ್ಯೈ ನಮಃ
ಓಂ ಮಲಯಾಚಲವಾಸಿನ್ಯೈ ನಮಃ
ಓಂ ಮಲಯಧ್ವಜರಾಜಶ್ರಿಯೈ ನಮಃ
ಓಂ ಮಯಾಮೋಹವಿಭೇದಿನ್ಯೈ ನಮಃ
ಓಂ ಮುಕ್ತಾಮುಕ್ತಸ್ವರೂಪಿನ್ಯೈ ನಮಃ 80

ಓಂ ಮಾನದಾಯೈ ನಮಃ
ಓಂ ಮಾಧವ್ಯೈ ನಮಃ 
ಓಂ ಮಧುಮರ್ದಿನ್ಯೈ ನಮಃ
ಓಂ ಮನ್ತ್ರಾಯೈ ನಮಃ
ಓಂ ಮನ್ತ್ರಮಯ್ಯೈ ನಮಃ
ಓಂ ಮಾನ್ಯಾಯೈ ನಮಃ
ಓಂ ಮುಕ್ತಾಮುಕ್ತವಿವರ್ಜಿತಾಯೈ ನಮಃ
ಓಂ ಮಾಧವಮತ್ರಿಣ್ಯೈ ನಮಃ
ಓಂ ಮಾಯಾದೂರಾಯೈ ನಮಃ
ಓಂ ಮಾಯಾವ್ಯೈ ನಮಃ 90

ಓಂ ಮನ್ತ್ರಿಣ್ಯೈ ನಮಃ
ಓಂ ಮಹಾವೈರಿವಿನಾಶಿನ್ಯೈ ನಮಃ 
ಓಂ ಮನ್ತ್ರಢ್ಯಾಯೈ ನಮಃ
ಓಂ ಮೃತ್ಯುಂಜಯರೂಪಾಯೈ ನಮಃ
ಓಂ ಮಹ್ಯೈ ನಮಃ
ಓಂ ಮಂಡಲಸ್ಥಾಯೈ ನಮಃ
ಓಂ ಮಧುರಾಗಮಪೂಜಿತಾಯೈ ನಮಃ
ಓಂ ಮಕರಾವಾಸರೂಪಿಣ್ಯೈ ನಮಃ
ಓಂ ಮಾನಿನ್ಯೈ ನಮಃ
ಓಂ ಮನುಪ್ರೀತಾಯೈ ನಮಃ 100

ಓಂ ಮನ್ತ್ರಮೂರ್ತ್ಯೈ ನಮಃ 
ಓಂ ಮನ್ತ್ರವಶ್ಯಾಯೈ ನಮಃ
ಓಂ ಮಧುರಾಯೈ ನಮಃ
ಓಂ ಮನುಸ್ತುತಾಯೈ ನಮಃ 
ಓಂ ಮಾತೃಕಾಯೈ ನಮಃ 
ಓಂ ಮಸ್ತಾಂಬದೇವ್ಯೈ ನಮಃ 
ಓಂ ಮಹಾವಿಘ್ನವಿನಾಶಿನ್ಯೈ ನಮಃ
ಓಂ ಮತ್ತಮಾತಂಗಗಮನಾಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಮಹಾಗೌರಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

ನವರಾತ್ರಿ ದಿನ - 7 ಶ್ರೀ ಕಾಲರಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ

🕉️ ಓಂ ಶ್ರೀ ಗುರುಭ್ಯೋ ನಮಃ 🕉️ ll ಶ್ರೀ ಕಾಲರಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ ll 

ಓಂ ಕಾಲರಾತ್ರಿದೇವ್ಯೈ ನಮಃ
ಓಂ ಕಾಲಜ್ಞಾಯೈ ನಮಃ 
ಓಂ ಕಾಲಮಾತ್ರಾಯೈ ನಮಃ 
ಓಂ ಕಾಲಧಾತ್ರ್ಯೈ ನಮಃ 
ಓಂ ಕಲಾವತ್ಯೈ ನಮಃ 
ಓಂ ಕಾಲದಾಯೈ ನಮಃ 
ಓಂ ಕಾಲಹಾಯೈ ನಮಃ 
ಓಂ ಕಾಲದೈತ್ಯನಿಕೃನ್ತಿನ್ಯೈ ನಮಃ 
ಓಂ ಕಾಲಸ್ಥಾಯೈ ನಮಃ 
ಓಂ ಕಾಲರೂಪಿಣ್ಯೈ ನಮಃ 10

ಓಂ ಕಾಷ್ಠಾಯೈ ನಮಃ
ಓಂ ಕಾನನಸ್ಥಾಯೈ ನಮಃ 
ಓಂ ಕಾಶ್ಮೀರಲಿಪ್ತವಕ್ಷೋಜಾಯೈ ನಮಃ ಓಂ ಕಾಶ್ಮೀರದ್ರವಚರ್ಚಿತಾಯೈ ನಮಃ 
ಓಂ ಕುಂಜರೇಶ್ವರಗಾಮಿನ್ಯೈ ನಮಃ 
ಓಂ ಕಮ್ಬುಕಂಠ್ಯೈ ನಮಃ 
ಓಂ ಕರಾಲಾಕ್ಷ್ಯೈ ನಮಃ 
ಓಂ ಕಾಮಾರ್ತಾಯೈ ನಮಃ 
ಓಂ ಕಕಾರವರ್ಣಸರ್ವಾಂಗ್ಯೈ ನಮಃ 
ಓಂ ಕಲಾಯೈ ನಮಃ 20

ಓಂ ಕಾಷ್ಠಾಯೈ ನಮಃ 
ಓಂ ಕಸ್ತೂರೀರಸನೀಲಾಂಗ್ಯೈ ನಮಃ 
ಓಂ ಕಮಲಾಪ್ರದಾಯೈ ನಮಃ
ಓಂ ಕುಮಾರ್ಯೈ ನಮಃ 
ಓಂ ಕುಮ್ಭಕರ್ಣ್ಯೈ ನಮಃ
ಓಂ ಕಾಲಕರ್ಣ್ಯೈ ನಮಃ
ಓಂ ಕ್ಷಾನ್ತ್ಯೈ ನಮಃ
ಓಂ ಕ್ಷುಧಾಯೈ ನಮಃ
ಓಂ ಕಾನ್ತ್ಯೈ ನಮಃ
ಓಂ ಕುಂಡಲಿನ್ಯೈ ನಮಃ 30

ಓಂ ಕಲ್ಪವಲ್ಲರ್ಯೈ ನಮಃ
ಓಂ ಕುಂಜಿಕಾಯೈ ನಮಃ 
ಓಂ ಕುಡುಕ್ಕಾಯೈ ನಮಃ  
ಓಂ ಕಾಲಭೈರವ್ಯೈ ನಮಃ
ಓಂ ಕುಕ್ಕುಟ್ಯೈ ನಮಃ
ಓಂ ಕರ್ಪಟಾಯೈ ನಮಃ
ಓಂ ಕುಲಕುಟ್ಟನ್ಯೈ ನಮಃ
ಓಂ ಕುಲೇಶ್ವರ್ಯೈ ನಮಃ
ಓಂ ಕಲಸ್ವನಾಯೈ ನಮಃ
ಓಂ ಕೂಟಾಕಾರಾಯೈ ನಮಃ 40

ಓಂ ಕಟಕಂಟಾಯೈ ನಮಃ 
ಓಂ ಕ್ಷಾಮೋದರ್ಯೈ ನಮಃ 
ಓಂ ಕ್ಷಯಹೀನಾಯೈ ನಮಃ
ಓಂ ಕ್ಷರವರ್ಜಿತಾಯೈ ನಮಃ
ಓಂ ಕ್ಷಪಾಯೈ ನಮಃ
ಓಂ ಕ್ಷೋಭಕರ್ಯೈ ನಮಃ
ಓಂ ಕರುಣಾಮಯ್ಯೈ ನಮಃ
ಓಂ ಕಲಾಲಾಪಾಯೈ ನಮಃ
ಓಂ ಕೌಮುದ್ಯೈ ನಮಃ
ಓಂ ಕುಮುದಾಕರಾಯೈ ನಮಃ 50

ಓಂ ಕಲಾಯೈ ನಮಃ 
ಓಂ ಕ್ರೂರಾಯೈ ನಮಃ 
ಓಂ ಕ್ರೂರಾಶಯಾಯೈ ನಮಃ
ಓಂ ಕಲ್ಪಚಾರಿಣ್ಯೈ ನಮಃ
ಓಂ ಕೋಲಾಯೈ ನಮಃ
ಓಂ ಕಲಿಹೃದೇಕಲಕೃತೇ ನಮಃ
ಓಂ ಕಶಾಯೈ ನಮಃ
ಓಂ ಕರನ್ಧಮಾಯೈ ನಮಃ 
ಓಂ ಕುಲ್ಯಾಯೈ ನಮಃ 
ಓಂ ಕುರುಕುಲ್ಲಾಯೈ ನಮಃ 60

ಓಂ ಕುಲಾಂಗನಾಯೈ ನಮಃ 
ಓಂ ಕಾಲ್ಯೈ ನಮಃ
ಓಂ ಕಾಲರಾತ್ರ್ಯೈ ನಮಃ 
ಓಂ ಕಪಾಲಿನ್ಯೈ ನಮಃ 
ಓಂ ಕಾತ್ಯಾಯನ್ಯೈ ನಮಃ 
ಓಂ ಕಲ್ಯಾಣ್ಯೈ ನಮಃ 
ಓಂ ಕಾಲಾಕಾರಾಯೈ ನಮಃ 
ಓಂ ಕರಾಲಿನ್ಯೈ ನಮಃ
ಓಂ ಕಮ್ಪಿತಾನನಾಯೈ ನಮಃ
ಓಂ ಕಮ್ರಾಯೈ ನಮಃ 70

ಓಂ ಕುಡಮ್ಬಿಕಾಯೈ ನಮಃ
ಓಂ ಕ್ರೋಧನಾಯೈ ನಮಃ
ಓಂ ಕಲ್ಪಾನ್ತಾಮ್ಭೋದನಿರ್ಘೋಷಾಯೈ ನಮಃ 
ಓಂ ಕಾಮಧೇನವೇ ನಮಃ 
ಓಂ ಕಾಮಿನ್ಯೈ ನಮಃ 
ಓಂ ಕಾಮವನ್ದ್ಯಾಯೈ ನಮಃ 
ಓಂ ಕಾಮಸುವೇ ನಮಃ 
ಓಂ ಕಾಮವನಿತಾಯೈ ನಮಃ 
ಓಂ ಕಾಮಧುರೇ ನಮಃ 
ಓಂ ಕಾಮಾಯೈ ನಮಃ 80

ಓಂ ಕಾಮ್ಯಾಯೈ ನಮಃ 
ಓಂ ಕಮಲಾಯೈ ನಮಃ
ಓಂ ಕಾಮಕೇಲಿವಿನೋದಿನ್ಯೈ ನಮಃ 
ಓಂ ಕಾಮನಾಯೈ ನಮಃ 
ಓಂ ಕಾಮದಾಯೈ ನಮಃ 
ಓಂ ಕಾಮಾಖ್ಯಾಯೈ ನಮಃ 
ಓಂ ಕಾಮಧೇನವೇ ನಮಃ
ಓಂ ಕಾಮಧಾಮನಿವಾಸಿನ್ಯೈ ನಮಃ 
ಓಂ ಕಾಮಾಂಕುಶಾಯೈ ನಮಃ
ಓಂ ಕಾಮಪೀಠಸ್ಥಿತಾಯೈ ನಮಃ 90

ಓಂ ಕಾಮುಕ್ಯೈ ನಮಃ 
ಓಂ ಕಮನೀಯಾಯೈ ನಮಃ 
ಓಂ ಕಾಮಕಲಾಕಾಲ್ಯೈ ನಮಃ 
ಓಂ ಕಾಮದಾಯಿನ್ಯೈ ನಮಃ
ಓಂ ಕೃತ್ಯಾಯೈ ನಮಃ 
ಓಂ ಕಲಿಕಾಯೈ ನಮಃ 
ಓಂ ಕಮನೀಯಸುಭಾವಿನ್ಯೈ ನಮಃ 
ಓಂ ಕಾತ್ಯಾಯನ್ಯೈ ನಮಃ 
ಓಂ ಕಲಾಧಾರಾಯೈ ನಮಃ 
ಓಂ ಕಮನೀಯಾಯೈ ನಮಃ 100

ಓಂ ಕಮಲಾವತ್ಯೈ ನಮಃ 
ಓಂ ಕರಾಲ್ಯೈ ನಮಃ 
ಓಂ ಕಮಲಾರ್ಚಿತಾಯೈ ನಮಃ 
ಓಂ ಕನಕಾಯೈ ನಮಃ 
ಓಂ ಕನಕಪ್ರಾಣಾಯೈ ನಮಃ 
ಓಂ ಕನಕಾಚಲವಾಸಿನ್ಯೈ ನಮಃ 
ಓಂ ಕನಕಾಭಾಯೈ ನಮಃ 
ಓಂ ಕನಕಪ್ರದಾಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಕಾಲರಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

Thursday, October 19, 2023

ಶ್ರೀ ಸರಸ್ವತೀ ದೇವಿ ಅಷ್ಟೋತ್ತರಶತನಾಮಾವಳಿಃ

🕉️ ಓಂ ಶ್ರೀ ಗುರುಭ್ಯೋ ನಮಃ 🕉️‌     ‌      ‌        ‌                    ‌      ‌     ‌                                                                         ‌                                                                                        *ಶ್ರೀ ಸರಸ್ವತೀ ದೇವಿ ಅಷ್ಟೋತ್ತರಶತನಾಮಾವಳಿಃ*

ಓಂ ಸರಸ್ವತ್ಯೈ ನಮಃ |
ಓಂ ಮಹಾಭದ್ರಾಯೈ ನಮಃ |
ಓಂ ಮಹಾಮಾಯಾಯೈ ನಮಃ |
ಓಂ ವರಪ್ರದಾಯೈ ನಮಃ |
ಓಂ ಶ್ರೀಪ್ರದಾಯೈ ನಮಃ |
ಓಂ ಪದ್ಮನಿಲಯಾಯೈ ನಮಃ |
ಓಂ ಪದ್ಮಾಕ್ಷ್ಯೈ ನಮಃ |
ಓಂ ಪದ್ಮವಕ್ತ್ರಾಯೈ ನಮಃ |
ಓಂ ಶಿವಾನುಜಾಯೈ ನಮಃ | ೯

ಓಂ ಪುಸ್ತಕಭೃತೇ ನಮಃ |
ಓಂ ಜ್ಞಾನಮುದ್ರಾಯೈ ನಮಃ |
ಓಂ ರಮಾಯೈ ನಮಃ |
ಓಂ ಪರಾಯೈ ನಮಃ |
ಓಂ ಕಾಮರೂಪಾಯೈ ನಮಃ |
ಓಂ ಮಹಾವಿದ್ಯಾಯೈ ನಮಃ |
ಓಂ ಮಹಾಪಾತಕನಾಶಿನ್ಯೈ ನಮಃ |
ಓಂ ಮಹಾಶ್ರಯಾಯೈ ನಮಃ |
ಓಂ ಮಾಲಿನ್ಯೈ ನಮಃ | ೧೮

ಓಂ ಮಹಾಭೋಗಾಯೈ ನಮಃ |
ಓಂ ಮಹಾಭುಜಾಯೈ ನಮಃ |
ಓಂ ಮಹಾಭಾಗಾಯೈ ನಮಃ |
ಓಂ ಮಹೋತ್ಸಾಹಾಯೈ ನಮಃ |
ಓಂ ದಿವ್ಯಾಂಗಾಯೈ ನಮಃ |
ಓಂ ಸುರವಂದಿತಾಯೈ ನಮಃ |
ಓಂ ಮಹಾಕಾಳ್ಯೈ ನಮಃ |
ಓಂ ಮಹಾಪಾಶಾಯೈ ನಮಃ |
ಓಂ ಮಹಾಕಾರಾಯೈ ನಮಃ | ೨೭

ಓಂ ಮಹಾಂಕುಶಾಯೈ ನಮಃ |
ಓಂ ಪೀತಾಯೈ ನಮಃ |
ಓಂ ವಿಮಲಾಯೈ ನಮಃ |
ಓಂ ವಿಶ್ವಾಯೈ ನಮಃ |
ಓಂ ವಿದ್ಯುನ್ಮಾಲಾಯೈ ನಮಃ |
ಓಂ ವೈಷ್ಣವ್ಯೈ ನಮಃ |
ಓಂ ಚಂದ್ರಿಕಾಯೈ ನಮಃ |
ಓಂ ಚಂದ್ರವದನಾಯೈ ನಮಃ |
ಓಂ ಚಂದ್ರಲೇಖಾವಿಭೂಷಿತಾಯೈ ನಮಃ | ೩೬

ಓಂ ಸಾವಿತ್ರ್ಯೈ ನಮಃ |
ಓಂ ಸುರಸಾಯೈ ನಮಃ |
ಓಂ ದೇವ್ಯೈ ನಮಃ |
ಓಂ ದಿವ್ಯಾಲಂಕಾರಭೂಷಿತಾಯೈ ನಮಃ |
ಓಂ ವಾಗ್ದೇವ್ಯೈ ನಮಃ |
ಓಂ ವಸುಧಾಯೈ ನಮಃ |
ಓಂ ತೀವ್ರಾಯೈ ನಮಃ |
ಓಂ ಮಹಾಭದ್ರಾಯೈ ನಮಃ |
ಓಂ ಮಹಾಬಲಾಯೈ ನಮಃ | ೪೫

ಓಂ ಭೋಗದಾಯೈ ನಮಃ |
ಓಂ ಭಾರತ್ಯೈ ನಮಃ |
ಓಂ ಭಾಮಾಯೈ ನಮಃ |
ಓಂ ಗೋವಿಂದಾಯೈ ನಮಃ |
ಓಂ ಗೋಮತ್ಯೈ ನಮಃ |
ಓಂ ಶಿವಾಯೈ ನಮಃ |
ಓಂ ಜಟಿಲಾಯೈ ನಮಃ |
ಓಂ ವಿಂಧ್ಯವಾಸಾಯೈ ನಮಃ |
ಓಂ ವಿಂಧ್ಯಾಚಲವಿರಾಜಿತಾಯೈ ನಮಃ | ೫೪

ಓಂ ಚಂಡಿಕಾಯೈ ನಮಃ |
ಓಂ ವೈಷ್ಣವ್ಯೈ ನಮಃ |
ಓಂ ಬ್ರಾಹ್ಮ್ಯೈ ನಮಃ |
ಓಂ ಬ್ರಹ್ಮಜ್ಞಾನೈಕಸಾಧನಾಯೈ ನಮಃ |
ಓಂ ಸೌದಾಮಿನ್ಯೈ ನಮಃ |
ಓಂ ಸುಧಾಮೂರ್ತ್ಯೈ ನಮಃ |
ಓಂ ಸುಭದ್ರಾಯೈ ನಮಃ |
ಓಂ ಸುರಪೂಜಿತಾಯೈ ನಮಃ |
ಓಂ ಸುವಾಸಿನ್ಯೈ ನಮಃ | ೬೩

ಓಂ ಸುನಾಸಾಯೈ ನಮಃ |
ಓಂ ವಿನಿದ್ರಾಯೈ ನಮಃ |
ಓಂ ಪದ್ಮಲೋಚನಾಯೈ ನಮಃ |
ಓಂ ವಿದ್ಯಾರೂಪಾಯೈ ನಮಃ |
ಓಂ ವಿಶಾಲಾಕ್ಷ್ಯೈ ನಮಃ |
ಓಂ ಬ್ರಹ್ಮಜಾಯಾಯೈ ನಮಃ |
ಓಂ ಮಹಾಫಲಾಯೈ ನಮಃ |
ಓಂ ತ್ರಯೀಮೂರ್ತ್ಯೈ ನಮಃ |
ಓಂ ತ್ರಿಕಾಲಜ್ಞಾಯೈ ನಮಃ | ೭೨

ಓಂ ತ್ರಿಗುಣಾಯೈ ನಮಃ |
ಓಂ ಶಾಸ್ತ್ರರೂಪಿಣ್ಯೈ ನಮಃ |
ಓಂ ಶುಂಭಾಸುರಪ್ರಮಥಿನ್ಯೈ ನಮಃ |
ಓಂ ಶುಭದಾಯೈ ನಮಃ |
ಓಂ ಸ್ವರಾತ್ಮಿಕಾಯೈ ನಮಃ |
ಓಂ ರಕ್ತಬೀಜನಿಹಂತ್ರ್ಯೈ ನಮಃ |
ಓಂ ಚಾಮುಂಡಾಯೈ ನಮಃ |
ಓಂ ಅಂಬಿಕಾಯೈ ನಮಃ |
ಓಂ ಮುಂಡಕಾಯಪ್ರಹರಣಾಯೈ ನಮಃ | ೮೧

ಓಂ ಧೂಮ್ರಲೋಚನಮರ್ದನಾಯೈ ನಮಃ |
ಓಂ ಸರ್ವದೇವಸ್ತುತಾಯೈ ನಮಃ |
ಓಂ ಸೌಮ್ಯಾಯೈ ನಮಃ |
ಓಂ ಸುರಾಸುರನಮಸ್ಕೃತಾಯೈ ನಮಃ |
ಓಂ ಕಾಳರಾತ್ರ್ಯೈ ನಮಃ |
ಓಂ ಕಳಾಧಾರಾಯೈ ನಮಃ |
ಓಂ ರೂಪಸೌಭಾಗ್ಯದಾಯಿನ್ಯೈ ನಮಃ |
ಓಂ ವಾಗ್ದೇವ್ಯೈ ನಮಃ |
ಓಂ ವರಾರೋಹಾಯೈ ನಮಃ | ೯೦

ಓಂ ವಾರಾಹ್ಯೈ ನಮಃ |
ಓಂ ವಾರಿಜಾಸನಾಯೈ ನಮಃ |
ಓಂ ಚಿತ್ರಾಂಬರಾಯೈ ನಮಃ |
ಓಂ ಚಿತ್ರಗಂಧಾಯೈ ನಮಃ |
ಓಂ ಚಿತ್ರಮಾಲ್ಯವಿಭೂಷಿತಾಯೈ ನಮಃ |
ಓಂ ಕಾಂತಾಯೈ ನಮಃ |
ಓಂ ಕಾಮಪ್ರದಾಯೈ ನಮಃ |
ಓಂ ವಂದ್ಯಾಯೈ ನಮಃ |
ಓಂ ವಿದ್ಯಾಧರಸುಪೂಜಿತಾಯೈ ನಮಃ | ೯೯

ಓಂ ಶ್ವೇತಾನನಾಯೈ ನಮಃ |
ಓಂ ನೀಲಭುಜಾಯೈ ನಮಃ |
ಓಂ ಚತುರ್ವರ್ಗಫಲಪ್ರದಾಯೈ ನಮಃ |
ಓಂ ಚತುರಾನನಸಾಮ್ರಾಜ್ಯಾಯೈ ನಮಃ |
ಓಂ ರಕ್ತಮಧ್ಯಾಯೈ ನಮಃ |
ಓಂ ನಿರಂಜನಾಯೈ ನಮಃ |
ಓಂ ಹಂಸಾಸನಾಯೈ ನಮಃ |
ಓಂ ನೀಲಜಂಘಾಯೈ ನಮಃ |
ಓಂ ಬ್ರಹ್ಮವಿಷ್ಣುಶಿವಾತ್ಮಿಕಾಯೈ ನಮಃ | ೧೦೮‌        ‌       ‌    ‌    ‌    ‌    ‌    ‌     ‌                                                                                                            ಇತಿ ಶ್ರೀ ಸರಸ್ವತೀ ದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಮ್

ನವರಾತ್ರಿ ದಿನ - 6 ಶ್ರೀ ಕಾತ್ಯಾಯಿನಿದೇವಿ ಅಷ್ಟೋತ್ತರ ಶತನಾಮಾವಳಿ

🕉️ ಓಂ ಶ್ರೀ ಗುರುಭ್ಯೋ ನಮಃ 🕉️ 
ll ಶ್ರೀ ಕಾತ್ಯಾಯಿನಿದೇವಿ ಅಷ್ಟೋತ್ತರ ಶತನಾಮಾವಳಿ ll 

ಓಂ ಕಾತ್ಯಾಯನ್ಯೈ ನಮಃ
ಓಂ ಕಾತ್ಯಾಯೈ ನಮಃ
ಓಂ ಕಾರ್ತ್ತಿಕೇಯಾಯೈ ನಮಃ 
ಓಂ ಕಾನ್ತಿಗಮ್ಯಾಯೈ ನಮಃ
ಓಂ ಕಾನ್ತಿಮಯ್ಯೈ ನಮಃ
ಓಂ ಕರ್ತೃಕಾಭೂಷಾಯೈ ನಮಃ
ಓಂ ಕಥಾಯೈ ನಮಃ
ಓಂ ಕಾರ್ತ್ತವೀರ್ಯಾಯೈ ನಮಃ
ಓಂ ಕೇತಕೀಭೂಷಣಾನನ್ದಾಯೈ ನಮಃ
ಓಂ ಕಾರ್ತ್ತಿಕೇಯಪ್ರಪೂಜಿತಾಯೈ ನಮಃ 10

ಓಂ ಕರ್ತ್ರ್ಯೈ ನಮಃ 
ಓಂ ಕರ್ತೃರೂಪಾಯೈ ನಮಃ 
ಓಂ ಕಥಂಬ್ರೂಮಾಯೈ ನಮಃ 
ಓಂ ಕೃತಕೃತ್ಯಾಯೈ ನಮಃ 
ಓಂ ಕಾನ್ತಿಗಮ್ಯಾಯೈ ನಮಃ 
ಓಂ ಕಥಂಕಾರವಿನಿರ್ಮುಕ್ತಾಯೈ ನಮಃ 
ಓಂ ಕರ್ತೃಮಯ್ಯೈ ನಮಃ 
ಓಂ ಕರ್ತ್ತರ್ಯೈ ನಮಃ 
ಓಂ ಕಾಲಿನ್ಯೈ ನಮಃ 
ಓಂ ಕಾರ್ತ್ತಿಕ್ಯೈ ನಮಃ 20

ಓಂ ಕಾರ್ತ್ತಿಕಾರಾಧ್ಯಾಯೈ ನಮಃ 
ಓಂ ಕರ್ತೃಮಾತ್ರೇ ನಮಃ
ಓಂ ಕೇತಕೀಭರಣಾನ್ವಿತಾಯೈ ನಮಃ
ಓಂ ಕೃತ್ಯಾಯೈ ನಮಃ
ಓಂ ಕನಕಾಯೈ ನಮಃ
ಓಂ ಕೀರ್ತ್ಯೈ ನಮಃ 
ಓಂ ಕಾಂಸ್ಯಪಾತ್ರಪ್ರಭೋಜಿನ್ಯೈ ನಮಃ 
ಓಂ ಕಾಂಸ್ಯಧ್ವನಿಮಯ್ಯೈ ನಮಃ
ಓಂ ಕಾಲಚಕ್ರಮನೋಭವಾಯೈ ನಮಃ
ಓಂ ಕಾಂಚೀನೂಪುರಭೂಷಾಢ್ಯಾಯೈ ನಮಃ 30

ಓಂ ಕಾಶಪುಷ್ಪಪ್ರತೀಕಾಶಾಯೈ ನಮಃ 
 ಓಂ ಕಲ್ಪಾನ್ತದಹನಾಯೈ ನಮಃ
ಓಂ ಕಾಲಮಾತ್ರೇ ನಮಃ
ಓಂ ಕಾಲಘೋರಾಯೈ ನಮಃ 
ಓಂ ಕಾಲರತಾಯೈ ನಮಃ 
ಓಂ ಕಾಲಪೂಜ್ಯಾಯೈ ನಮಃ 
ಓಂ ಕಾರ್ಮಣಾಕಾರಾಯೈ ನಮಃ
ಓಂ ಕಾನ್ತಾರಪ್ರಿಯವಾಸಿನ್ಯೈ ನಮಃ 
ಓಂ ಕಾಲವೀರಾಯೈ ನಮಃ
ಓಂ ಕಾಮೇಶೀಪೂಜನೋದ್ಯತಾಯೈ ನಮಃ 40

ಓಂ ಕಾರಣವರಾಯೈ ನಮಃ 
ಓಂ ಕಾಶ್ಯಪ್ಯೈ ನಮಃ 
ಓಂ ಕಾಶ್ಯಪಾರಾಧ್ಯಾಯೈ ನಮಃ 
ಓಂ ಕಾಶ್ಯಪಾನನ್ದದಾಯಿನ್ಯೈ ನಮಃ 
ಓಂ ಕಾಲಾನಲಸಮಪ್ರಭಾಯೈ ನಮಃ 
ಓಂ ಕಾಲಸಿದ್ಧಾಯೈ ನಮಃ 
ಓಂ ಕಾದೇವಪೂಜಾನಿರತಾಯೈ ನಮಃ 
ಓಂ ಕಾರ್ಯಕಾರಿಣ್ಯೈ ನಮಃ 
ಓಂ ಕಾರ್ಮಣಾಯೈ ನಮಃ 
ಓಂ ಕುಂಕುಮಾಭರಣಾನ್ವಿತಾಯೈ ನಮಃ 50

ಓಂ ಕಾಮಕಾರ್ಮಣಕಾರಿಣ್ಯೈ ನಮಃ 
ಓಂ ಕಾಶ್ಮೀರಾಚಾರತತ್ಪರಾಯೈ ನಮಃ 
ಓಂ ಕಾಕಿನ್ಯೈ ನಮಃ 
ಓಂ ಕಾರಣಾಹ್ವನಾಯೈ ನಮಃ 
ಓಂ ಕಾವ್ಯಾಮೃತಾಯೈ ನಮಃ 
ಓಂ ಕಾಲಿಂಗಾಯೈ ನಮಃ 
ಓಂ ಕಾರಣಾನ್ತರಾಯೈ ನಮಃ 
ಓಂ ಕಾಯೈ ನಮಃ 
ಓಂ ಕಮಲಾರ್ಚಿತಾಯೈ ನಮಃ  
ಓಂ ಕಾಲಕಾಲಿಕಾಯೈ ನಮಃ 60

ಓಂ ಕಾಲಾಗುರುಪ್ರತರ್ಪಣಾಯೈ ನಮಃ 
ಓಂ ಕಾರಣದಾಯೈ ನಮಃ 
ಓಂ ಕಾವೇರೀತೀರವಾಸಿನ್ಯೈ ನಮಃ 
ಓಂ ಕಾಲಚಕ್ರಭ್ರಮಾಕಾರಾಯೈ ನಮಃ 
ಓಂ ಕಾಲಚಕ್ರನಿವಾಸಿನ್ಯೈ ನಮಃ 
ಓಂ ಕಾನನಾಯೈ ನಮಃ 
ಓಂ ಕಾನನಾಧಾರಾಯೈ ನಮಃ
ಓಂ ಕಾರ್ವ್ಯೈ ನಮಃ
ಓಂ ಕಾರುಣಿಕಾಮಯ್ಯೈ ನಮಃ 
ಓಂ ಕಾಮ್ಪಿಲ್ಯವಾಸಿನ್ಯೈ ನಮಃ 70

ಓಂ ಕಾಷ್ಠಾಯೈ ನಮಃ 
ಓಂ ಕಾದಿಕಾಯೈ ನಮಃ 
ಓಂ ಕಾಲಚಕ್ರಾಯೈ ನಮಃ  
ಓಂ ಕಾದಮ್ಬರ್ಯ್ಯೈ ನಮಃ 
ಓಂ ಕಲಾಯೈ ನಮಃ 
ಓಂ ಕಾಮವನ್ದ್ಯಾಯೈ ನಮಃ 
ಓಂ ಕಾಮೇಶ್ಯೈ ನಮಃ 
ಓಂ ಕಮಲಾಯೈ ನಮಃ  
ಓಂ ಕಾನ್ತಾಯೈ ನಮಃ
ಓಂ ಕಾದಮ್ಬರೀಪಾನರತಾಯೈ ನಮಃ 80

ಓಂ ಕಾಮಕೌತುಕಸುನ್ದರ್ಯ್ಯೈ ನಮಃ 
ಓಂ ಕಾಮ್ಬೋಜಾಯೈ ನಮಃ 
ಓಂ ಕಾಂಚಿನದಾಯೈ ನಮಃ 
ಓಂ ಕಾಂಸ್ಯಕಾಂಚನಕಾರಿಣ್ಯೈ ನಮಃ 
ಓಂ ಕಾರ್ಯಾಯೈ ನಮಃ 
ಓಂ ಕಾಂಚಭೂಮ್ಯೈ ನಮಃ 
ಓಂ ಕಾಮಕೀರ್ತ್ಯೈ ನಮಃ 
ಓಂ ಕಾಮಕೇಶ್ಯೈ ನಮಃ 
ಓಂ ಕಾರಿಕಾಯೈ ನಮಃ 
ಓಂ ಕಾನ್ತಾರಾಶ್ರಯಾಯೈ ನಮಃ 90

ಓಂ ಕಾಮಭೇದ್ಯೈ ನಮಃ 
ಓಂ ಕಾಮಾರ್ತಿನಾಶಿನ್ಯೈ ನಮಃ 
ಓಂ ಕಾಮಭೂಮಿಕಾಯೈ ನಮಃ 
ಓಂ ಕಾಲನಿರ್ಣಾಶಿನ್ಯೈ ನಮಃ 
ಓಂ ಕಾವ್ಯವನಿತಾಯೈ ನಮಃ 
ಓಂ ಕಾಮರೂಪಿಣ್ಯೈ ನಮಃ 
ಓಂ ಕಾಯಸ್ಥಾಕಾಮಸನ್ದೀಪ್ತ್ಯೈ ನಮಃ 
ಓಂ ಕಾವ್ಯದಾಯೈ ನಮಃ 
ಓಂ ಕಾಲಸುನ್ದರ್ಯೈ ನಮಃ 
ಓಂ ಕರವೀರಪುಷ್ಪಸ್ಥಿತಾಯೈ ನಮಃ 100

ಓಂ ಕಾಲದಾಯೈ ನಮಃ 
ಓಂ ಕಾದಿಮಾತ್ರೇ ನಮಃ 
ಓಂ ಕಾಲಂಜರನಿವಾಸಿನ್ಯೈ ನಮಃ 
ಓಂ ಕಾಲಋದ್ಧ್ಯೈ ನಮಃ 
ಓಂ ಕಾಲವೃದ್ಧ್ಯೈ ನಮಃ 
ಓಂ ಕಾರಾಗೃಹವಿಮೋಚಿನ್ಯೈ ನಮಃ 
ಓಂ ಕಾದಿವಿದ್ಯಾಯೈ ನಮಃ 
ಓಂ ಕಾಲಾಂಜನಸಮಾಕಾರಾಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ  ಶ್ರೀ ಕಾತ್ಯಾಯಿನಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

Wednesday, October 18, 2023

ನವರಾತ್ರಿ ದಿನ -5 ಶ್ರೀ ಸ್ಕಂದಮಾತಾದೇವಿ ಅಷ್ಟೋತ್ತರ ಶತನಾಮಾವಳಿ

🕉️ ಓಂ ಶ್ರೀ ಗುರುಭ್ಯೋ ನಮಃ 🕉️      ‌           ‌             ‌              ‌           ‌         ‌         ‌                                      ‌ ll *ಶ್ರೀ ಸ್ಕಂದಮಾತಾದೇವಿ ಅಷ್ಟೋತ್ತರ ಶತನಾಮಾವಳಿ* ll

ಓಂ ಸ್ಕಂದಮಾತಾಯೈ ನಮಃ
ಓಂ ಸಮಯಾಯೈ ನಮಃ
ಓಂ ಸಮಯಾಚಾರಾಯೈ ನಮಃ
ಓಂ ಸದಸದ್ಗ್ರನ್ಥಿಭೇದಿನ್ಯೈ ನಮಃ
ಓಂ ಸಪ್ತಕೋಟಿಮಹಾಮನ್ತ್ರಮಾತ್ರ್ಯೈ  ನಮಃ
ಓಂ ಸರ್ವಪ್ರದಾಯಿನ್ಯೈ ನಮಃ
ಓಂ ಸಗುಣಾಯೈ ನಮಃ
ಓಂ ಸಂಭ್ರಮಾಯೈ ನಮಃ
ಓಂ ಸಾಕ್ಷಿಣ್ಯೈ ನಮಃ
ಓಂ ಸರ್ವಚೈತನ್ಯರೂಪಿಣ್ಯೈ ನಮಃ 10

ಓಂ ಸಾತ್ವಿಕಾಯೈ ನಮಃ
ಓಂ ಸೌಖ್ಯಾಯೈ ನಮಃ 
ಓಂ ಸರ್ವಕಿಲ್ಬಿಷಹನ್ತ್ರ್ಯೈ ನಮಃ
ಓಂ ಸೂಕ್ಷ್ಮಾಯೈ ನಮಃ 
ಓಂ ಸೂಮಾಯೈ ನಮಃ 
ಓಂ ಸ್ವಧಾಯೈ ನಮಃ 
ಓಂ ಸ್ವಾಹಾಯೈ ನಮಃ 
ಓಂ ಸುಧಾಜಲಾಯೈ  ನಮಃ 
ಓಂ ಸಮುದ್ರರೂಪಿಣ್ಯೈ ನಮಃ 
ಓಂ ಸ್ವರ್ಗ್ಯಾಯೈ ನಮಃ ನಮಃ 20

ಓಂ ಸರ್ವಪಾತಕವೈರಿಣ್ಯೈ ನಮಃ
ಓಂ ಸರ್ವಯಾಗಫಲಪ್ರದಾಯೈ ನಮಃ ಓಂ ಸಕಲಾಯೈ ನಮಃ
ಓಂ ಸತ್ಯಸಂಕಲ್ಪಾಯೈ ನಮಃ
ಓಂ ಸತ್ಯಾಯೈ ನಮಃ
ಓಂ ಸತ್ಯಪ್ರದಾಯಿನ್ಯೈ ನಮಃ
ಓಂ ಸನ್ತೋಷಜನನ್ಯೈ ನಮಃ
ಓಂ ಸಾರಾಯೈ ನಮಃ
ಓಂ ಸತ್ಯಲೋಕನಿವಾಸಿನ್ಯೈ ನಮಃ
ಓಂ ಸಮುದ್ರತನಯಾರಾಧ್ಯಾಯೈ ನಮಃ 30

ಓಂ ಸಾಮಗಾನಪ್ರಿಯಾಯೈ ನಮಃ
ಓಂ ಸರ್ವಮನ್ತ್ರಮಯ್ಯೈ ನಮಃ
ಓಂ ಸುದತ್ಯೈ ನಮಃ
ಓಂ ಸತ್ಯಸಂಗಾಯೈ ನಮಃ
ಓಂ ಸತ್ಯಸಂಕೇತವಾಸಿನ್ಯೈ ನಮಃ
ಓಂ ಸತ್ಯದೇಹಾಯೈ ನಮಃ
ಓಂ ಸತ್ಯಹಾರಾಯೈ ನಮಃ
ಓಂ ಸತ್ಯವಾದಿನಿವಾಸಿನ್ಯೈ ನಮಃ
ಓಂ ಸತ್ಯಾಲಯಾಯೈ ನಮಃ
ಓಂ ಸ್ಮೃತಾಘಹಾರಿಣ್ಯೈ ನಮಃ  40

ಓಂ ಸಂಸಾರಾಬ್ಧಿತರಂಡಿಕಾಯೈ ನಮಃ 
ಓಂ ಸೌಭಾಗ್ಯಸುನ್ದರ್ಯೈ ನಮಃ 
ಓಂ ಸನ್ಧ್ಯಾಯೈ ನಮಃ 
ಓಂ ಸರ್ವಸಾರಸಮನ್ವಿತಾಯೈ ನಮಃ 
ಓಂ ಸಕಾರರೂಪಾಯೈ ನಮಃ
ಓಂ ಸಾವಿತ್ರ್ಯೈ ನಮಃ
ಓಂ ಸರ್ವರೂಪಾಯೈ ನಮಃ
ಓಂ ಸನಾತನ್ಯೈ ನಮಃ
ಓಂ ಸಂಸಾರದುಃಖಶಮನ್ಯೈ ನಮಃ
ಓಂ ಸುಷುಮ್ನಾಯೈ ನಮಃ 50

ಓಂ ಸ್ವರಭಾಸಿನ್ಯೈ ನಮಃ
ಓಂ ಸಹಸ್ರದಲಮಧ್ಯಸ್ಥಾಯೈ ನಮಃ
ಓಂ ಸಹಸ್ರದಲವರ್ತಿನ್ಯೈ ನಮಃ
ಓಂ ಸರ್ವೇಶ್ವರ್ಯೈ ನಮಃ
ಓಂ ಸರ್ವದಾತ್ರ್ಯೈ ನಮಃ
ಓಂ ಸರ್ವಮಾತ್ರ್ಯೈ  ನಮಃ
ಓಂ ಸರ್ವಸಿದ್ಧಿಪ್ರವರ್ತಿನ್ಯೈ ನಮಃ
ಓಂ ಸರ್ವಾಧಾರಮಯ್ಯೈ ನಮಃ
ಓಂ ಸರ್ವಸಮ್ಪತ್ಪ್ರದಾಯೈ ನಮಃ
ಓಂ ಸರ್ವರಕ್ಷಾಸ್ವರೂಪಿಣ್ಯೈ ನಮಃ 60

ಓಂ ಸರ್ವದುಷ್ಟಪ್ರಶಮನ್ಯೈ ನಮಃ
ಓಂ ಸರ್ವೇಪ್ಸಿತಫಲಪ್ರದಾಯೈ ನಮಃ
ಓಂ ಸರ್ವಸಿದ್ಧೇಶ್ವರಾರಾಧ್ಯಾಯೈ ನಮಃ 
ಓಂ ಸರಿದ್ವರಾಯೈ ನಮಃ
ಓಂ ಸರ್ವಮಂಗಲಮಂಗಲಾಯೈ ನಮಃ
ಓಂ ಸುರಸಾಯೈ ನಮಃ 
ಓಂ ಸುಪ್ರಭಾಯೈ ನಮಃ 
ಓಂ ಸರ್ವದುಃಖಘ್ನ್ಯೈ ನಮಃ
ಓಂ ಸಾಧ್ವ್ಯೈ ನಮಃ
ಓಂ ಸಚ್ಚಿದಾನನ್ದಸ್ವರೂಪಿಣ್ಯೈ ನಮಃ 70

ಓಂ ಸಂಕಲ್ಪರೂಪಿಣ್ಯೈ ನಮಃ
ಓಂ ಸನ್ಧ್ಯಾಯೈ ನಮಃ
ಓಂ ಸಾಲಗ್ರಾಮನಿವಾಸಿನ್ಯೈ ನಮಃ
ಓಂ ಸರ್ವೋಪಾಧಿವಿನಿರ್ಮುಕ್ತಾಯೈ ನಮಃ
ಓಂ ಸರ್ವಾರ್ಥಸಾಧನಕರ್ಯೈ ನಮಃ
ಓಂ ಸರ್ವಸಿದ್ಧಿ ಸ್ವರೂಪಿಣ್ಯೈ ನಮಃ
ಓಂ ಸರ್ವಕ್ಷೋಭಣಶಕ್ತ್ಯೈ ನಮಃ
ಓಂ ಸರ್ವವಿದ್ರಾವಿಣ್ಯೈ ನಮಃ
ಓಂ ಸುಕುಲ್ಲಕಾಯೈ ನಮಃ
ಓಂ ಸಮಾನ್ಯೈ ನಮಃ 80

ಓಂ ಸಾಮದೇವ್ಯೈ ನಮಃ
ಓಂ ಸಮಸ್ತಸುರಸೇವಿತಾಯೈ ನಮಃ
ಓಂ ಸರ್ವಸಮ್ಪತ್ತಿಜನನ್ಯೈ ನಮಃ
ಓಂ ಸದ್ಗುಣಾಯೈ ನಮಃ
ಓಂ ಸಕಲೇಷ್ಟದಾಯೈ ನಮಃ
ಓಂ ಸನಕಾದಿಮುನಿಧ್ಯೇಯಾಯೈ ನಮಃ ಓಂ ಸಮಾನಾಧಿಕವರ್ಜಿತಾಯೈ ನಮಃ
ಓಂ ಸಾಧ್ಯಾಯೈ ನಮಃ
ಓಂ ಸರ್ವವ್ಯಾಧಿಮಹೌಷಧಾಯೈ  ನಮಃ
ಓಂ ಸೇವ್ಯಾಯೈ ನಮಃ 90

ಓಂ ಸತ್ಯೈ ನಮಃ 
ಓಂ ಸೂಕ್ತಯೈ  ನಮಃ 
ಓಂ ಸ್ಕನ್ದಸುವ್ಯೈ  ನಮಃ 
ಓಂ ಸಮ್ಪತ್ತರಂಗಿಣ್ಯೈ ನಮಃ 
ಓಂ ಸ್ತುತ್ಯಾಯೈ ನಮಃ  
ಓಂ ಸ್ಥಾಣುಮೌಲಿಕೃತಾಲಯಾಯೈ ನಮಃ 
ಓಂ ಸ್ಥೈರ್ಯದಾಯೈ ನಮಃ 
ಓಂ ಸುಭಗಾಯೈ ನಮಃ
ಓಂ ಸುಧಾವಾಸಾಯೈ ನಮಃ
ಓಂ ಸಾಧ್ಯಪ್ರದಾಯಿನ್ಯೈ ನಮಃ 100

ಓಂ ಸದ್ಯುಗಾರಾಧ್ಯನಿಲಯಾಯೈ ನಮಃ ಓಂ ಸಮುತ್ತಿರ್ಣಾಯೈ ನಮಃ
ಓಂ ಸದಾಶಿವಾಯೈ ನಮಃ
ಓಂ ಸರ್ವವೇದಾನ್ತನಿಲಯಾಯೈ ನಮಃ
ಓಂ ಸರ್ವಶಾಸ್ತ್ರರ್ಥಗೋಚರಾಯೈ ನಮಃ ಓಂ ಸಹಸ್ರದಲಪದ್ಮಸ್ಥಾಯೈ ನಮಃ
ಓಂ ಸರ್ವಜ್ಞಾಯೈ ನಮಃ
ಓಂ ಸರ್ವತೋಮುಖ್ಯೈ ನಮಃ 108

ll ಇತಿ ಶ್ರೀ ಸ್ಕಂದಮಾತಾದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

Tuesday, October 17, 2023

ನವರಾತ್ರಿ ದಿನ - 4 ಶ್ರೀ ಕೂಶ್ಮಾಂಡಿನಿದೇವಿ ಅಷ್ಟೋತ್ತರ ಶತನಾಮಾವಳಿ

🕉️ ಓಂ ಶ್ರೀ ಗುರುಭ್ಯೋ ನಮಃ 🕉️‌    ‌     ‌            ‌                               ‌‌          ‌                                                                           
ll *ಶ್ರೀ ಕೂಶ್ಮಾಂಡಿನಿದೇವಿ ಅಷ್ಟೋತ್ತರ ಶತನಾಮಾವಳಿ* ll

ಓಂ ಕೂಶ್ಮಾಂಡಿನಿದೇವ್ಯೈ ನಮಃ
ಓಂ ಕುಶರತಾಯೈ ನಮಃ
ಓಂ ಕುಶೇಶಯವಿಲೋಚನಾಯೈ ನಮಃ
ಓಂ ಕೋಶಲಾಯೈ ನಮಃ
ಓಂ ಕೇಶವಪ್ರಿಯಾಯೈ ನಮಃ
ಓಂ ಕಾಶ್ಮೀರಲಿಪ್ತವಕ್ಷೋಜಾಯೈ ನಮಃ
ಓಂ ಕಶ್ಯಪಾನ್ವಯವರ್ಧಿನ್ಯೈ ನಮಃ
ಓಂ ಕುಶಾವರ್ತ್ತಾಯೈ ನಮಃ
ಓಂ ಕ್ಲೇಶನಾಶಿನ್ಯೈ ನಮಃ
ಓಂ ಕೌಶಿಕಾಗಾರವಾಸಿನ್ಯೈ ನಮಃ 10

ಓಂ ಕುರರ್ಯ್ಯೈ ನಮಃ
ಓಂ ಕುಲಪೂಜ್ಯಾಯೈ ನಮಃ
ಓಂ ಕುಲಾರಾಧ್ಯಾಯೈ ನಮಃ
ಓಂ ಕುಶಲಾಕೃತಿರೂಪಾಯೈ ನಮಃ
ಓಂ ಕುಲಭೂಷಾಯೈ ನಮಃ
ಓಂ ಕುಕ್ಷ್ಯೈ ನಮಃ
ಓಂ ಕುರರೀಗಣಸೇವಿತಾಯೈ ನಮಃ
ಓಂ ಕುಲಪುಷ್ಪಾಯೈ ನಮಃ
ಓಂ ಕುಲರತಾಯೈ ನಮಃ
ಓಂ ಕುಲಪುಷ್ಪಪರಾಯಣಾಯೈ ನಮಃ 20

ಓಂ ಕುಲವಸ್ತ್ರಾಯೈ ನಮಃ
ಓಂ ಕುಮಾರೀಪೂಜನೋದ್ಯತಾಯೈ ನಮಃ
ಓಂ ಕೇಶವಾಸಕ್ತಮಾನಸಾಯೈ ನಮಃ
ಓಂ ಕೃಶಾನುತಪನದ್ಯುತಯೇ ನಮಃ
ಓಂ ಕುಮಾರ್ಯೈ ನಮಃ
ಓಂ ಕಾಮಸನ್ತುಷ್ಟಾಯೈ ನಮಃ
ಓಂ ಕ್ಲೇಶಸಂಘವಿನಾಶಿನ್ಯೈನಮಃ
ಓಂ ಕೌಶಿಕ್ಯೈ ನಮಃ
ಓಂ ಕುಮಾರೀರೂಪಧಾರಿಣ್ಯೈ ನಮಃ
ಓಂ ಕೇಶೀಸೂದನತತ್ಪರಾಯೈ ನಮಃ 30

ಓಂ ಕುಮಾರ್ಯೈ ನಮಃ
ಓಂ ಕುಠಾರವರಧಾರಿಣ್ಯೈ ನಮಃ
ಓಂ ಕೋವಿದನುತಾಯೈ ನಮಃ
ಓಂ ಕೋಮಲಾಯೈ ನಮಃ
ಓಂ ಕೋಕಿಲಸ್ವನಾಯೈ ನಮಃ
ಓಂ ಕುಂಕುಮಾಭರಣಾನ್ವಿತಾಯೈ ನಮಃ ಓಂ ಕಾಲಚಕ್ರಾಯೈ ನಮಃ
ಓಂ ಕಾಲಗತ್ಯೈ ನಮಃ
ಓಂ ಕಾಲಚಕ್ರಮನೋಭವಾಯೈ ನಮಃ ಓಂ ಕುನ್ದಮಧ್ಯಾಯೈ ನಮಃ  40

ಓಂ ಕುನ್ದಪುಷ್ಪಾಯೈ ನಮಃ
ಓಂ ಕುಲಕಾನ್ತಾಯೈ ನಮಃ
ಓಂ ಕುಲಮಾರ್ಗಪರಾಯಣಾಯೈ ನಮಃ                                       ಓಂ ಕುಲ್ಲಾಯೈ ನಮಃ
ಓಂ ಕುರುಕುಲ್ಲಾಯೈ ನಮಃ
ಓಂ ಕುಲ್ಲುಕಾಯೈ ನಮಃ
ಓಂ ಕುಲಕಾಮದಾಯೈ ನಮಃ
ಓಂ ಕುಂಕುಮಾರುಣವಿಗ್ರಹಾಯೈ ನಮಃ                                           ಓಂ ಕುಂಕುಮಾನನ್ದಸನ್ತೋಷಾಯೈ ನಮಃ
ಓಂ ಕ್ರುದ್ಧಾಯೈ ನಮಃ 50

ಓಂ ಕುರಂಗ್ಯೈ ನಮಃ
ಓಂ ಕುಟಜಾಶ್ರಯಾಯೈ ನಮಃ
ಓಂ ಕುಮ್ಭೀನಸವಿಭೂಷಾಯೈ ನಮಃ
ಓಂ ಕಾಶ್ಮೀರದ್ರವಚರ್ಚಿತಾಯೈ ನಮಃ
ಓಂ ಕ್ಲೇಶರಹಿತಾಯೈ ನಮಃ
ಓಂ ಕುಲಚೂಡಾಮಣ್ಯೈ ನಮಃ
ಓಂ ಕುಲಾಯೈ ನಮಃ
ಓಂ ಕುಲಾಲಗೃಹಕನ್ಯಾಯೈ ನಮಃ
ಓಂ ಕೃಶಾನವ್ಯೈ ನಮಃ
ಓಂ ಕುಲಾರಾಧ್ಯಾಯೈ ನಮಃ 60

ಓಂ ಕುಶಾವರ್ತನಿವಾಸಾಯೈ ನಮಃ
ಓಂ ಕುಲಕುಂಡಸಮೋಲ್ಲಾಸಾಯೈ ನಮಃ                                      ಓಂ ಕುಂಡಪುಷ್ಪಪರಾಯಣಾಯೈ ನಮಃ                                                               ಓಂ ಕೋಶಲಾಕ್ಷ್ಯೈ ನಮಃ
ಓಂ ಕುಶಾವತ್ಯೈ ನಮಃ
ಓಂ ಕುಂಡಗೋಲೋದ್ಭವಾಧಾರಾಯೈ ನಮಃ
ಓಂ ಕೌಶಿಕಪ್ರೀತಾಯೈ ನಮಃ
ಓಂ ಕೇಶವಾನನ್ದಕಾರಿಣ್ಯೈ ನಮಃ
ಓಂ ಕುಂಡಗೋಲಪ್ರಪೂಜಿತಾಯೈ ನಮಃ                                                                 ಓಂ ಕುಹ್ವ್ಯೈ ನಮಃ 70

ಓಂ ಕೌಶಾಮ್ಭ್ಯೈ ನಮಃ
ಓಂ ಕೇಶವಾರಾಧ್ಯಹೃದಯಾಯೈ ನಮಃ
ಓಂ ಕುಂಡದೇವರತಾಯೈ ನಮಃ
ಓಂ ಕುಲಚಕ್ರಪರಾಯಣಾಯೈ ನಮಃ
ಓಂ ಕಾಶ್ಯಪ್ಯೈ ನಮಃ
ಓಂ ಕುಲಕುಂಡಸಮಾಕಾರಾಯೈ ನಮಃ
ಓಂ ಕೇಶಿದೈತ್ಯನಿಷೂದಿನ್ಯೈ ನಮಃ
ಓಂ ಕುಂಡಸಿದ್ಧ್ಯೈ ನಮಃ
ಓಂ ಕುಂಡಋದ್ಧ್ಯೈ ನಮಃ
ಓಂ ಕುಮಾರದಾಯೈ ನಮಃ 80

ಓಂ ಕಾಶ್ಯೈ ನಮಃ
ಓಂ ಕುಲದಾಯೈ ನಮಃ
ಓಂ ಕೋಶಾಯೈ ನಮಃ
ಓಂ ಕುಲೇಶ್ವರ್ಯೈ ನಮಃ
ಓಂ ಕುಲಲಿಂಗಾಯೈ ನಮಃ
ಓಂ ಕುಲಾನನ್ದಾಯೈ ನಮಃ
ಓಂ ಕುಲರಮ್ಯಾಯೈ ನಮಃ
ಓಂ ಕುತರ್ಕಧೃಷೇ ನಮಃ
ಓಂ ಕುಲಿಶಾಂಗ್ಯೈ ನಮಃ
ಓಂ ಕೃಶಾಂಗ್ಯೈ ನಮಃ 90

ಓಂ ಕೋಶಲಾಕ್ಷ್ಯೈ ನಮಃ
ಓಂ ಕೋಶಾಯೈ ನಮಃ
ಓಂ ಕೋಮಲಾಯೈ ನಮಃ
ಓಂ ಕೋಟಿರೂಪಾಯೈ ನಮಃ
ಓಂ ಕೋಟಿರತಾಯೈ ನಮಃ
ಓಂ ಕ್ರೋಧಿನ್ಯೈ ನಮಃ
ಓಂ ಕೋಕಿಲಾಯೈ ನಮಃ
ಓಂ ಕೋಟ್ಯೈ ನಮಃ
ಓಂ ಕೋಟಿಮನ್ತ್ರಪರಾಯಣಾಯೈ ನಮಃ                                            
 ಓಂ ಕ್ರೋಧರೂಪಿಣ್ಯೈ ನಮಃ 100

ಓಂ ಕ್ಲೇಶಹಾಯೈ ನಮಃ
ಓಂ ಕ್ರೋಧರೂಪಾಯೈ ನಮಃ
ಓಂ ಕ್ರೋಧಪದಾಯೈ ನಮಃ
ಓಂ ಕ್ರೋಧಮಾತ್ರೇ ನಮಃ
ಓಂ ಕೋದಂಡಧಾರಿಣ್ಯೈ ನಮಃ
ಓಂ ಕಶ್ಯಪಾರ್ಚಿತಾಯೈ ನಮಃ
ಓಂ ಕುಶಾವರ್ತ್ತಾಯೈ ನಮಃ
ಓಂ ಕ್ರೋಧಜ್ವಾಲಾಭಾಸುರರೂಪಿಣ್ಯೈ ನಮಃ  108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ವಿರಚಿತ ಶ್ರೀ ಕೂಶ್ಮಾಂಡಿನಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

Monday, October 16, 2023

ನವರಾತ್ರಿ ದಿನ 2 - ಶ್ರೀ ಬ್ರಹ್ಮಚಾರಿಣಿ ದೇವಿ ಅಷ್ಟೋತ್ತರ ಶತನಾಮಾವಳಿ

🕉️ ಓಂ ಶ್ರೀ ಗುರುಭ್ಯೋ ನಮಃ 🕉️‌      ‌                                                          ‌ 
ll *ಶ್ರೀ ಬ್ರಹ್ಮಚಾರಿಣಿ ದೇವಿ ಅಷ್ಟೋತ್ತರ ಶತನಾಮಾವಳಿ* ll

ಓಂ ಬ್ರಹ್ಮಚರ್ಯಾಶ್ರಮಪರಾಯೈ ನಮಃ
ಓಂ ಬ್ರಹ್ಮವಿದ್ಯಾತರಂಗಿಣ್ಯೈ ನಮಃ
ಓಂ ಬ್ರಹ್ಮಾಂಡಕೋಟಿವ್ಯಾಪ್ತಾಮ್ಬ್ವೈ ನಮಃ
ಓಂ ಬ್ರಹ್ಮಹತ್ಯಾಪಹಾರಿಣ್ಯೈ ನಮಃ
ಓಂ ಬ್ರಹ್ಮೇಶವಿಷ್ಣುರೂಪಾಯೈ ನಮಃ
ಓಂ ಬಾಲಪೀಯೂಷರೋಚಿಷಾಯೈ ನಮಃ
ಓಂ ಬ್ರಹ್ಮವಿದ್ಯಾಯೈ ನಮಃ
ಓಂ ಬ್ರಹ್ಮಮಾತ್ರ್ಯೈ ನಮಃ
ಓಂ ಬ್ರಹ್ಮೇಶ್ಯೈ ನಮಃ
ಓಂ ಬ್ರಹ್ಮಕೈವಲ್ಯಬಗಲಾಯೈ ನಮಃ 10

ಓಂ ಬ್ರಹ್ಮಚಾರಿಣ್ಯೈ ನಮಃ
ಓಂ ಬ್ರಹ್ಮಸ್ಥಿತಾಯೈ ನಮಃ
ಓಂ ಬ್ರಹ್ಮರೂಪಾಯೈ ನಮಃ
ಓಂ ಬ್ರಹ್ಮಣಾವೇದವನ್ದಿತಾಯೈ ನಮಃ                                 
 ಓಂ ಬ್ರಹ್ಮೋದ್ಭವಾಯೈ ನಮಃ
ಓಂ ಬ್ರಹ್ಮಕಲಾಯೈ ನಮಃ
ಓಂ ಬ್ರಹ್ಮಾಣ್ಯೈ ನಮಃ
ಓಂ ಬ್ರಹ್ಮಬೋಧಿನ್ಯೈ ನಮಃ
ಓಂ ಬ್ರಹ್ಮಕರ್ಮಪರಾಯಣಾಯೈ ನಮಃ
ಓಂ ಬೃಹತ್ತುಂಡಾಯೈ ನಮಃ 20

ಓಂ ಬ್ರಹ್ಮಾದಿಸುರವನ್ದ್ಯಾಯೈ ನಮಃ
ಓಂ ಬ್ರಹ್ಮಾದಿಜನನ್ಯೈ ನಮಃ
ಓಂ ಬ್ರಹ್ಮರನ್ಧ್ರಾಯೈ ನಮಃ
ಓಂ ಬ್ರಹ್ಮಯಜ್ಞಾಯೈ ನಮಃ
ಓಂ ಬ್ರಹ್ಮಶೀರ್ಷಾಯೈ ನಮಃ
ಓಂ ಬ್ರಹ್ಮವಾದಿನ್ಯೈ ನಮಃ
ಓಂ ಬ್ರಹ್ಮಣ್ಯೈ ನಮಃ
ಓಂ ಬ್ರಹ್ಮಯಜ್ಞಿನ್ಯೈ ನಮಃ
ಓಂ ಬೃಹತ್ಸಾಮಸ್ತುತಾಯೈ ನಮಃ
ಓಂ ಬ್ರಹ್ಮಮಾಯಾಯೈ ನಮಃ 30

ಓಂ ಬ್ರಹ್ಮರ್ಷಿಪೂಜಿತಾಯೈ ನಮಃ
ಓಂ ಬನ್ಧೂಕಸುಮನೋರಾಗಾಯೈ ನಮಃ                                    ಓಂ ಬಾದರಾಯಣದೇಶಿಕಾಯೈ ನಮಃ                                           ಓಂ ಬಾಲಾಮ್ಬಾಯೈ ನಮಃ
ಓಂ ಬಾಣಕುಸುಮಾಯೈ ನಮಃ
ಓಂ ಬಗಲಾಮುಖಿರೂಪಿಣ್ಯೈ ನಮಃ
ಓಂ ಬಿನ್ದುಚಕ್ರಸ್ಥಿತಾಯೈ ನಮಃ
ಓಂ ಬಿನ್ದುತರ್ಪಣಪ್ರೀತಮಾನಸಾಯೈ ನಮಃ
ಓಂ ಬೃಹದೈಶ್ವರ್ಯದಾಯೈ ನಮಃ
ಓಂ ಬನ್ಧಹೀನಾಯೈ ನಮಃ 40

ಓಂ ಬುಧಸಮರ್ಚಿತಾಯೈ ನಮಃ
ಓಂ ಬ್ರಹ್ಮಚಾಮುಂಡಿಕಾಯೈ ನಮಃ
ಓಂ ಬ್ರಹ್ಮಜನನ್ಯೈ ನಮಃ
ಓಂ ಬ್ರಾಹ್ಮಣಪ್ರಿಯಾಯೈ ನಮಃ
ಓಂ ಬ್ರಹ್ಮಜ್ಞಾನಪ್ರದಾಯೈ ನಮಃ
ಓಂ ಬ್ರಹ್ಮವಿದ್ಯಾಯೈ ನಮಃ
ಓಂ ಬ್ರಹ್ಮಾಂಡನಾಯಿಕಾಯೈ ನಮಃ
ಓಂ ಬ್ರಹ್ಮತಾಲಪ್ರಿಯಾಯೈ ನಮಃ
ಓಂ ಬ್ರಹ್ಮಪಂಚಮಂಚಕಶಾಯಿನ್ಯೈ ನಮಃ ಓಂ ಬ್ರಹ್ಮಾದಿವಿನುತಾಯೈ ನಮಃ 50

ಓಂ ಬ್ರಹ್ಮಸಹೋದರ್ಯೈ ನಮಃ
ಓಂ ಬ್ರಹ್ಮಪುರಸ್ಥಿತಾಯೈ ನಮಃ
ಓಂ ಬ್ರಾಹ್ಮ್ಯೈ ನಮಃ
ಓಂ ಬ್ರಾಹ್ಮಣದೇವತಾಯೈ ನಮಃ
ಓಂ ಬ್ರಹ್ಮಾಂಡಬಹಿರನ್ತಸ್ಥಾಯೈ ನಮಃ  ಓಂ ಬ್ರಹ್ಮಕಂಕಣಸೂತ್ರಿಣ್ಯೈ ನಮಃ
ಓಂ ಬೃಂಹಣ್ಯೈ ನಮಃ
ಓಂ ಬ್ರಹ್ಮವಾದಿನ್ಯೈ ನಮಃ
ಓಂ ಬ್ರಹ್ಮಮಯ್ಯೈ ನಮಃ
ಓಂ ಬ್ರಾಹ್ಮ್ಯೈ ನಮಃ 60

ಓಂ ಬ್ರಹ್ಮಾನನ್ದಪ್ರದಾಯಿನ್ಯೈ ನಮಃ
ಓಂ ಬ್ರಹ್ಮವಿಷ್ಣುಶಿವಾತ್ಮಿಕಾಯೈ ನಮಃ
ಓಂ ಬ್ರಧ್ನತನಯಾಯೈ ನಮಃ
ಓಂ ಬಲೋನ್ಮೂಲಿತಕಲ್ಮಷಾಯೈ ನಮಃ
ಓಂ ಬಲೋದ್ಧತಾಯೈ ನಮಃ
ಓಂ ಬಹುವಿಘ್ನವಿನಾಶಕೃತೇ ನಮಃ
ಓಂ ಬಾಲಬಾಲಾಯೈ ನಮಃ
ಓಂ ಬಹುಮತಾಯೈ ನಮಃ
ಓಂ ಬಾಹುಯುಗಲಾಯೈ ನಮಃ
ಓಂ ಬಾಹುಪಂಕಜಾಯೈ ನಮಃ 70

ಓಂ ಬಾಲಾತಪನೀಭಾಂಶುಕಾಯೈ ನಮಃ ಓಂ ಬಲಭದ್ರಪ್ರಿಯಾಯೈ ನಮಃ
ಓಂ ಬಾಲಪ್ರದಾಯಿನ್ಯೈ ನಮಃ
ಓಂ ಬುದ್ಧಿಸಂಸ್ತುತಾಯೈ ನಮಃ
ಓಂ ಬನ್ದೀದೇವ್ಯೈ ನಮಃ
ಓಂ ಬಿಲವತ್ಯೈ ನಮಃ
ಓಂ ಬಡಿಶಘಿನ್ಯೈ ನಮಃ
ಓಂ ಬಲಿಪ್ರಿಯಾಯೈ ನಮಃ
ಓಂ ಬಾನ್ಧವ್ಯೈ ನಮಃ
ಓಂ ಬೋಧಿತಾಯೈ ನಮಃ 80

ಓಂ ಬುದ್ಧಿಬನ್ಧುಕಕುಸುಮಪ್ರಿಯಾಯೈ ನಮಃ
ಓಂ ಬಾಲಭಾನುಪ್ರಭಾಕರಾಯೈ ನಮಃ 
ಓಂ ಬೃಹಸ್ಪತಿಸ್ತುತಾಯೈ ನಮಃ
ಓಂ ಬೃನ್ದಾಯೈ ನಮಃ
ಓಂ ಬೃನ್ದಾವನವಿಹಾರಿಣ್ಯೈ ನಮಃ
ಓಂ ಬಾಲಾಕಿನ್ಯೈ ನಮಃ
ಓಂ ಬಿಲಾಹಾರಾಯೈ ನಮಃ
ಓಂ ಬಿಲವಸಾಯೈ ನಮಃ
ಓಂ ಬಹುದಕಾಯೈ ನಮಃ
ಓಂ ಬಹುನೇತ್ರಾಯೈ ನಮಃ 90

ಓಂ ಬಹುಪದಾಯೈ ನಮಃ
ಓಂ ಬಹುಕರ್ಣಾವತಂಸಿಕಾಯೈ ನಮಃ
ಓಂ ಬಹುಬಾಹುಯುತಾಯೈ ನಮಃ
ಓಂ ಬೀಜರೂಪಿಣ್ಯೈ ನಮಃ
ಓಂ ಬಹುರೂಪಿಣ್ಯೈ ನಮಃ
ಓಂ ಬಿನ್ದುನಾದಕಲಾತೀತಾಯೈ ನಮಃ
ಓಂ ಬಿನ್ದುನಾದಸ್ವರೂಪಿಣ್ಯೈ ನಮಃ
ಓಂ ಬದ್ಧಗೋಧಾಂಗುಲಿಪ್ರಾಣಾಯೈ ನಮಃ
ಓಂ ಬದರ್ಯಾಶ್ರಮವಾಸಿನ್ಯೈ ನಮಃ
ಓಂ ಬೃನ್ದಾರಕಾಯೈ ನಮಃ 100

ಓಂ ಬೃಹತ್ಸ್ಕನ್ಧಾಯೈ ನಮಃ
ಓಂ ಬೃಹತ್ಯೈ ನಮಃ
ಓಂ ಬಾಣಪಾತಿನ್ಯೈ ನಮಃ
ಓಂ ಬೃನ್ದಾಧ್ಯಕ್ಷಾಯೈ ನಮಃ
ಓಂ ಬಹುನುತಾಯೈ ನಮಃ
ಓಂ ಬಹುವಿಕ್ರಮಾಯೈ ನಮಃ
ಓಂ ಬದ್ಧಪದ್ಮಾಸನಾಸೀನಾಯೈ ನಮಃ
ಓಂ ಬಿಲ್ವಪತ್ರತಲಸ್ಥಿತಾಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ವಿರಚಿತ ಶ್ರೀ ಬ್ರಹ್ಮಚಾರಿಣಿ ದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

ನವರಾತ್ರಿ ದಿನ 3 - ಶ್ರೀ ಚಂದ್ರಘಂಟಾದೇವಿ ಅಷ್ಟೋತ್ತರ ಶತನಾಮಾವಳಿ

🕉️ ಓಂ ಶ್ರೀ ಗುರುಭ್ಯೋ ನಮಃ 🕉️‌        ‌‌                                                      ‌ 
ll *ಶ್ರೀ ಚಂದ್ರಘಂಟಾದೇವಿ ಅಷ್ಟೋತ್ತರ ಶತನಾಮಾವಳಿ* ll

ಓಂ ಚನ್ದ್ರಶೇಖರಾಯೈ ನಮಃ
ಓಂ ಚನ್ದ್ರಶೇಖರವಲ್ಲಭಾಯೈ ನಮಃ
ಓಂ ಚನ್ದ್ರಮಂಡಲಮಧ್ಯಸ್ಥಾಯೈ ನಮಃ 
ಓಂ ಚನ್ದ್ರಕೋಟಿಸುಶೀಲತಾಯೈ ನಮಃ
ಓಂ ಚನ್ದ್ರಕಾನ್ತ್ಯೈ ನಮಃ
ಓಂ ಚನ್ದ್ರಕೋಟಿನಿಭಾನನಾಯೈ ನಮಃ
ಓಂ ಚನ್ದ್ರಭಗಿನ್ಯೈ ನಮಃ
ಓಂ ಚನ್ದ್ರಮಃಕರ್ಣಕುಂಡಲಾಯೈ ನಮಃ 
ಓಂ ಚನ್ದ್ರಹಾಸಾಯೈ ನಮಃ
ಓಂ ಚನ್ದ್ರಹಾಸಿನ್ಯೈ ನಮಃ 10

ಓಂ ಚನ್ದ್ರಿಕಾಯೈ ನಮಃ
ಓಂ ಚನ್ದ್ರಧಾತ್ರ್ಯೈ ನಮಃ
ಓಂ ಚನ್ದವತ್ಯೈ ನಮಃ
ಓಂ ಚನ್ದ್ರಮಾಯೈ ನಮಃ
ಓಂ ಚನ್ದನಪ್ರಿಯಾಯೈ ನಮಃ
ಓಂ ಚನ್ದ್ರಮಂಡಲಮಧ್ಯಸ್ಥಾಯೈ ನಮಃ 
ಓಂ ಚನ್ದ್ರಮಂಡಲದರ್ಪಣಾಯೈ ನಮಃ
ಓಂ ಚನ್ದ್ರಚೂಡಾಯೈ ನಮಃ
ಓಂ ಚನ್ದ್ರರೂಪಿಣ್ಯೈ ನಮಃ
ಓಂ ಚಾಮುಂಡಾಯೈ ನಮಃ 20

ಓಂ ಚಂಡಮುಂಡವಧೋದ್ಯತಾಯೈ ನಮಃ
ಓಂ ಚೈತನ್ಯಭೈರವ್ಯೈ ನಮಃ
ಓಂ ಚಂಡಾಯೈ ನಮಃ
ಓಂ ಚೈತನ್ಯಘನಗೇಹಿನ್ಯೈ ನಮಃ
ಓಂ ಚಂಡಿಕಾಯೈ ನಮಃ
ಓಂ ಚಂಡದೈತ್ಯಘನ್ಯೈ ನಮಃ
ಓಂ ಚಾಂಡಾಲಿನ್ಯೈ ನಮಃ
ಓಂ ಚಿತ್ತಜ್ಞಾಯೈ ನಮಃ
ಓಂ ಚಿನ್ತಿತಪದಾಯೈ ನಮಃ
ಓಂ ಚಿತ್ತಸ್ಥಾಯೈ ನಮಃ 30

ಓಂ ಚಿತ್ತರೂಪಿಣ್ಯೈ ನಮಃ
ಓಂ ಚಕ್ರಿಣ್ಯೈ ನಮಃ
ಓಂ ಚಾರುಚಮ್ಪಾಭಾಯೈ ನಮಃ
ಓಂ ಚಾರುಚಮ್ಪಕಮಾಲಿನ್ಯೈ ನಮಃ
ಓಂ ಚನ್ದ್ರಿಕಾಯೈ ನಮಃ
ಓಂ ಚಾಪಿನ್ಯೈ ನಮಃ
ಓಂ ಚಿತ್ಸ್ವರೂಪಾಯೈ ನಮಃ
ಓಂ ಚಿದಾಧಾರಾಯೈ ನಮಃ
ಓಂ ಚಂಡವೇಗಾಯೈ ನಮಃ
ಓಂ ಚಿದಾಲಯಾಯೈ ನಮಃ 40

ಓಂ ಚಪಲಾಯೈ ನಮಃ
ಓಂ ಚಿನ್ತಾಮಣಿಗುಣಾಧಾರಾಯೈ ನಮಃ
ಓಂ ಚಿನ್ತಾಮಣಿವಿಭೂಷಣಾಯೈ ನಮಃ 
ಓಂ ಚಿತ್ತಚಿನ್ತಾಮಣಿಕೃತಾಲಯಾಯೈ ನಮಃ
ಓಂ ಚಿನ್ತಾಮಣಿಕೃತಾಲಯಾಯೈ ನಮಃ 
ಓಂ ಚಾರುಚನ್ದನಲಿಪ್ತಾಂಗ್ಯೈ ನಮಃ
ಓಂ ಚತುರಾಯೈ ನಮಃ
ಓಂ ಚತುರ್ಮುಖ್ಯೈ ನಮಃ
ಓಂ ಚೈತನ್ಯದಾಯೈ ನಮಃ
ಓಂ ಚಿದಾನನ್ದಾಯೈ ನಮಃ 50

ಓಂ ಚಾರುಚಾಮರವೀಜಿತಾಯೈ ನಮಃ
ಓಂ ಚಂಡಮುಂಡಾಯೈ  ನಮಃ
ಓಂ ಚಂಡ್ಯೈ ನಮಃ
ಓಂ ಚರ್ಚಿತಾಯೈ ನಮಃ
ಓಂ ಚಂಡವೇಗಿನ್ಯೈ ನಮಃ
ಓಂ ಚತುರ್ಭುಜಾಯೈ ನಮಃ
ಓಂ ಚಿನ್ತ್ಯಾಯೈ ನಮಃ  ನಮಃ
ಓಂ ಚಿದಾನನ್ದಸ್ವರೂಪಿಣ್ಯೈ ನಮಃ
ಓಂ ಚಿತ್ರರೂಪಿಣ್ಯೈ ನಮಃ
ಓಂ ಚಾರ್ವಂಗ್ಯೈ ನಮಃ 60

ಓಂ ಚಂಚಲಾಯೈ ನಮಃ
ಓಂ ಚಾರುಚರಿತ್ರಿಣ್ಯೈ ನಮಃ
ಓಂ ಚರ್ಚಾಯೈ ನಮಃ
ಓಂ ಚಾರುಹಾಸಿನ್ಯೈ ನಮಃ
ಓಂ ಚಟುಲಾಯೈ ನಮಃ
ಓಂ ಚಿತ್ರಾಯೈ ನಮಃ
ಓಂ ಚಿತ್ರಮಾಲ್ಯವಿಭೂಷಿತಾಯೈ ನಮಃ
ಓಂ ಚಾರುದನ್ತಾಯೈ ನಮಃ
ಓಂ ಚಾತುರ್ಯೈ ನಮಃ
ಓಂ ಚರಿತಪ್ರದಾಯೈ ನಮಃ 70

ಓಂ ಚೂಲಿಕಾಯೈ ನಮಃ
ಓಂ ಚಿತ್ರವಸ್ತ್ರಾನ್ತಾಯೈ ನಮಃ
ಓಂ ಚಾರುದಾತ್ರ್ಯೈ ನಮಃ
ಓಂ ಚಕೋರ್ಯೈ ನಮಃ
ಓಂ ಚೌರ್ಯೈ ನಮಃ
ಓಂ ಚೋರಾಯೈ ನಮಃ
ಓಂ ಚಂಚದ್ವಾಗವಾದಿನ್ಯೈ ನಮಃ
ಓಂ ಚೋರವಿನಾಶಿನ್ಯೈ ನಮಃ
ಓಂ ಚಾರುಚನ್ದನಲಿಪ್ತಾಂಗ್ಯೈ ನಮಃ
ಓಂ ಚಂಚಚ್ಚಾಮರವಿಜಿತಾಯೈ ನಮಃ 80

ಓಂ ಚಾರುಮಧ್ಯಾಯೈ ನಮಃ
ಓಂ ಚಾರುಗತ್ಯೈ ನಮಃ
ಓಂ ಚಂಡಿಲಾಯೈ ನಮಃ
ಓಂ ಚಾರುಹೋಮಪ್ರಿಯಾಯೈ ನಮಃ 
ಓಂ ಚಾರ್ವಾಯೈ ನಮಃ
ಓಂ ಚರಿತಾಯೈ ನಮಃ
ಓಂ ಚಕ್ರಬಾಹುಕಾಯೈ ನಮಃ
ಓಂ ಚಕ್ರವಾಕಸ್ತನ್ಯೈ ನಮಃ
ಓಂ ಚೇಷ್ಟಾಯೈ ನಮಃ
ಓಂ ಚಿತ್ರಾಯೈ ನಮಃ 90

ಓಂ ಚಾರುವಿಲಾಸಿನ್ಯೈ ನಮಃ
ಓಂ ಚಿತ್ಸ್ವರೂಪಾಯೈ ನಮಃ
ಓಂ ಚಂಪಕಪುಷ್ಪನಿವಾಸಿನ್ಯೈ  ನಮಃ
ಓಂ ಚಿರಪ್ರಜ್ಞಾಯೈ ನಮಃ
ಓಂ ಚಾತಕಾಯೈ ನಮಃ
ಓಂ ಚಾರುಹೇತುಕ್ಯೈ ನಮಃ
ಓಂ ಚೋಕಾರರೂಪಾಯೈ ನಮಃ
ಓಂ ಚೋರಧ್ನ್ಯೈ ನಮಃ
ಓಂ ಚೋರಬಾಧಾವಿನಾಶಿನ್ಯೈ ನಮಃ
ಓಂ ಚೈತನ್ಯಾಯೈ ನಮಃ 100

ಓಂ ಚೇತನಸ್ಥಾಯೈ ನಮಃ
ಓಂ ಚತುರಾಯೈ ನಮಃ
ಓಂ ಚಮತ್ಕೃತ್ಯೈ ನಮಃ
ಓಂ ಚಕ್ರಿಣ್ಯೈ ನಮಃ
ಓಂ ಚಕ್ರಧಾರಿಣ್ಯೈ ನಮಃ
ಓಂ ಚಿತ್ತಗೇಯಾಯೈ ನಮಃ
ಓಂ ಚಿದ್ವಿಲಾಸಿನ್ಯೈ ನಮಃ
ಓಂ ಚಕ್ರವರ್ತಿಕುಲಾಧಾರಾಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಚಂದ್ರಘಂಟಾದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಮ್ ll

ನವರಾತ್ರಿ ದಿನ 1 - ಶ್ರೀ ಶೈಲಾಷ್ಟೋತ್ತರ ಶತನಾಮಾವಳಿ

🕉️ ಓಂ ಶ್ರೀ ಗುರುಭ್ಯೋ ನಮಃ 🕉️‌           ‌                                                   ‌
ll *ಶ್ರೀ ಶೈಲಾಷ್ಟೋತ್ತರ ಶತನಾಮಾವಳಿ* ll

ಓಂ ಶೈಲಾಯೈ ನಮಃ
ಓಂ ಶೈಲಪುತ್ರಿಯೈ ನಮಃ
ಓಂ ಶೈವಲಿನ್ಯೈ ನಮಃ
ಓಂ ಶೈಲಜಾಯೈ ನಮಃ
ಓಂ ಶೈಲವಾಸಿನ್ಯೈ ನಮಃ
ಓಂ ಶಾನ್ತ್ಯೈ ನಮಃ
ಓಂ ಶೂಲಿನ್ಯೈ ನಮಃ
ಓಂ ಶೀತಲಾಮೃತವಾಹಿನ್ಯೈ ನಮಃ
ಓಂ ಶೋಭಾವತ್ಯೈ ನಮಃ
ಓಂ ಶೀಲವತ್ಯೈ ನಮಃ 10

ಓಂ ಶತ್ರುಘ್ನ್ಯೈ ನಮಃ
ಓಂ ಶಿಷ್ಟಾಯೈ ನಮಃ
ಓಂ ಶರಜನ್ಮಪ್ರಸುವ್ಯೈ ನಮಃ
ಓಂ ಶತ್ರುಹಾಯೈ ನಮಃ
ಓಂ ಶಕ್ತಯ್ಯೈ ನಮಃ
ಓಂ ಶಶಾಂಕವಿಮಲಾಯೈ ನಮಃ
ಓಂ ಶುಭಾವತ್ಯೈ ನಮಃ
ಓಂ ಶುಭಫಲಾಯೈ ನಮಃ
ಓಂ ಶಿವರೂಪಿಣ್ಯೈ ನಮಃ
ಓಂ ಶಿವಮಾತ್ರ್ಯೈ ನಮಃ 20

ಓಂ ಶಿವದಾಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಹೃದಾಸನಾಯೈ ನಮಃ
ಓಂ ಶುಕ್ಲಾಮ್ಬರಾಯೈ ನಮಃ
ಓಂ ಶೀತಲಾಯೈ ನಮಃ
ಓಂ ಶೀಲಾಯೈ ನಮಃ
ಓಂ ಶೀಲಪ್ರದಾಯಿನ್ಯೈ ನಮಃ
ಓಂ ಶಿಶುಪ್ರಿಯಾಯೈ ನಮಃ
ಓಂ ಶಿತಿಕಂಠಪ್ರಿಯಾಯೈ ನಮಃ
ಓಂ ಶಾನ್ತಾಯೈ ನಮಃ 30

ಓಂ ಶಾಶ್ವತ್ಯೈ ನಮಃ
ಓಂ ಶಮ್ಭುವನಿತಾಯೈ ನಮಃ
ಓಂ ಶಾಮ್ಭವ್ಯೈ ನಮಃ
ಓಂ ಶಾತ್ರವನಾಶಿನ್ಯೈ ನಮಃ 
ಓಂ ಶಾನ್ತಪ್ರಿಯಾಯೈ ನಮಃ
ಓಂ ಶತ್ರುಪ್ರದಾಯೈ ನಮಃ
ಓಂ ಶತಧೃತಿಸ್ತುತಾಯೈ ನಮಃ
ಓಂ ಶಾಲಿನ್ಯೈ ನಮಃ
ಓಂ ಶಾಲಿಶೋಭಾಢ್ಯಾಯೈ ನಮಃ
ಓಂ ಶಿಖಿವಾಹನಗರ್ಭಭೃತ್ಯೈ ನಮಃ 40

ಓಂ ಶಂಸನೀಯಚರಿತ್ರಾಯೈ ನಮಃ
ಓಂ ಶಾತಿತಾಶೇಷಪಾತಕಾಯೈ ನಮಃ
ಓಂ ಶಮನ್ಯೈ ನಮಃ
ಓಂ ಶ್ವೇತವರ್ಣಾಯೈ ನಮಃ
ಓಂ ಶಾಂಕರ್ಯೈ ನಮಃ
ಓಂ ಶಿವಭಾಷಿಣ್ಯೈ ನಮಃ
ಓಂ ಶಾಮ್ಯರೂಪಾಯೈ ನಮಃ
ಓಂ ಶಕ್ತಿರೂಪಾಯೈ ನಮಃ
ಓಂ ಶಕ್ತಿಬಿನ್ದುನಿವಾಸಿನ್ಯೈ ನಮಃ
ಓಂ ಶ್ಯಾಮಲಾಯೈ ನಮಃ 50

ಓಂ ಶಮನಸ್ವಸೃಸಮ್ಮತಾಯೈ ನಮಃ
ಓಂ ಶಮಾಯೈ ನಮಃ
ಓಂ ಶಮನಮಾರ್ಗಘ್ನ್ಯೈ ನಮಃ
ಓಂ ಶಿತಿಕಂಠಮಹಾಪ್ರಿಯಾಯೈ ನಮಃ
ಓಂ ಶುಚಯ್ಯೈ ನಮಃ
ಓಂ ಶುಚಿಕರ್ಯೈ ನಮಃ
ಓಂ ಶೇಷಾಯೈ ನಮಃ
ಓಂ ಶರ್ವರ್ಯೈ ನಮಃ
ಓಂ ಶವರೀಪ್ರೀತಾಯೈ ನಮಃ
ಓಂ ಶಯಾಲವ್ಯೈ ನಮಃ 60

ಓಂ ಶಯನಪ್ರಿಯಾಯೈ ನಮಃ
ಓಂ ಶತ್ರುಸಮ್ಮೋಹಿನ್ಯೈ ನಮಃ
ಓಂ ಶತ್ರುಬುದ್ಧಿಘ್ನ್ಯೈ ನಮಃ
ಓಂ ಶತ್ರುಘಾತಿನ್ಯೈ ನಮಃ
ಓಂ ಶಾರದಾಮ್ಬಾಯೈ ನಮಃ
ಓಂ ಶಾರ್ಂಗಿಣ್ಯೈ ನಮಃ
ಓಂ ಶಿವಪ್ರಿಯಾಯೈ ನಮಃ
ಓಂ ಶಿಷ್ಟಾಯೈ ನಮಃ
ಓಂ ಶಿಷ್ಟಾಚಾರಾನುಮೋದಿನ್ಯೈ ನಮಃ
ಓಂ ಶೀಘ್ರಾಯೈ ನಮಃ 70

ಓಂ ಶೀತಲಾಯೈ ನಮಃ
ಓಂ ಶೀತಗನ್ಧಪುಷ್ಪಾದಿಮಂಡಿತಾಯೈ ನಮಃ
ಓಂ ಶುಭಾನ್ವಿತಜನೈರ್ಲಭ್ಯಾಯೈ ನಮಃ
ಓಂ ಶುನಾಸೀರಾದಿಸೇವಿತಾಯೈ ನಮಃ
ಓಂ ಶೂಲಿನ್ಯೈ ನಮಃ
ಓಂ ಶೂಲಘೃಕ್ಪೂಜ್ಯಾಯೈ ನಮಃ
ಓಂ ಶೂಲಾದಿಹರವಾರಿಣ್ಯೈ ನಮಃ
ಓಂ ಶೃಂಗಾರರಂಜಿತಾಂಗಾಯೈ ನಮಃ
ಓಂ ಶೃಂಗಾರಪ್ರಿಯನಿಮ್ನಗಾಯೈ ನಮಃ
ಓಂ ಶೋಭನಾಂಗಾಯೈ ನಮಃ 80

ಓಂ ಶೋಕಮೋಹನಿವಾರಿಣ್ಯೈ ನಮಃ
ಓಂ ಶೌರಿಮಾಯಾಯೈ ನಮಃ
ಓಂ ಶೌನಕಾದಿಮುನಿಸ್ತುತಾಯೈ ನಮಃ
ಓಂ ಶಂಸಾಪ್ರಿಯಾಯೈ ನಮಃ
ಓಂ ಶಂಕರ್ಯೈ ನಮಃ
ಓಂ ಶಂವರ್ಧಿನ್ಯೈ ನಮಃ
ಓಂ ಶೇಷರೂಪಾಯೈ ನಮಃ
ಓಂ ಶೇಷಶಾಯ್ಯಭಿಪೂಜಿತಾಯೈ ನಮಃ
ಓಂ ಶೋಭನಾಯೈ ನಮಃ
ಓಂ ಶೇಷಶಾಯಿಪದೋದ್ಭವಾಯೈ ನಮಃ 90

ಓಂ ಶ್ರೀನಿವಾಸಶ್ರುತ್ಯೈ ನಮಃ
ಓಂ ಶ್ರೀಮತ್ಯೈ ನಮಃ
ಓಂ ಶ್ರಿಯೈ ನಮಃ
ಓಂ ಶುಭವ್ರತಾಯೈ ನಮಃ
ಓಂ ಶುದ್ಧವಿದ್ಯಾಯೈ ನಮಃ
ಓಂ ಶುಭಾವರ್ತಾಯೈ ನಮಃ
ಓಂ ಶ್ರುತಾನನ್ದಾಯೈ ನಮಃ
ಓಂ ಶ್ರುತಿಸ್ತುತಯ್ಯೈ ನಮಃ
ಓಂ ಶಿವೇತರಘ್ನ್ಯೈ ನಮಃ
ಓಂ ಶಬರ್ಯೈ ನಮಃ 100

ಓಂ ಶತದ್ರುಕಾಯೈ ನಮಃ
ಓಂ ಶಕ್ತಿಹಸ್ತಾಯೈ ನಮಃ
ಓಂ ಶಾಕಮ್ಭರ್ಯೈ ನಮಃ
ಓಂ ಶೃಂಖಲಾಯೈ ನಮಃ
ಓಂ ಶತಪತ್ರಿಕಾಯೈ ನಮಃ
ಓಂ ಶೋಷಿತಾಶೇಷಕಿಲ್ಬಿಷಾಯೈ ನಮಃ
ಓಂ ಶರಣ್ಯಾಯೈ ನಮಃ
ಓಂ ಶಾಮ್ಬರೀರೂಪಧಾರಿಣ್ಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಶೈಲಾಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

Monday, June 26, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -107


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಶಂಖಭೃನ್ನಂದಕೀ ಚಕ್ರೀ ಶಾರ್ಙ್ಗಧನ್ವಾ ಗಧಾದರಃ |
ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ || 107 ||

ಸರ್ವಪ್ರಹರಣಾಯುಧಃ  ಓಂ ನಮಃ ಇತಿಃ||

೯೯೪) ಶಂಖಭೃತ್

ಶಂಖ ಬಹಳ ದೊಡ್ಡ ದುಷ್ಟ ಸಂಹಾರಕ ಶಕ್ತಿ. ಹಿಂದಿನ ಕಾಲದಲ್ಲಿ ಬೆಳಿಗ್ಗೆ ಮತ್ತು ಸಂಜೆ ತಪ್ಪದೆ ಮನೆಯಲ್ಲಿ, ಮನೆಯ ಮೂಲೆ-ಮೂಲೆಯಿಂದ, ಅಷ್ಟ ದಿಕ್ಕುಗಳಿಗೂ ಕೇಳುವಂತೆ ಶಂಖನಾದ ಮಾಡುತ್ತಿದ್ದರು. ಇದಕ್ಕೆ ಕಾರಣ ಶಂಖ ನಾದಕ್ಕೆ ದುಷ್ಟ ಶಕ್ತಿಯ ಎದೆಯೊಡೆಯುವ ಶಕ್ತಿ ಇದೆ. ಶಂಖದ ನಾದ ಎಲ್ಲಿಯವರೆಗೆ ಕೇಳಿಸುತ್ತದೋ, ಅಲ್ಲಿಯ ತನಕ ಯಾವ ದುಷ್ಟ ಶಕ್ತಿಗಳೂ ಸುಳಿಯಲಾರವು. ಇದೇ ಕಾರಣಕ್ಕಾಗಿ ದೇವಸ್ಥಾನಗಳಲ್ಲಿ ಘಂಟಾನಾದವನ್ನು ಮಾಡುತ್ತಾರೆ. ಘಂಟೆಯನ್ನು ನಿಧಾನವಾಗಿ ಓಂ.ಽಽ..ಓಂ ಎನ್ನುವ ನಾದ ಬರುವಂತೆ ಮೆಲ್ಲಗೆ ಹೊಡೆಯಬೇಕು, ಶಂಖವನ್ನು ಓ..ಽಽ..ಮ್ ಎನ್ನುವಂತೆ ನಾದ ಮಾಡಬೇಕು ಹಾಗೂ ಯುದ್ಧರಂಗದಲ್ಲಿ ಶಂಖನಾದ ಎದುರಿನ ಸೈನ್ಯಕ್ಕೆ ಸಿದ್ಧತೆಯ ಸಂಕೇತ ಹಾಗು ತಮ್ಮ ಸೇನೆಗೆ ಸಿದ್ಧವಿರುವಂತೆ ಆಜ್ಞೆ. ಶಂಖದ ಅಭಿಮಾನಿ ದೇವತೆ ಲಕ್ಷ್ಮಿ. ಆಕೆ ಸಂಪತ್ತಿನ ದೇವತೆಯಾದ ವೇದಮಾನಿನಿ. ಈ ಕಾರಣಕ್ಕಾಗಿ ಶಂಖ 'ಅರ್ಥ'ದ ಸಂಕೇತ ಕೂಡಾ ಹೌದು.  ಶಂಖವನ್ನು ತೊಟ್ಟ ಭಗವಂತ ಶಂಖಭೃತ್.

೯೯೫) ನಂದಕೀ

ನಂದಕ ಎನ್ನುವ ಖಡ್ಗವನ್ನು ಹಿಡಿದ ಭಗವಂತ ನಂದಕೀ. ಖಡ್ಗದ ಅಭಿಮಾನಿ ದೇವತೆ ರಮೆ(ಭೂ ಮಾತೆ). ನಂದಕ ಎಂದರೆ ಆನಂದ. ದುಷ್ಟ ಶಕ್ತಿಯನ್ನು ಸಂಹಾರ ಮಾಡಿ ನಮಗೆ ಆನಂದ ಕೊಡುವ ಖಡ್ಗ ಹಿಡಿದ ಭಗವಂತ ನಂದಕೀ.

೯೯೬) ಚಕ್ರೀ

ಅಧರ್ಮ ನಾಶಕ್ಕಾಗಿ, ಧರ್ಮ ಸಂಸ್ಥಾಪನೆಗಾಗಿ  ಚಕ್ರ ಹಿಡಿದ ಭಗವಂತ ಚಕ್ರೀ. ಚಕ್ರ ಧರ್ಮದ ಸಂಕೇತ. ಚಕ್ರದ ಅಭಿಮಾನಿ ದೇವತೆ ದುರ್ಗೆ.

೯೯೭) ಶಾರ್ಙಧನ್ವಾ

ಶಾರ್ಙ್ಗವೆಂಬ ಬಿಲ್ಲನ್ನು ಹೊತ್ತ ಭಗವಂತ ಶಾರ್ಙ್ಗಧನ್ವಾ. ಬಿಲ್ಲಿನ ಅಭಿಮಾನಿ ದೇವತೆ ಬಲ ಸ್ವರೂಪಿ ಪ್ರಾಣದೇವರು. ಶಾರ್ಙ ಎಂದರೆ ತುತ್ತ ತುದಿ. ಆಯುದಗಳಲ್ಲೇ ಅತ್ಯಂತ ಹಿರಿದಾದ ಆಯುದ ಶಾರ್ಙ್ಗ.

೯೯೮) ಗದಾಧರಃ

ಸಂಯಮದ ಸಂಕೇತವಾದ ಗದೆಯನ್ನು ಧರಿಸಿದ ಭಗವಂತ ಗದಾಧರಃ. ಗದೆ ಸ್ವಚ್ಛಂದ ಕಾಮದ ನಿಯಂತ್ರಣದ ಸಂಕೇತ. ಗದೆಯ ಅಭಿಮಾನಿ ದೇವತೆ 'ಪ್ರಾಣ'.

೯೯೯) ರಥಾಂಗಪಾಣಿಃ

ಮಹಾಭಾರತ ಯುದ್ಧದಲ್ಲಿ ರಥದ ಗಾಲಿಯನ್ನು ಆಯುಧವಾಗಿ ಹಿಡಿದ ಭಗವಂತ ರಥಾಂಗಪಾಣಿಃ. ಇದು ಮಹಾಭಾರತ ಯುದ್ಧದಲ್ಲಿ ಅರ್ಜುನ ಮತ್ತು  ಭೀಷ್ಮ ಪಿತಾಮಹರ ನಡುವೆ ಯುದ್ಧ  ಪ್ರಾರಂಭವಾದಾಗ ನಡೆದ ಒಂದು ಘಟನೆ. ಅರ್ಜುನ ತನ್ನನ್ನು ಮುದ್ದಿಸಿ ಆಡಿಸಿ ಬೆಳೆಸಿದ ಪಿತಾಮಹನೊಂದಿಗೆ ಮನಸ್ಸಿಲ್ಲದ ಮನಸ್ಸಿನಿಂದ ಯುದ್ಧ ಮಾಡುತ್ತಿರುತ್ತಾನೆ.  ಇದನ್ನು  ಗಮನಿಸಿದ  ಸಾರಥಿ  ಕೃಷ್ಣ  ಕೋಪಗೊಳ್ಳುತ್ತಾನೆ. ಮಹಾಭಾರತ ಯುದ್ಧದ ಮೊದಲು ತಾನು ಶಸ್ತ್ರ ಹಿಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಕೃಷ್ಣ, ಕೋಪಾವೇಶದಿಂದ  ಭೀಷ್ಮನನ್ನು ಸಾಯಿಸಲೆಂಬಂತೆ ರಥದಚಕ್ರವೊಂದನ್ನು ಹಿಡಿದು ಮುಂದೊತ್ತಿ ಬರುತ್ತಾನೆ! ಇದನ್ನು ನೋಡಿದ ಬೀಷ್ಮ  ತನ್ನ ಎರಡೂ ಕೈಗಳನ್ನು ಜೋಡಿಸಿ  ಹೀಗೆ ಹೇಳುತ್ತಾನೆ:

" ಓ ಭಗವಂತ; ನಿನ್ನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ, ಹಾಗೆ ಯುದ್ಧ ಮಾಡುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡಿದ್ದೆ.  ಚಕ್ರ ಹಿಡಿಯುವುದಿಲ್ಲ ಎಂದಿದ್ದೆ ನೀನು. ಆದರೆ ಈಗ ನನ್ನ ಪ್ರತಿಜ್ಞೆಯನ್ನು ಈಡೇರಿಸಲು ನೀನು ಚಕ್ರ ಹಿಡಿದಿರುವೆ. ನಿನ್ನನ್ನೇ ನೀನು ಮರೆತಿರುವೆ, ಆದರೆ  ನಿನ್ನ ಭಕ್ತನನ್ನು  ಮರೆತಿಲ್ಲ; ನೀನಲ್ಲದೆ  ನಮಗೆ  ಗತಿ ಇನ್ಯಾರು?" ಎನ್ನುತ್ತಾನೆ.  ಈ ಘಟನೆಯಲ್ಲಿ ಲೋಕಕಲ್ಯಾಣಕ್ಕಾಗಿ ಭಗವಂತನ ಕೋಪ ಮತ್ತು ಅದರ ಹಿಂದಿರುವ ಕರುಣೆ  ವ್ಯಕ್ತವಾಗಿದೆ.

ರಥಾಂಗರು  ಎಂದರೆ ಪಾಂಡವರು ಅಥವಾ ಧರ್ಮ ಯುದ್ಧ ಮಾಡುವವರು, ಅಂಥವರಿಗೆ 'ಆಣಿ' ಅಂದರೆ ಆಧಾರವಾಗಿ ನಿಲ್ಲುವ ಭಗವಂತ ರಥಾಂಗಪಾಣಿಃ.

೯೯೯) ಅಕ್ಷೋಭ್ಯಃ

ಯಾರೂ ಮಣಿಸಲಾಗದ, ಕಂಗೆಡಿಸಲಾಗದ, ಯಾವ ಸಂಧರ್ಭದಲ್ಲೂ ಎದೆಗೆಡದ, ಎಂದೂ ನಿರ್ದಾರ ಬದಲಿಸದ ಸರ್ವಸಮರ್ಥ ಭಗವಂತ ಅಕ್ಷೋಭ್ಯಃ.

೧೦೦೦) ಸರ್ವಪ್ರಹರಣಾಯುಧಃ

ದುಷ್ಟರ ದಮನಕ್ಕಾಗಿ ಎಲ್ಲಾ ಶಸ್ತ್ರಾಸ್ತ್ರಗಳನ್ನು ಆಯುಧವಾಗಿ ತೊಟ್ಟ ಭಗವಂತ ಸರ್ವಪ್ರಹರಣಾಯುಧಃ.

|| ಸರ್ವಪ್ರಹರಣಾಯುಧೋಂ ನಮಃ ಇತಿ ||

ಎಲ್ಲಾ ಶಸ್ತ್ರಾಸ್ತ್ರಗಳನ್ನು ಆಯುಧವನ್ನಾಗಿ ತೊಟ್ಟವನೆ ಓಂಕಾರವಾಚ್ಯನಾದವನು  ಎನ್ನುತ್ತ ಇದು ಅವನಿಗೆ ಅರ್ಪಿತವಾಗಿದೆ.

ಸರ್ವಪ್ರಹರಣಾಯುಧ: = ಎಲ್ಲ ಶಸ್ತ್ರಾಸ್ತ್ರವನ್ನು ಆಯುಧವಾಗಿ ತೊಟ್ಟವನು, ಓಂಕಾರವಾಚ್ಯ ಭಗವಂತ. 

ಸರ್ವ + ಪ್ರಹರಣ (ಪ್ರ + ಹರಣ) + ಆಯುಧ = ಸರ್ವಪ್ರಹಣಾಯುಧ:. 

ಸರ್ವ = ಸಮಗ್ರ, ಸಂಪೂರ್ಣ, ಎಲ್ಲಾ, ಇಡೀಯ, ಎಲ್ಲವನ್ನೂ, ಎಲ್ಲೆಡೆ, ಎಲ್ಲರೂ, ಪ್ರತೀ, ಒಟ್ಟಾರೆಯಾಗಿ, ಇತ್ಯಾದಿ., 

ಪ್ರಹರಣ = ಹೊಡೆತ, ಒಯ್ಯುವುದು, ಆಘಾತ, ಓಡಿಸಿಕೊಂಡು ಹೋಗುವುದು, ಏಟು, ಯುದ್ಧ, ಆಯುಧ, ಅಸ್ತ್ರ, ಶಸ್ತ್ರ ಒಗೆಯುವುದು, ಇತ್ಯಾದಿ., 

ಆಯುಧ = ಶಸ್ತ್ರ, ಅಸ್ತ್ರ, ಆಯುಧ, ಇತ್ಯಾದಿ., 

ಪ್ರ = ಶ್ರೇಷ್ಠತೆ, ಅತಿಶಯ, ಹೆಚ್ಚಿಗೆ, ಪ್ರಾಥಮ್ಯ, ಸ್ಪಷ್ಟತೆ, ಉತ್ಪತ್ತಿ, ಶಕ್ತಿ, ಪ್ರಕಾಶ, ನಿರ್ಮಲವಾಗಿರುವಿಕೆ, ಸ್ಪುಟವಾಗಿರುವಿಕೆ, ಸ್ವಚ್ಛತೆ, ಗತಿ, ಗಮನ, ಆರಂಭ, ಉಪಕ್ರಮ, ಉತ್ಕರ್ಷ, ಇತ್ಯಾದಿ., 

ಹರಣ = ನಾಶಪಡಿಸುವುದು, ಭಾಗಿಸುವುದು, ಹಿಡಿಯುವುದು, ಕಳ್ಳತನ, ಒಯ್ಯುವುದು, ಸಾಗಿಸುವುದು, ಭುಜ, ಹೆಗಲು, ಸ್ವೀಕಾರ, ಇತ್ಯಾದಿ., 

ಸಹಸ್ರನಾಮ ಸ್ತೋತ್ರದಲ್ಲಿ ಹೇಳಿರುವವುಗಳು ಮಾತ್ರ ಭಗವಂತನಿಗೆ ಇರುವ ಆಯುಧಗಳು ಎಂಬ ನಿಯಮವಿಲ್ಲ. ಪ್ರಹಾರ ಮಾಡುವ ಸಮಸ್ತ ಆಯುಧಗಳೂ ಭಗವಂತನಿಗೆ ಇವೆ. ಹುಲ್ಲುಕಡ್ಡಿಯೂ ಕೆಲವೊಮ್ಮೆ ಆಯುಧವಾಗುತ್ತದೆ. ಆದುದರಿಂದ ಭಗವಂತ "ಸರ್ವಪ್ರಹರಣಾಯುಧ:" ಎಂದು ಕರೆಯಲ್ಪಡುತ್ತಾನೆ. 

ಭಗವಂತನು ಸತ್ಯಸಂಕಲ್ಪನಾದುದರಿಂದ ಸರ್ವೇಶ್ವರನು ಎಂಬುದನ್ನು ತೋರಿಸುವುದಕ್ಕಾಗಿ ಸ್ತೋತ್ರದ ಅಂತ್ಯದಲ್ಲಿ "ಸರ್ವಪ್ರಹರಣಾಯುಧ:" ಎಂದು ಹೇಳಿದೆ. 

ಸರ್ವರೀತಿಯ ಧ್ವಂಸಕಾರಕವಾದ ಶಕ್ತಿಶಾಲಿ ಅಸ್ತ್ರ ಶಸ್ತ್ರ ಉಳ್ಳವನು ಭಗವಂತ. ಇದು ಎಲ್ಲವನ್ನೂ, ಎಲ್ಲ ಸಂದರ್ಭಗಳಲ್ಲೂ ಗೆಲ್ಲುವವನು ಎಂದು ಸೂಚಿಸುತ್ತದೆ. ಆದುದರಿಂದ ಭಗವಂತನನ್ನು "ಸರ್ವಪ್ರಹರಣಾಯುಧ:" ಎಂದು ಕರೆಯುತ್ತಾರೆ. 

ತನ್ನಲ್ಲಿ ನಿಷ್ಠೆಯುಳ್ಳ ಭಕ್ತರ ಅನಿಷ್ಟಗಳನ್ನೂ ನಿರ್ಮೂಲನಗೊಳಿಸುವ ಅಸಂಖ್ಯಾತವೂ - ನಿಸ್ಸೀಮಶಕ್ತಿಯುತವೂ ಆದ ಸ್ವೋಚಿತವಾದ ಇತರ ದಿವ್ಯಾಯುಧಗಳೂ ಸದಾ ಸರ್ವಪ್ರದೇಶಗಳಲ್ಲಿಯೂ ಇರುವ ಭಗವಂತ "ಸರ್ವಪ್ರಹರಣಾಯುಧ:". 

*"ಯಥೇಚ್ಛಯೈವ ಸರ್ವಂ ತು ಮನಸಾ ದೇಹತೋಪಿ ವಾ| ಕರ್ತುಂ ಶಕ್ತೋಪಿ ಚಾಸ್ತ್ರಾದ್ಯಾ ಲೀಲೈವಾನಂತಶಕ್ತಿನ:||"* ಅನಂತ ಶಕ್ತಿಸಂಪನ್ನನಾದ ಭಗವಂತನು ತನ್ನ ದೇಹದಿಂದಲೇ ಅಥವಾ ಮನಸ್ಸಿನಿಂದಲೇ ಎಲ್ಲವನ್ನೂ ತನ್ನ ಇಚ್ಛಾನುಗುಣವಾಗಿ ನಡೆಸಲು ಸಮರ್ಥನಾದರೂ ಲೀಲೆಯಿಂದಷ್ಟೇ ಅಸ್ತ್ರಶಸ್ತ್ರಾದಿಗಳನ್ನು ಧರಿಸುವನು. ಆದುದರಿಂದ ಭಗವಂತನನ್ನು "ಸರ್ವಪ್ರಹರಣಾಯುಧ:" ಎಂದು ಕರೆಯುತ್ತಾರೆ. 

ಕಾಲ ಎನಿಸುವ ಭಗವಂತನು ನಡೆಸುವ ವಿಶ್ವದ ಸಂಹಾರದಲ್ಲಿ ರುದ್ರನು ನಿಮಿತ್ತಮಾತ್ರ - ಎಂದು ತಿಳಿಸುವ ಭಾಗವತದಿಂದ ರುದ್ರನು ಕಾಲಾಖ್ಯ ಭಗವಂತನ ಆಯುಧದಂತೆ ಇರುವನೆಂದು ಸೂಚಿತವಾಗುವುದು. ಆದುದರಿಂದ ಭಗವಂತನಿಗೆ "ಸರ್ವಪ್ರಹರಣಾಯುಧ:" ಎಂದು ಹೆಸರು. 

ದುಷ್ಟರ ದಮನಕ್ಕಾಗಿ ಎಲ್ಲಾ ಶಸ್ತ್ರಾಸ್ತ್ರಗಳನ್ನು ಆಯುಧವಾಗಿ ತೊಟ್ಟವನು; 
ಪ್ರಹಾರ ಮಾಡಲು ಯೋಗ್ಯವಾಗಿರುವ ಸಮಸ್ತ ಆಯುಧಗಳೂ ಇರುವವನು; 
ಓಂಕಾರ ವಾಚ್ಯನಾದವನು; 
ಭಕ್ತರ ತೊಂದರೆಗಳನ್ನು ತನ್ನ ಆಯುಧಗಳ ಪ್ರಹಾರದಿಂದ ನಿವಾರಿಸುವವನು; 
ಯಾವನ ಸಂಕಲ್ಪಮಾತ್ರದಿಂದ ದರ್ಭ, ಇಷೀಕ, ನಖ - ಇವೇ ಮುಂತಾದ ಯಾವುದೇ ಪದಾರ್ಥವು ಯಾರಿಗೆ ಆಯುಧವಾಗಬಹುದೋ - ಅವನು; 
ಪೂರ್ಣನಾದ ತನ್ನಿಂದ ಕೂಡಿದ ಆಯುಧಗಳನ್ನು ಹೊಂದಿರುವವನು; 
ಸರ್ವ ಎನಿಸುವ ದುರ್ಗಾದೇವಿ ಯಾರ ಚಕ್ರರೂಪದ ಆಯುಧವಾಗಿರುವಳೋ ಅಂತಹವನು; 
ಸರ್ವ ಪಾಪಗಳನ್ನು ಪರಿಹರಿಸುವವನು; 
ಸಕಲ ಅಸ್ತ್ರಶಸ್ತ್ರಗಳೂ ಯುದ್ಧ ಮಾಡಲು ಸಾಧನಗಳಾಗುವಂತೆ ಅನುಗ್ರಹಿಸುವವನು; 
ರುದ್ರನು ಎಲ್ಲರ ಸಂಹಾರದಲ್ಲಿ ಯಾರ ಆಯುಧದಂತೆ ಇರುವನೋ ಅಂತಹವನು;
ಆದುದರಿಂದ ಭಗವಂತನಿಗೆ "ಸರ್ವಪ್ರಹರಣಾಯುಧ:" ಎಂದು ಹೆಸರು. 

"ಪಾದಮೂಲಂ ಪ್ರಪನ್ನಾನಾಂ ಭಕ್ತಾನಾಂ ಚಾಪಿ ನಿತ್ಯಶ:| ಅಸಂಖ್ಯೇಯಾನ್ಯಮರ್ಯಾದ ಸಾಮರ್ಥ್ಯಾನ್ಯಾತ್ಮನ: ಸದಾ ಸರ್ವತ್ರ ಸರ್ವಥಾ ಸರ್ವಪ್ರಕಾರಾಶ್ರಿತ ರಕ್ಷಣೇ| ದೀಕ್ಷಿತಾನ್ಯುಚಿತಾನ್ಯನ್ಯಾನ್ಯನನ್ತಾನ್ಯಾಯುಧಾನಿ ಹಿ| ಯಸ್ಯ ಸನ್ತಿ ಸ ವೈ ನಿತ್ಯಂ ಸರ್ವಪ್ರಹರಣಾಯುಧ:| ದ್ವಾದಶಾರ್ಣೋ ಮಹಾಮಂತ್ರ: ಸರ್ವದು:ಖವಿನಾಶಕ:||". 

"ಪ್ರಹರಂತ್ಯೇಭಿರಿತಿ ಪ್ರಹರಣಾನಿ ತಾದೃಶಾನಿ ಆಯುಧಾನಿ ಪ್ರಹರಣಾಯುಧಾನಿ| ಪೂರ್ಣತ್ವಾತ್ ಸರ್ವ: ಭಗವಾನ್ ತೇನ ಸಹಿತಾನಿ ಪ್ರಹರಣಾಯುಧಾನಿ ಯಸ್ಯ ಸ: ಸರ್ವಪ್ರಹರಣಾಯುಧ:||". 

"ಸರ್ವಾಣಿ ಪ್ರಹರಣಾನಿ ಅಸ್ತ್ರಶಸ್ತ್ರಾಣಿ ಆಯುಧಾನಿ ಯುದ್ಧಸಾಧನಾನಿ ಯಸ್ಮಾತ್ ಸ: ಸರ್ವಪ್ರಹರನಾಯುಧ:||". 

"ಸರ್ವ: ರುದ್ರ: ಪ್ರಹರಣೇ ಸರ್ವೇಷಾಂ ಸಂಹಾರೇ ಆಯುಧಮಿವ ಯಸ್ಯ ಸ: ಸರ್ವಪ್ರಹರಣಾಯುಧ:||". 

*"ಓಂ ಸರ್ವಪ್ರಹರಣಾಯುಧಾಯ ನಮ:"* - ಎಂಬ ಈ ನಾಮಮಂತ್ರ ಜಪವ ಸರ್ವದು:ಖಗಳನ್ನೂ ವಿನಾಶಗೊಳಿಸುತ್ತದೆ. 

*"ಸರ್ವಪ್ರಹರಣಾಯುಧ: ಓಂ ನಮ: ಇತಿ"* 
ಎಲ್ಲಾ ಶಸ್ತ್ರಾಸ್ತ್ರಗಳನ್ನು ಆಯುಧವನ್ನಾಗಿ ತೊಟ್ಟವನೇ *"ಓಂ"* ಕಾರ ವಾಚ್ಯನಾದವನು ಎನ್ನುತ್ತ, ಈ "ಶ್ರೀವಿಷ್ಣುಸಹಸ್ರನಾಮ ಚಿಂತನೆ" ಕಾರ್ಯವು ಅವನಿಗೇ ಅರ್ಪಿತವಾಗಿದೆ. 
******************
*||ಬೃಹತೀಸಹಸ್ರದಲ್ಲಿ* 
*ಶ್ರೀವಿಷ್ಣುಸಹಸ್ರನಾಮ||* 

*||ಓಂ ಸರ್ವಪ್ರಹಣಾಯುಧಾಯ ನಮ: ಓಂ||* 

*ಓಂ ಯೂಯಂ ಪಾತ ಸ್ವಸ್ತಿಭಿ: ಸದಾ ನ:|| ಏಷ ಸ್ತೋಮೋ ಮಹ ಉಗ್ರಾಯ ವಾಹೇ ದುರೀವಾತ್ಯೋ ನ ವಾಜಯನ್ನಧಾಯಿ|| ಇಂದ್ರ ತ್ವಾಯಮರ್ಕ ಈಟ್ಟೇ ವಸೂನಾಂ ದಿವೀವ ಧ್ಯಾಮಧಿ: ನ ಶ್ರೋಮತಂ ಧಾ:||* 

ತಾತ್ಪರ್ಯ:- 

ಬೃಹತೀಸಹಸ್ರ ಪ್ರತಿಪಾದ್ಯನೇ, ನಿನ್ನ ಅನಂತರೂಪಗಳೆಲ್ಲವೂ ಜಗತ್ಕಲ್ಯಾಣಕ್ಕಾಗಿಯೇ ಮೀಸಲಾದವು. ನೀನು ಸುಖಗಳ ಪಾಲಿನಿಂದ ನಮ್ಮನ್ನು ಸದಾ ಸಂತೋಷಗೊಳಿಸುತ್ತಿರು. ನೀನು ಕೊಡುವುದರಲ್ಲಿ ಅನಂತಬಾಹು. ಕೊಡುವ ವಸ್ತೂ ಕೂಡ ಎಲ್ಲರ ನಡುವೆ ಎದ್ದುಕಾಣುವಷ್ಟು ಪೂರಾ ವಿಶೇಷವಾದುದು. ವೇಗವಾಗಿ ಓಡುವ ಇಂದ್ರನಿಗೆ ಕುದುರೆಯನ್ನು ಕೊಟ್ಟರೆ ನಿನ್ನ ಆಗಮನ ಇನ್ನೂ ಸರಾಗ. ಅದರಲ್ಲೂ ದಾನಿಯಾದ ನಿನಗೆ ಭಕ್ತರ ಮನೆಗೆ ಬರುವುದೇ ಸಂಭ್ರಮ. ಯುದ್ಧಕ್ಕೆ ಹೊರಡುವವನಿಗೆ ಕುದುರೆ ಸಿಕ್ಕರೆ ಜಯವೇ ಸಿಕ್ಕಷ್ಟು ಸಂತೋಷ. ಹಾಗೆಯೇ ದಾನಿಯಾದ ನಿನಗೆ ನಮ್ಮ ಸ್ತೋತ್ರವನ್ನು ಕಂಡಾಗ ಇನ್ನೂ ಸಂತೋಷ. ‌ನಾವು ಸ್ತೋತ್ರ ಮಾಡಿಯಾಗಿದೆ. ಸಾಧನಾಧ್ಯಾಯ ಮುಗಿದಂತೆ. ಇನ್ನು ಫಲಾಧ್ಯಾಯ ನಿನ್ನಿಂದ ಪ್ರಾರಂಭವಾಗಬೇಕು. ಪೂಜಕನಾದ ನಾನು ವಾಸದ ಮನೆಗಳನ್ನು ಬೇಡುತ್ತೇನೆ. ನನ್ನನ್ನು ನಂಬಿದ ಕುಟುಂಬದವರಿಗೆ, ಶಿಷ್ಯರಿಗೆ ಸುಖವಾಗಿ ವಾಸಿಸುವಷ್ಟು, ಸಜ್ಜನರು ಸಮಾಧಾನದಿಂದ ಇರುವಷ್ಟು ವಾಸ ಮಾಡುವಂತೆ ಅನ್ನಾದಿಗಳೂ ಕೂಡ ನನಗೆ, ನನ್ನ ನಂಬಿದವರಿಗೆ, ಹಸಿದು ಹಾತೊರೆಯುವವರಿಗೆ, ಮಂಗಳವೆಂದು ಬಂದವರಿಗೂ ಅನಾಯಾಸವಾಗಿ ಅನ್ನವಾಗುವಷ್ಟು ನೀಡು. ಹರಿಯೇ, ನೀನು ಗಗನದಲ್ಲಿ ಸೂರ್ಯನನ್ನು ಎತ್ತರಕ್ಕೆ ಏರಿಸಿ, ಎಲ್ಲರೂ ನೋಡುವಂತೆ ಮಾಡಿಲ್ಲವೇ? ಹಾಗೆ ನನಗೂ ಸಹ ಎಲ್ಲರೂ ಗುರುತಿಸುವಂತೆ ಶ್ರವಣಾದಿ ಸಂಪತ್ತುಗಳನ್ನು, ಜ್ಞಾನಗಳನ್ನು ಕೊಟ್ಟಿರುವಿ, ಕೊಡುತ್ತಿರುವಿ. 

*ನಾಮನಿರ್ವಚನ:-* 

*"ಯೂಯಂ ಪಾತ ಸ್ವಸ್ತಿಭಿ: ಸದಾ ನ:"*  ಸದಾ = ಎಂದೆಂದೂ, ನ: = ನಮ್ಮನ್ನು, ಸ್ವಸ್ತಿಭಿ: = ಮಂಗಳ ಪರಂಪರೆಯಿಂದ, ಯೂಯಂ = ನಿಮ್ಮ ಹಲವಾರು ರೂಪಗಳು, ಪಾತ = ಕಾಪಾಡಲಿ, ಎಂಬ ಈ ಮಂತ್ರಭಾಗವು, ಸರ್ವ = ಎಲ್ಲ ದುರ್ಜನರಿಂದ, ಪ್ರಹರಣ = ಹಣವನ್ನು ಕಿತ್ತು, ಆಯು: = ಜೀವನವನ್ನು ಸಹ ಭಕ್ತರಿಗೆ ಧ = ಧರಿಸುವುದರಿಂದ/ನೀಡುವುದರಿಂದ, ವಿಷ್ಣುವನ್ನು "ಸರ್ವಪ್ರಹರಣಾಯುಧ:" ಎಂದು ಸಾರಿದೆ. ಹರಿಯು ಸರ್ವಪ್ರಹರಣ = ಸಂಪತ್ತನ್ನು, ಆಯು = ಅದನ್ನು ಅನುಭವಿಸುವ ಆಯುಸ್ಸನ್ನು, ಧ = ಕೊಡುವುದರಿಂದ ವಿಷ್ಣುವಿಗೆ "ಸರ್ವಪ್ರಹರಣಾಯುಧ:" ಎಂಬ ಸೂಕ್ತನಾಮವಿದೆ. ಸರ್ವೇಭ್ಯೋಸುರೇಭ್ಯೋ ಧನಾಧಿಕಮಾಹೃತ್ಯ ಸರ್ವೇಭ್ಯೋ ಭಕ್ತೇಭ್ಯ: ಪ್ರಕರ್ಷೇಣ ದಾತುಂ ಆಹರತೀತಿ ಸರ್ವಪ್ರಹರಣ:, ಗಮ್ಯತೇ ಪ್ರಾಪ್ಯತೇ ಇತ್ಯಾಯುರ್ಜೀವನಮ್, ಆಯು: ಆಯುಷ್ಯಂ ಧತ್ತ ಇತ್ಯಾಯುಧ: ಸರ್ವಪ್ರಹರಣಶ್ಚಾಸಾವಾಯು ದಶ್ಚ 

"ಸರ್ವಪ್ರಹರಣಾಯುಧ:" ಅತ್ರ ವರ್ಣಿತ:. 
ಬೃಹತೀ ಸಹಸ್ರವು ಯಾಗಕ್ಕೆ ಸಂಬಂಧಿಸಿದ್ದು. 
"ಯೇನ ಅಧೀತಂ ತಸ್ಯ ಇಷ್ಟಂ ಭವತಿ" ಅಧ್ಯಯನ ಮಾಡಿದವನಿಗೆ ಯಾಗ ಮಾಡಿದಷ್ಟೇ ಫಲವಿದೆ ಎಂದು ಅರ್ಥ. 
ಹೀಗಾಗಿ ಶ್ರದ್ಧಾಭಕ್ತಿಗಳಿಂದ ಅಧ್ಯಯನ ಮಾಡಿದಾಗ ಅಪಾರ ಫಲ ನಿಶ್ಚಿತ. 

ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀವಿಷ್ಣು ಪ್ರೀತನಾಗಲಿ ಎಂದು ಆಶಿಸುತ್ತಾ, ಹರಿಸ್ಮರಣೆಯೊಂದಿಗೆ ಹಯಗ್ರೀವನಲ್ಲಿ ಸಮರ್ಪಿಸುತ್ತಿದ್ದೇವೆ. 


Sunday, June 25, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -106


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಆತ್ಮಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ |
ದೇವಕೀನಂದನಃ ಸ್ರಷ್ಟಾ ಕ್ಷಿತೀಷಃ ಪಾಪನಾಶನಃ || 106 ||

೯೮೬) ಆತ್ಮಯೋನಿಃ
ಆತ್ಮ ಎನ್ನುವುದಕ್ಕೆ ಅನೇಕ ಅರ್ಥಗಳಿವೆ, 'ಆತ್ಮನಸ್ತು  ಕಾಮಾಯ ಸರ್ವಮ್ ಪ್ರಿಯಮ್ ಭವತಿ' ಎಂದಿದ್ದಾರೆ. ಇಷ್ಟೇ ಅಲ್ಲದೆ ಯಾಜ್ಞವಲ್ಕ್ಯ ಹೇಳುವಂತೆ:

"ಆತ್ಮಾವಾರೆ ದೃಷ್ಟವ್ಯೋ, ಶ್ರೋತವ್ಯೋ ,ಮಂತವ್ಯೋ, ನಿದಿಧ್ಯಾಸಿತವ್ಯಃ".

ಆತ್ಮ ಶಬ್ದ ಮೇಲ್ನೋಟಕ್ಕೆ ಶರೀರ, ಇನ್ನೂ ಆಳವಾಗಿ ಚಿಂತಿಸಿದರೆ ಮನಸ್ಸು, ಜೀವ, ಜೀವಾಭಿಮಾನಿ ದೇವತೆ ಚತುರ್ಮುಖ, ಗರುಡ-ಶೇಷರು, ಕೊನೆಗೆ ಪರಮಾತ್ಮ. ಪ್ರತಿಯೊಂದು ಜೀವಕ್ಕೆ ದೇಹವೆಂಬ ಮನೆಯನ್ನು ಕೊಟ್ಟು, ಅದರ ಮಧ್ಯದಲ್ಲಿ ಅನಾಹತ ಚಕ್ರವೆಂಬ ಶಕ್ತಿ ಕೇಂದ್ರ ನಿರ್ಮಿಸಿ, ಜೀವನನ್ನು  ಅಲ್ಲಿ ಕುಳ್ಳಿರಿಸಿ, ಪ್ರಾಣದೇವರ ಸಮೇತನಾಗಿ ಹೃತ್ಕಮಲ ಮಧ್ಯ ನೆಲೆಸಿ ನಮ್ಮನ್ನು ನಡೆಸುವ ಭಗವಂತ ಆತ್ಮಯೋನಿಃ.

೯೮೭) ಸ್ವಯಂಜಾತಃ

ತಾನೇ ತಾನಾಗಿ ಆವಿರ್ಭೂತನಾಗುವ ಭಗವಂತ ಸ್ವಯಂಜಾತಃ. ಆತನಿಗೆ ಆತನೇ ತಂದೆ-ತಾಯಿ. ಆದರೆ ಭಕ್ತವತ್ಸಲನಾದ ಭಗವಂತನಿಗೆ ಹೆಸರಿಡುವ ತಂದೆ ಮಾತ್ರ ಜ್ಞಾನಿಗಳು ಅಥವಾ ಆತನ ಭಕ್ತರು!

೯೮೮) ವೈಖಾನಃ

ಈ ಸಂಸಾರ ಬಂಧದಿಂದ ಬಿಡುಗಡೆಹೊಂದಿದ ವಿಖನಸರಿಗೂ ಕೂಡಾ ಆರಾಧ್ಯನಾದ ಮುಕ್ತಿ ನಿಯಾಮಕ ಭಗವಂತ ವೈಖಾನಃ.

೯೮೯) ಸಾಮಗಾಯನಃ

ಸೃಷ್ಟಿಯ ಆದಿಯಲ್ಲಿ ಎಲ್ಲಾ ವೇದವನ್ನು ಚತುರ್ಮುಖನಿಗೆ ಹೇಳಿದ ಭಗವಂತನಿಗೆ ಸಾಮವೇದವೆಂದರೆ ಬಹಳ ಪ್ರೀತಿ. ಕೃಷ್ಣಾವತಾರದಲ್ಲಿ ತನ್ನ ಕೊಳಲಿನಿಂದ ಸಮಗಾನವನ್ನು ನುಡಿಸಿದ ಭಗವಂತ, ಸಾಮಗಃ (ಸಾಮಗಾನವನ್ನು ಹಾಡುವವ)ರಿಗೆ ಅಯನ(ಆಸರೆ).

೯೯೦) ದೇವಕೀನಂದನಃ

ಕೊಳಲಿನ ನಾದದಿಂದ ಸಾಮವನ್ನು ಹಾಡುವ ಕೃಷ್ಣ ದೇವಕೀನಂದನನಾಗಿ ಅವತರಿಸಿ ಬಂದ ಸೌಂದರ್ಯ ಮೂರ್ತಿ ಎನ್ನುವುದು ಈ ನಾಮದ ಮೇಲ್ನೋಟದ ಅರ್ಥ. ಇಲ್ಲಿ 'ದೇವ' ಎಂದರೆ ದೇವತೆಗಳು, 'ಕಂ' ಎಂದರೆ ಆನಂದ. ದೇವತೆಗಳಿಗೆ ಆನಂದವನ್ನು ಕೊಡುವ ವೇದವಾಗ್ಮಯ(ದೇವಕೀ)ವನ್ನು ಕೇಳಿ ಕುಣಿದಾಡುವ ಭಗವಂತ, ವೈದಿಕ ಸಾಹಿತ್ಯವೆಂಬ ಗರುಡನನ್ನೇರಿ ನಮ್ಮ ಬಳಿಗೆ ಬರುವ ದೇವಕೀನಂದನಃ.

೯೯೧) ಸ್ರಷ್ಟಾ

ಎಲ್ಲವನ್ನು ಸೃಷ್ಟಿಮಾಡಿದ ಭಗವಂತ ಸ್ರಷ್ಟಾ.

೯೯೨) ಕ್ಷಿತೀಶಃ

ಕ್ಷಿತಿ ಎಂದರೆ ಭೂಮಿ, ಅಥವಾ ಸಮಸ್ತ ಬ್ರಹ್ಮಾಂಡ. ಇಂತಹ ಬ್ರಹ್ಮಾಂಡದ ಒಡೆಯ ಭಗವಂತ ಕ್ಷಿತೀಶಃ. ಪ್ರತಿಯೊಂದು ವಸ್ತುವಿನ ಅಳಿವು-ಉಳಿವು ಆತನ ಅಧೀನ. ಪ್ರತಿಯೊಂದು ಕ್ರಿಯೆಯನ್ನು ಮಾಡಿಸುವ ಪ್ರೇರಕ ಭಗವಂತ ಕ್ಷಿತೀಶಃ.

೯೯೩) ಪಾಪನಾಶನಃ

ನಮಗೆ ಪಾಪದ ಲೇಪ ಅಂಟುವುದು  'ನಾನು' ಎನ್ನುವ ಅಹಂಕಾರವಿದ್ದಾಗ ಮಾತ್ರ. ನಾನು ಏನೂ ಅಲ್ಲ, ನನ್ನೊಳಗಿರುವ ಭಗವಂತ ಸರ್ವ ನಿಯಾಮಕ ಎಂದು ಅರಿತಾಗ, ಭಗವಂತ ಸರ್ವ ಪಾಪಗಳನ್ನು ನಾಶ ಮಾಡುತ್ತಾನೆ. ಅಥವಾ ನಮಗೆ ಪಾಪದ ಲೇಪವಿಲ್ಲದಂತೆ ಮಾಡುತ್ತಾನೆ. ಇದೇ ಮಾತನ್ನು ಶ್ರೀಕೃಷ್ಣ ಪಾಪಪ್ರಜ್ಞೆಯಲ್ಲಿ ನಿಂತ ಅರ್ಜುನನಿಗೆ ಯುದ್ಧರಂಗದಲ್ಲಿ ಉಪದೇಶಿಸುತ್ತಾನೆ. ಆ ಕಾರಣಕ್ಕಾಗಿ ಅರ್ಜುನ ಮಾಡಿದ ಯುದ್ಧಧರ್ಮವಾಯಿತು, ಅಹಂಕಾರದಿಂದ ಯುದ್ಧ ಮಾಡಿದ ದುರ್ಯೋದನನಿಗೆ ಯುದ್ಧದ ಸರ್ವ ಪಾಪವು ಅಂಟಿತು. ಹೀಗೆ ಅಹಂಕಾರವಿಲ್ಲದೆ ಭಗವಂತನಲ್ಲಿ ಶರಣಾದ ಭಕ್ತರ ಪಾಪವನ್ನು ಕಳೆದು, ಪಾಪಿಗಳ ಸಂಹಾರ ಮಾಡುವ ಭಗವಂತ ಪಾಪನಾಶನಃ.

ಮುಂದುವರೆಯುವುದು....✍️💐

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -105


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಯಜ್ಞಭೃದ್ಯಜ್ಞಕೃದ್ಯಜ್ಞೀ ಯಜ್ಞಭುಗ್ಯಜ್ಞ ಸಾಧನಃ |
ಯಜ್ಞಾಂತಕೃದ್ಯಜ್ಞಗುಹ್ಯಮನ್ನಮನ್ನಾದ ಏವ ಚ || 105 ||

೯೭೭) ಯಜ್ಞಭೃತ್

ಯಜ್ಞವನ್ನು ಹಾಗೂ ಯಜ್ಞಾಭಿಮಾನಿ ದೇವತೆಯನ್ನು ಧಾರಣೆ ಮಾಡಿದ ಭಗವಂತ ಯಜ್ಞಭೃತ್. ಭಗವಂತ ಯಜ್ಞ ಪಾಲಕ, ಇಂದ್ರ ಹಾಗು ಇಂದ್ರಪುತ್ರ (ಜಯಂತ ಅಥವಾ ಯಜ್ಞ)ನ ಪಾಲಕ.

೯೭೮) ಯಜ್ಞಕೃತ್

ಇಲ್ಲಿ  'ಕೃತ್' ಎಂದರೆ ಮಾಡಗೊಡುವವನು ಎನ್ನುವುದು ಒಂದು ಅರ್ಥವಾದರೆ ಇನ್ನೊಂದು ಅರ್ಥದಲ್ಲಿ 'ಮಾಡದಂತೆ ಮಾಡುವವನು'; ಯಜ್ಞವನ್ನು ಮಾಡಗೊಡುವವನ ಭಗವಂತ, ಯಜ್ಞ ಮಾಡದಂತೆ ಮಾಡುವವನೂ ಅವನೇ!

೯೭೯) ಯಜ್ಞೀ

ಯಜ್ಞಉಳ್ಳವನು, ಯಜ್ಞಗಳ ಒಡೆಯ. ಯಜ್ಞದ ಎಲ್ಲಾ ಹೊಣೆಗಾರಿಕೆ, ಅದರ ಸ್ವಾತಂತ್ರ್ಯ, ಫಲವನ್ನು ಕೊಡುವವನು, ಯಜ್ಞವನ್ನು ಸ್ವೀಕರಿಸುವವನು, ನಮ್ಮ ಒಳಗೆ-ಹೊರಗೆ ಇದ್ದು ಯಜ್ಞದ ಒಂದೊಂದು ಕ್ರಿಯೆಯಲ್ಲಿ ತುಂಬಿ ಯಜ್ಞವನ್ನು ನಿರ್ವಹಣೆ ಮಾಡುವ ಭಗವಂತ ಯಜ್ಞೀ.

೯೮೦) ಯಜ್ಞಭುಕ್

ಹಿಂದೆ ಹೇಳಿದಂತೆ ಯಜ್ಞದಲ್ಲಿ ಯಾವ ಆಹುತಿಯನ್ನು ಯಾವ ದೇವತೆಯ ಹೆಸರಿನಲ್ಲಿ ಅರ್ಪಿಸಿದರೂ ಅದು ಮೊದಲು ಸೇರುವುದು ಭಗವಂತನನ್ನು. ಗೀತೆಯಲ್ಲಿ ಹೇಳಿದಂತೆ :

ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ |
ನ ತು ಮಾಮಭಿಜಾನನ್ತಿ ತತ್ತ್ವೇನಾತಶ್ಚ್ಯವನ್ತಿ ತೇ ||

ಯಜ್ಞದಲ್ಲಿ ಅರ್ಪಿಸುವ ಸರ್ವ ಹವಿಸ್ಸು ಭಗವಂತನ ಮುಖೇನವೇ ಇತರ ದೇವತೆಗಳನ್ನು ಸೇರುವುದು. ಆತ ಯಜ್ಞ ಪಾಲಕ; ಸರ್ವ ಯಜ್ಞ ಭೋಕ್ತಾರ.
ಕರೋಮಿ  ಯದ್ಯತ್  ಸಕಲಂ  ಪರಸ್ಮೈ  ನಾರಾಯಣಾಯೇತಿ  ಸಮರ್ಪಯಾಮಿ.
ನಾವು ಏನು ಮಾಡಿದರೂ ಅದು ನಾರಾಯಣನಿಗೆ ಅರ್ಪಿತ.

೯೮೧) ಯಜ್ಞಸಾಧನಃ

ನಿಯಮಿತವಾದ ಯಜ್ಞದಲ್ಲಿ ಒಟ್ಟು ಹದಿನೆಂಟು ಮಂದಿ ಸೇರಿ ಯಜ್ಞ ಮಾಡುತ್ತಾರೆ. ನಾಲ್ಕು ಮಂದಿ ಋಗ್ವೇದದವರು, ನಾಲ್ಕು ಮಂದಿ ಯಜುರ್ವೇದದವರು. ನಾಲ್ಕು ಮಂದಿ ಸಾಮ ವೇದದವರು, ಬ್ರಹ್ಮತ್ತ್ವಕ್ಕೆ ಒಬ್ಬ ಮುಖ್ಯಸ್ಥ ಹಾಗೂ ಆತನಿಗೆ ಮೂರು ಮಂದಿ ಸಹಾಯಕರು. ಇನ್ನು ಯಜ್ಞ ಮಾಡಿಸುವ ಯಜಮಾನ ಹಾಗೂ ಆತನ ಪತ್ನಿ. ಒಟ್ಟಿಗೆ ಹದಿನೆಂಟು ಮಂದಿ. ಇಲ್ಲಿ ಬ್ರಹ್ಮತ್ತ್ವ ವಹಿಸಿರುವವನು ಯಾವ ಮಂತ್ರವನ್ನೂ ಹೇಳುವುದಿಲ್ಲ, ಆದರೆ ಯಜ್ಞದ ವಿಧಿ-ವಿಧಾನದಲ್ಲಿ  ಯಾವುದೇ ಲೋಪವಾದರೂ ಸಹ ಆತ ಜವಾಬ್ದಾರಿ.

ಹಿಂದೆ ಪ್ರಮುಖವಾಗಿ ಎರಡು ತರಹದ ಯಾಗ ಮಾಡುತ್ತಿದ್ದರು. ಒಂದು ಶುದ್ಧ ಶಾಖಾಹಾರಿಗಳ ಯಾಗ ಹಾಗು ಇನ್ನೊಂದು ಮಾಂಸಾಹಾರಿಗಳು ಮಾಡುವ ಯಾಗ. ಆಗಿನ ಕಾಲದಲ್ಲಿ ಪ್ರಮುಖವಾಗಿ ಯಾಗ ಮಾಡುತ್ತಿದ್ದವರು ಕ್ಷತ್ರಿಯರು, ಅವರು ಮಾಂಸಹಾರಿಗಳಾಗಿದ್ದರು. ನಾವು ಏನು ತಿನ್ನುತ್ತೆವೋ ಅದನ್ನು ದೇವರಿಗೆ ಅರ್ಪಿಸಿ ಯಜ್ಞಶೇಷವೆಂದು ತಿನ್ನುವುದು ಪ್ರಾಚೀನ ಸಂಪ್ರದಾಯವಾಗಿತ್ತು. ಕ್ಷತ್ರಿಯರು ಯಾಗದಲ್ಲಿ ಹದಿನೆಂಟು ಬಗೆಯ ಪ್ರಾಣಿಗಳನ್ನು (ಒಂಬತ್ತು ಸಾಕು ಪ್ರಾಣಿ ಹಾಗೂ ಒಂಭತ್ತು ಕಾಡು ಪ್ರಾಣಿ) ಭಗವಂತನಿಗೆ ಬಲಿಯಾಗಿ ಅರ್ಪಿಸಿ ಯಾಗ ಮಾಡುತ್ತಿದ್ದರು.

ಭಗವಂತ, ಯಜ್ಞ ಮಾಡುವವರಲ್ಲಿರುವವನೂ ಅವನೇ, ಹವಿಸ್ಸಿನಲ್ಲಿರುವವನೂ ಅವನೇ, ಯಜ್ಞವನ್ನು ಸ್ವೀಕಾರ ಮಾಡುವವನೂ ಅವನೇ. ಇಂತಹ ಭಗವಂತ ಯಜ್ಞ ಸಾಧನಃ.

೯೮೨) ಯಜ್ಞಾಂತಕೃತ್

ಯಾವುದು ನಿಜವಾದ ಯಜ್ಞ, ಯಾವುದು ತಪ್ಪು, ಯಾವುದು ಸರಿ, ಯಾವುದು ಯಜ್ಞವಲ್ಲ ಎಂದು ಕೊನೆಯದಾಗಿ ನಿರ್ಧರಿಸುವವನು ಭಗವಂತ. ಆತ ಮೆಚ್ಚದ ಯಾವುದೇ ಪೂಜೆ ಯಜ್ಞವಾಗದು. ಧರ್ಮಕ್ಕೆ ಚ್ಯುತಿ ಬರುವಂತಹ, ಸ್ವಾರ್ಥದಿಂದ ಅಹಂಕಾರದಿಂದ ಮಾಡುವ ಯಜ್ಞವನ್ನು ಆತ ಸ್ವೀಕರಿಸದೇ ಧ್ವಂಸ ಮಾಡುತ್ತಾನೆ. ಇದಕ್ಕೆ ಉತ್ತಮ ಉದಾಹರಣೆ ದಕ್ಷಯಜ್ಞ. ದಕ್ಷ ನಿಯಮಿತವಾಗಿ ಯಜ್ಞ ಪ್ರಾರಂಭಿಸಿದ. ಆದರೆ ಅಹಂಕಾರದಿಂದ ಶಿವನನ್ನು ಅಪಮಾನ ಮಾಡಿದ. ಇಂತಹ ಅಹಂಕಾರಭರಿತ ಯಜ್ಞವನ್ನು ಭಗವಂತ ಸ್ವೀಕರಿಸದೇ ವೀರಭದ್ರನ ಮುಖೇನ ಸಂಪೂರ್ಣ ಯಜ್ಞವನ್ನು ಧ್ವಂಸ ಮಾಡಿದ. ಹಿಂದೆ ಹೇಳಿದಂತೆ ಶಿವಶಕ್ತಿ-ವಿಷ್ಣುಶಕ್ತಿ ಹಾಲಿನಲ್ಲಿರುವ ಬೆಣ್ಣೆಯಂತೆ, ಇಲ್ಲಿ ನಾವು ಅಪಮಾನವಾಗುವಂತೆ ವರ್ತಿಸಿದರೆ ಅದನ್ನು ಭಗವಂತ ಎಂದೂ ಮೆಚ್ಚುವುದಿಲ್ಲ. ಭಗವಂತನಿಗೆ ಅರ್ಪಿಸಿ ಮಾಡುವ ಪ್ರತಿಯೊಂದು ಕೆಲಸವೂ ಯಜ್ಞ. ಅಹಂಕಾರದಿಂದ ಮಾಡುವ ಯಾವ ಯಜ್ಞವೂ ಯಜ್ಞವಲ್ಲ. ಹೀಗೆ ಯಜ್ಞದ ಅಂತ್ಯವನ್ನು ನಿರ್ಧರಿಸುವ ಭಗವಂತ ಯಜ್ಞಾಂತಕೃತ್.

೯೮೩) ಯಜ್ಞಗುಹ್ಯಮ್

ಜಗತ್ತಿನಲ್ಲಿ ನಡೆಯುವ ಎಲ್ಲಾ ಯಜ್ಞದ ರಹಸ್ಯ ತಿಳಿದ, ಯಜ್ಞದಲ್ಲಿ ನಿಗೂಢವಾಗಿ ತುಂಬಿರುವ ಭಗವಂತ ಯಜ್ಞಗುಹ್ಯಮ್.

೯೮೪) ಅನ್ನಮ್

ಅನ್ನಮ್ ಅಂದರೆ ಭೋಜ್ಯ. ತೈತ್ತಿರೀಯ  ಉಪನಿಷತ್ತಿನಲ್ಲಿ  ಬರುವ ಈ ಶ್ಲೋಕ ಈ ನಾಮವನ್ನು ಹಾಗೂ ಮುಂದಿನ ನಾಮವನ್ನು ಸ್ಪಷ್ಟವಾಗಿ ಹೇಳುತ್ತದೆ.

ಅಹಮ್  ಅನ್ನಮ್  ಅಹಮ್  ಅನ್ನಮ್  ಅಹಮ್  ಅನ್ನಮ್ |
ಅಹಮ್ ಅನ್ನಾದೋऽಹಮ್  ಅನ್ನಾದೋऽಹಮ್ ಅನ್ನಾದಃ ||

"ನಾನೆ ಅನ್ನ ನಾನೆ ಅನ್ನಾದ"; ಭೋಜ್ಯವಾಗಿ ಈ ಪ್ರಪಂಚದಲ್ಲಿ ತುಂಬಿರುವ ಸಮಸ್ತ ವಸ್ತುಗಳ ಒಳಗೆ ಚೈತನ್ಯವಾಗಿ ತುಂಬಿರುವ ಭಗವಂತ ಅನ್ನಮ್. ಅನ್ನದ ಅಭಿಮಾನಿ ದೇವತೆಯಾದ ಚತುರ್ಮುಖನಲ್ಲಿ ಸನ್ನಿಹಿತನಾಗಿರುವ ಭಗವಂತ ಅನ್ನಮ್.

೯೮೫) ಅನ್ನಾದ

ಸರ್ವ ಭೋಜ್ಯವನ್ನು ಜೀವದೊಳಗಿದ್ದು ಭೋಗಿಸುವ, ಅನ್ನದ ಅಭಿಮಾನಿ ದೇವತೆ ಚತುರ್ಮುಖನನ್ನೂ  ಕೂಡಾ ಮಹಾ ಪ್ರಳಯದಲ್ಲಿ ಕಬಳಿಸುವ ಭಗವಂತ ಅನ್ನಾದ.
ಈ ಶ್ಲೋಕದಲ್ಲಿ ಪರಸ್ಪರ ವಿರುದ್ಧ ಅರ್ಥವನ್ನು ಕೊಡುವ 'ಏವ, ಚ' ಎನ್ನುವ ಎರಡು ಅವ್ಯಯಗಳಿವೆ. ಚ ಎಂದರೆ ಕೂಡಾ, ಏವ ಎಂದರೆ ಅವನದ್ದೇ ಎನ್ನುವ ಅರ್ಥವನ್ನು ಕೊಡುತ್ತವೆ. ಅಂದರೆ ಈ ಎಲ್ಲಾ ಹೆಸರುಗಳೂ ನಿನ್ನವೇ ಆದರೂ ಕೂಡಾ ಬೇರೆಯವರದ್ದೂ ಹೌದು. ಏಕೆಂದರೆ ಭಗವಂತನನ್ನು ಹೇಳದ ಶಬ್ಧ ಈ ಪ್ರಪಂಚದಲ್ಲಿಲ್ಲ. ಸರ್ವ ಶಬ್ಧವೂ ಕೂಡಾ ಮುಖ್ಯವಾಗಿ ಭಗವಂತನನ್ನು ಹೇಳುತ್ತವೆ-ನಂತರ ಇತರರನ್ನು ಹೇಳುತ್ತವೆ.

ಮುಂದುವರೆಯುವುದು....✍️💐

Thursday, June 22, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -104


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಭೂರ್ಭುವಃಸ್ವಸ್ತರುಸ್ತಾರಸ್ಸವಿತಾ ಪ್ರತಿತಾಮಹಃ |
ಯಜ್ಞೋ ಯಜ್ಞಪತಿರ್ಯಜ್ವಾ ಯಜ್ಞಾಂಗೋ ಯಜ್ಞವಾಹನಃ || 104 ||

೯೬೮) ಭೂರ್ಭುವಃಸ್ವಸ್ತರುಃ

ಭೂಃ+ಭುವಃ+ಸುವಃ+ಸ್ತರುಃ; ಈ ನಾಮವನ್ನು ನಾಲ್ಕು ನಾಮವಾಗಿ ಕಾಣಬಹುದು.  ಭೂಮಿ,ಆಕಾಶ ಹಾಗು ಸ್ವರ್ಗದಲ್ಲಿ ತುಂಬಿ ನಿಂತಿರುವ ಭಗವಂತನ ವಿಶ್ವ ರೂಪದ ವಿರಾಟ ಸ್ವರೂಪದ ಕಲ್ಪನೆಯನ್ನು ಈ ನಾಮ ಕೊಡುತ್ತದೆ. ಭೂಮಿ ಆಕಾಶ ಹಾಗು ಸ್ವರ್ಗದಲ್ಲಿ ತುಂಬಿರುವ, ಜ್ಞಾನಾನಂದದಿಂದ ಪರಿಪೂರ್ಣನಾದ  ಭಗವಂತ ನಮ್ಮನ್ನು ಸಂಸಾರ ಸಾಗರದಿಂದ ಪಾರು ಮಾಡುವವನು.

೯೬೯) ತಾರಃ

ಎಲ್ಲರನ್ನೂ ಸಂಸಾರ ದುಃಖದಿಂದ, ಸಮಸ್ಯೆಯಿಂದ ಪಾರುಮಾಡುವ, ಸಂಸಾರದಿಂದ ದಾಟಿಸಿ ನಮಗೆ ಸಂಪೂರ್ಣವಾದ ಸ್ವರೂಪಾನಂದವನ್ನು ಕೊಡುವ ಭಗವಂತ ತಾರಃ.

೯೭೦) ಸವಿತಾ

ಸೂರ್ಯನಾರಾಯಣನಲ್ಲಿ ಸನ್ನಿಹಿತನಾಗಿರುವ ಗಾಯತ್ರಿಪ್ರತಿಪಾಧ್ಯ ಭಗವಂತ ಈ ಜಗತ್ತನ್ನು ಹೆತ್ತ ತಂದೆ. ಈ ಲೋಕದ ತಂದೆಯೂ-ತಾಯಿಯೂ ಅವನೇ.

೯೭೧) ಪ್ರಪಿತಾಮಹಃ

ಎಲ್ಲರಿಗೂ ಮೂಲ ಕಾರಣನಾದ ಭಗವಂತ ಜಗದ ಮುತ್ತಜ್ಜ.

೯೭೨) ಯಜ್ಞಃ

ಜ್ಞಾನರೂಪಿಯಾಗಿ ಎಲ್ಲೆಡೆ ಇರುವ ಭಗವಂತ, ಎಲ್ಲಾ ಕ್ರಿಯೆಗಳಿಂದ ಎಲ್ಲರೂ ಆರಾಧಿಸಬೇಕಾದ, ಯಜ್ಞದ ಅಂತರ್ಯಾಮಿ.

೯೭೩) ಯಜ್ಞಪತಿಃ

ಯಜ್ಞಗಳ ಸ್ವಾಮಿ ಹಾಗು ಪಾಲಕ ಭಗವಂತ ಯಜ್ಞಪತಿಃ. ಯಜ್ಞವನ್ನು ಸ್ವೀಕರಿಸಿ ಫಲ ಕೊಡುವವನು.

೯೭೪) ಯಜ್ವಾ

ನಮ್ಮಿಂದ ಯಜ್ಞ ಮಾಡಿಸುವ ಭಗವಂತ ಯಜ್ವಾ. ಯಜ್ಞ ಮಾಡುವ ಯಜಮಾನನೊಳಗೆ ಅಂತರ್ಯಾಮಿಯಾಗಿದ್ದು ಯಜ್ಞ ಮಾಡಿಸುವವನೂ ಅವನೇ!

೯೭೫) ಯಜ್ಞಾಂಗಃ

ಯಜ್ಞದಲ್ಲಿ ಬಳಸುವ ಹವಿಸ್ಸುಗಳನ್ನು ತನ್ನ ಅಂಗಗಳಿಂದ ಸೃಷ್ಟಿಸಿದ ಭಗವಂತ ಯಜ್ಞಾಂಗಃ.

೯೭೬) ಯಜ್ಞವಾಹನಃ.

ಯಜ್ಞವನ್ನು ವಾಹನವಾಗಿಸಿಕೊಂಡು ಬರುವವ. ಎಲ್ಲಿ ಯಜ್ಞ ನೆಡೆಯುತ್ತಿರುತ್ತದೋ ಅಲ್ಲಿ ಭಗವಂತನ ವಿಶೇಷ ಸನ್ನಿಧಾನವಿರುತ್ತದೆ. ಇಲ್ಲಿ ಯಜ್ಞ ಅಂದರೆ ಅಗ್ನಿ ಮುಖೇನ ಮಾಡುವ ಯಜ್ಞ ಮಾತ್ರ ಅಲ್ಲ, ಜ್ಞಾನಯಜ್ಞ ಕೂಡಾ ಒಂದು ವಿಶಿಷ್ಟವಾದ ಯಜ್ಞ,

ಮುಂದುವರೆಯುವುದು....✍️💐

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -103


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ |
ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗಃ || 103 ||

೯೬೦) ಪ್ರಮಾಣಮ್

ಭಗವಂತ ಸರ್ವ ಪ್ರಮಾಣಗಳ ನೆಲೆ. ಎಲ್ಲವನ್ನು ಹುಟ್ಟಿಸುವವನು, ಎಲ್ಲವನ್ನು ಮುಗಿಸುವವನು ಆದ, ಎಲ್ಲಾ ಯಥಾರ್ಥಜ್ಞಾನದ ಕಡಲಾದ ಭಗವಂತ  ಪ್ರಮಾಣಮ್. ನಚಿಕೇತನಿಗೆ ಯಮ - ಎಲ್ಲಾ ಪ್ರಶ್ನೆಗಳಿಗೆ ಉತ್ತರವಿರುವ, ಪ್ರಪಂಚದ ಸಾರ ಸಂಗ್ರಹವಾದ ಬೀಜಾಕ್ಷರವನ್ನು ಹೇಳುವಾಗ ಭಗವಂತನನ್ನು ಕುರಿತು ಈ ರೀತಿ ಹೇಳುತ್ತಾನೆ:

ಸರ್ವೇ ವೇದಾ ಯತ್ ಪದಮಾನನಂತಿ
ತಪಮ್ಸಿ ಸರ್ವಾಣಿ ಚ ಯದ್ ವದಂತಿ,
ಯದ್ ಇಚ್ಚಂತೋ ಬ್ರಹ್ಮಚರ್ಯಂ ಚರಂತಿ ,
ತತ್ ತೇ ಪದಂ ಸಂಗ್ರಹೇನ  ಬ್ರವೀಮಿ:
ಓಂ ಇತ್ಯೇತತ್.

ಅಂದರೆ " ಸಮಸ್ತ ವೇದದ ಸಮಸ್ತ ಮಂತ್ರ, ವೇದದ ಪ್ರತಿಯೊಂದು ವಾಕ್ಯ, ಪ್ರತಿಯೊಂದು ಶಬ್ದ, ಈ ಪ್ರಪಂಚದಲ್ಲಿರುವ ಪ್ರತಿಯೊಂದು ನಾದ ಅಂತತಃ ಭಗವಂತನನ್ನು ಹೇಳುತ್ತದೆ. ಸರ್ವ ತಪಗಳು(ಆಲೋಚನೆಗಳು), ಭಗವಂತನನ್ನೇ ಹೇಳುತ್ತವೆ. ಇಂತಹ ಭಗವಂತನ ಅರಿವು ಬಂದಾಗ ಈ ಪ್ರಪಂಚದಲ್ಲಿರುವ ಪ್ರತಿಯೊಂದು ತರ್ಕಗಳು ಆ ಭಗವಂತನನ್ನೇ ಪ್ರಮಾಣಿಕರಿಸುತ್ತವೆ".

೯೬೧) ಪ್ರಾಣನಿಲಯಃ.

ಭಗವಂತ ಇರುವುದು ಪ್ರಾಣತತ್ವದಲ್ಲಿ. ಭಗವಂತನನ್ನು ಅರಿಯಬೇಕಾದರೆ ಮೊದಲು ಪ್ರಾಣತತ್ವದ ಅರಿವು ಬೇಕು. ನಮ್ಮೊಳಗಿದ್ದು, ನಮಗೆ ಉಸಿರಾಡಿಸುವ ಪ್ರಾಣದೇವರೊಳಗೆ ಭಗವಂತನಿದ್ದಾನೆ. ಆತ ಪ್ರಾಣನಿಲಯಃ.

೯೬೨) ಪ್ರಾಣಭೃತ್

ನಮ್ಮನ್ನು ಧರಿಸಿದವನು ಪ್ರಾಣನಾದರೆ, ಪ್ರಾಣದೇವರನ್ನು ಧರಿಸಿದವನು ಭಗವಂತ. ಆತ ಪ್ರಾಣಭೃತ್.

೯೬೩) ಪ್ರಾಣಜೀವನಃ

ಪ್ರಾಣ ಶಕ್ತಿಯ ಮೂಲಕ ನಮಗೆಲ್ಲಾ ಬದುಕು ಕೊಟ್ಟವ, ಪ್ರಾಣ ದೇವರಿಗೂ ಕೂಡಾ ಬದುಕು ಕೊಟ್ಟವ ಭಗವಂತ. ಪ್ರಾಣ ದೇವರು ನಮ್ಮನ್ನು ಉಸಿರಾಡಿಸಿದರೆ, ಪ್ರಾಣದೇವರನ್ನು ಉಸಿರಾಡಿಸುವವನು ಪ್ರಾಣಜೀವನಃ ಭಗವಂತ.

೯೬೪) ತತ್ವಮ್

ತತವಾದ 'ವಾ'; ವಾ ಎಂದರೆ ವಿಜ್ಞಾನ. ಭಗವಂತ ಜ್ಞಾನದ ಕಡಲು. ಅಂತಹ ಭಗವಂತನನ್ನು ಹುಡುಕಿ ಅನುಭವಿಸಬೇಕು. ಅದು ಕಣ್ಣಿಗೆ ಕಾಣುವ ವಸ್ತುವಲ್ಲ. ಅಪರಂಪಾರವಾದ ಜ್ಞಾನದ ಕಡಲನ್ನು ನಾವು ಸ್ವರೂಪಭೂತವಾಗಿ ಅನುಭವಿಸಬೇಕು.

೯೬೫) ತತ್ವವಿತ್

ಜ್ಞಾನದ ಕಡಲಾದ ಮಹಾ ತತ್ವವನ್ನು ಸಂಪೂರ್ಣ ತಿಳಿದವರಿಲ್ಲ. ಅದನ್ನು ಸಂಪೂರ್ಣ ಬಲ್ಲವನು ಅವನೊಬ್ಬನೆ.

೯೬೬) ಎಕಾತ್ಮಾ

ಭಗವಂತನೊಬ್ಬನೇ ಆತ್ಮ ಶಬ್ಧವಾಚ್ಯ. ಸರ್ವ ಆತ್ಮಗಳ ಪ್ರಧಾನ. ಅನಂತ ಸುಖವನ್ನು ಕೊಡಬಲ್ಲ, ಜ್ಞಾನಾನಂದಮಯವಾದ ಏಕೈಕ ತತ್ವ ಭಗವಂತ ಎಕಾತ್ಮಾ.

೯೬೭) ಜನ್ಮಮೃತ್ಯುಜರಾತಿಗಃ

ಜನ್ಮ-ಮೃತ್ಯ-ಷಡಾತ್ಮಗಳನ್ನು ದಾಟಿದವನು. ಇಲ್ಲಿ ಜರಾ ಷಡಾತ್ಮವನ್ನು ಸೂಚಿಸುತ್ತದೆ. ಅವುಗಳೆಂದರೆ ಮೋಹ , ಶೋಕ ,ಕ್ಷುತ್ (ಹಸಿವು), ಪಿಪಾಸು(ಬಾಯಾರಿಕೆ) , ಜರ(ಅಜ್ಞಾನ)  ಮತ್ತು ವ್ಯಾಧಿ. ಭಗವಂತ ಇವುಗಳೆಲ್ಲವುದರ ಆಚೆಗಿರುವವನು ಹಾಗು ನಮ್ಮನ್ನು ಇದರಿಂದ ಪಾರುಮಾಡುವವನು. ನಮ್ಮೊಳಗೆ ಇರುವ ಭಗವಂತನಿಗೆ ಎಂದೂ ಇದರ ಲೇಪವಿಲ್ಲ. ಆತ ಸರ್ವವನ್ನೂ ಮೀರಿನಿಂತ ಜನ್ಮಮೃತ್ಯುಜರಾತಿಗಃ.

ಮುಂದುವರೆಯುವುದು....✍️💐

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -102


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಆಧಾರನಿಲಯೋsಧಾತಾ ಪುಷ್ಪಹಾಸಃ ಪ್ರಜಾಗರಃ |
ಊರ್ಧ್ವಗಃ ಸತ್ಪಥಾಚಾರಃ ಪ್ರಾಣದಃ ಪ್ರಣವಃ ಪಣಃ || 102 ||

೯೫೧) ಆಧಾರನಿಲಯಃ

ಇಡೀ ಜಗತ್ತಿನ ಆಧಾರ ಭಗವಂತ. ಆತ ಜಗತ್ತಿಗೆ ಶಾಶ್ವತ ನೆಲೆಕೂಡಾ ಹೌದು.

೯೫೨) ಧಾತಾ(ಅಧಾತಾ)

ಜಗತ್ತನ್ನು ಧರಿಸಿ ಪೋಷಣೆ ಮಾಡುವ ಭಗವಂತ ಧಾತಾ. ಸಂಸಾರದಲ್ಲಿ ಜೀವರನ್ನು ಧರಿಸಿ, ಮುಕ್ತಿಯಲ್ಲಿ ಪೋಷಿಸುವ ಭಗವಂತ ಅಧಾತ ಕೂಡಾ ಹೌದು. ಏಕೆಂದರೆ ಆತನನ್ನು ಧರಿಸಿದ ಇನ್ನೊಂದು ಶಕ್ತಿ ಇಲ್ಲ. ತಾನೇ ತಾನಾಗಿ ನಿಂತು ವಿಶ್ವ ಧಾರಣೆ ಮಾಡಿದ ಭಗವಂತ ಅಧಾತ.  

೯೫೩) ಪುಷ್ಪಹಾಸಃ

ಈ ನಾಮವನ್ನು ಕೇಳಿದ ತಕ್ಷಣ ಹೊಳೆಯುವ ಅರ್ಥ 'ಹೂವಿನಂತಹ ನಗುಮೊಗದವನು'. ಭಗವಂತನ ಮುಖದಲ್ಲಿ ಸದಾ ತುಂಬಿದ ಮಂದಹಾಸವಿರುತ್ತದೆ. ನೋಡಿದವರ ಹೃದಯವನ್ನು ಸೂರೆಗೊಳ್ಳುವ ಚೆಲುನಗು. ಭಗವಂತನ ಮೊಗದಲ್ಲಿ ನಗುವಿರದ ಕ್ಷಣವಿಲ್ಲ. ಮಹಾಭಾರತದ ಘೋರಯುದ್ಧದ ಮೊದಲು ಅರ್ಜುನ ಕುಸಿದುಬಿದ್ದಾಗಲೂ ಸಹ ಕೃಷ್ಣ ನಗುತ್ತಿದ್ದ! ಆತನ ನಗು ಎಲ್ಲರನ್ನೂ ಮರಳುಗೊಳಿಸುವ,ನಮ್ಮನ್ನು ಪರಿಪುಷ್ಟರನ್ನಾಗಿ ಮಾಡುವ ಮಾಂಗಲಿಕ ನಗು. ಇಂತಹ ನಗುವಿನ ಮೂರ್ತಿಯನ್ನು ನಮ್ಮ ಧ್ಯಾನದಲ್ಲಿ ಕಾಣುವ ಪ್ರಯತ್ನಮಾಡಬೇಕು.

 
೯೫೪) ಪ್ರಜಾಗರಃ

ಭಕ್ತ ಜನರ ಭಕ್ತಿಯ ಕರೆಗೆ ಸದಾ ಎಚ್ಚರದಲ್ಲಿದ್ದು ಕಾಯುವ ಭಗವಂತ ಎಂದೂ ನಿದ್ರಿಸುವುದಿಲ್ಲ. ಆತನ ನಿದ್ರೆ ಎಂದರೆ ಕೇವಲ ಯೋಗನಿದ್ರೆ. ಸೃಷ್ಟಿ-ಸ್ಥಿತಿಯಲ್ಲಿ ಜನರಕ್ಷಕನಾಗಿದ್ದು, ಪ್ರಳಯ ಕಾಲದಲ್ಲಿ ಪ್ರಜಾ 'ಗರಣ' ಮಾಡುವ ಭಗವಂತ ಮೋಕ್ಷಪ್ರದ.

೯೫೫) ಊರ್ಧ್ವಗಃ

ಭಗವಂತ  ಎಲ್ಲಕ್ಕಿಂತ ಮೇಲಿರುವವನು. ಗೀತೆಯಲ್ಲಿ ಹೇಳಿದಂತೆ:

ಊರ್ಧ್ವಮೂಲಮಧಃಶಾಖಮಶ್ವತ್ಥಂ ಪ್ರಾಹುರವ್ಯಯಮ್ |
ಛನ್ದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ||

ಸಂಸಾರ ವೃಕ್ಷದ ಬುಡ ಭಗವಂತ. ಆತ ಸದಾ ಉನ್ನತಿಯಲ್ಲಿರುತ್ತಾನೆ. ನಾವು ಎತ್ತರಕ್ಕೇರಿದಾಗ(ಮುಕ್ತಿ), ಅಲ್ಲಿಯೂ ಕೂಡಾ ಆತ ಎತ್ತರದಲ್ಲಿದ್ದು ನಮ್ಮನ್ನು ಪೋಷಿಸುತ್ತಾನೆ. ಇಂತಹ ಭಗವಂತ. ಊರ್ಧ್ವಗಃ.

೯೫೬) ಸತ್ಪಥಾಚಾರಃ

ಸತ್+ಪಥ ಎಂದರೆ ಪ್ರಾಚೀನ ಸಂಸ್ಕೃತದಲ್ಲಿ 'ನಕ್ಷತ್ರ-ಪಥ'. ನಕ್ಷತ್ರ ಪಥದಲ್ಲಿ ನೆಲಿಸಿದವನು, ನಕ್ಷತ್ರಪಥದ ಕೇಂದ್ರಬಿಂದು ಭಗವಂತ ಸತ್ಪಥಾಚಾರಃ. ಧ್ರುವ ನಕ್ಷತ್ರದಲ್ಲಿ ನೆಲೆಸಿರುವ ಶಿಂಶುಮಾರ ನಾಮಕ ಭಗವಂತ ನಕ್ಷತ್ರ ಪಥದ ಕೇಂದ್ರ. 'ಸತ್ಪಥ' ಎಂದರೆ ಸಜ್ಜನರು ನಡೆಯುವ ದಾರಿ, ಇಂತಹ ಸತ್ಪಥದ ನಡೆಯನ್ನು ನಡೆಸುವ ಭಗವಂತ ಸತ್ಪಥಾಚಾರಃ.

೯೫೭) ಪ್ರಾಣದಃ

ನಿಷ್ಕ್ರೀಯವಾದ ಜಡ ಪ್ರಪಂಚಕ್ಕೆ ಚಲನೆ ಕೊಟ್ಟ ಭಗವಂತ ಪ್ರಾಣದಃ. ಈ ಜಗತ್ತಿನ ಸಮಸ್ತ ಚಲನೆಯ ಮೂಲಶಕ್ತಿ.   "ಅಗ್ನಿಮೀಳೇ ಪುರೋಹಿತಂ " ಸ್ವತಃ ಚಲಿಸಲಾಗದ ಪ್ರಪಂಚಕ್ಕೆ ಚಲನೆ ಕೊಡುವ ಶಕ್ತಿ.

೯೫೭) ಪ್ರಣವಃ

ಸರ್ವ ಶಬ್ಧಗಳಿಂದ ಸ್ತುತಿಸಲ್ಪಡುವವನು.ಮೂರು ಅವಸ್ಥೆಗಳಲ್ಲಿ(ಎಚ್ಚರ, ಕನಸು ಹಾಗು ನಿದ್ದೆ) ಮೂರು ರೀತಿಯ ಅನುಭೂತಿಯನ್ನು ಕೊಡುವ ಓಂಕಾರ ವಾಚ್ಯ ಭಗವಂತ ಪ್ರಣವಃ.

೯೫೯) ಪಣಃ

ಜಗತ್ತಿನ ಸಮಸ್ತ ವ್ಯವಹಾರವನ್ನು ನಡೆಸುವವನು ಹಾಗು ಸಮಸ್ತ ಶಾಸ್ತ್ರಗಳಿಂದ ಸ್ತುತಿಸಲ್ಪಡುವವನು.

ಮುಂದುವರೆಯುವುದು....✍️💐

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -101


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಅನಾದಿರ್ಭೂರ್ಭುವೋ ಲಕ್ಷ್ಮೀಃ ಸುವಿರೋ ರುಚಿರಾಂಗದಃ |
ಜನನೋ ಜನಜನ್ಮಾದಿರ್ಭೀಮೋ ಭೀಮಪರಾಕ್ರಮಃ || 101 ||

೯೪೩) ಅನಾದಿಃ

ಭಗವಂತ ಆದಿ-ಅಂತ ಇಲ್ಲದವನು, ಆತನ ಸೃಷ್ಟಿ ಅನಾದಿನಿತ್ಯ.

೯೪೪) ರ್ಭೂರ್ಭುವೋ ಲಕ್ಷ್ಮೀಃ

ಈ ನಾಮವನ್ನು ಅನೇಕ ರೀತಿಯಲ್ಲಿ ಒಡೆದು ಬೇರೆ ಬೇರೆ ಅರ್ಥವನ್ನು ಕಾಣಬಹುದು. ಭೂಃ, ಭುವಃ, ಲಕ್ಷ್ಮೀಃ, ಭೂರ್ಭುವಃ, ಭುವೋ ಲಕ್ಷ್ಮೀಃ, ಭೂರ್ಭುವೋ ಲಕ್ಷ್ಮೀಃ ಇತ್ಯಾದಿ. ಭೂಃ ಎಂದರೆ ಸದಾ ಭವತಿ, ಎಂದೆಂದೂ ಆನಂದಮಯನಾಗಿರುವ ಪರಿಪೂರ್ಣ ಸ್ವರೂಪ; ಭುವಃ ಎಂದರೆ ಜಗತ್ತಿನಲ್ಲಿರುವ ಸರ್ವ ಉನ್ನತಿಕೆಯ ಉನ್ನತಿಯಲ್ಲಿರುವವನು, ಅದಕ್ಕಿಂತ ಮೇಲಿರುವ ಇನ್ನೊಂದು ವಸ್ತುವಿಲ್ಲ; ಲಕ್ಷ್ಮೀಃ ಎಂದರೆ ಸರ್ವ ಲಕ್ಷಣಗಳ ಸಾಕಾರ ಮೂರ್ತಿ. ರ್ಭೂರ್ಭುವೋ ಲಕ್ಷ್ಮೀಃ ಎಂದರೆ ಭೂಃ, ಭುವಃ ಸುವಃ -ಈ ಮೂರು ಲೋಕಗಳ ಸಂಪತ್ತಿನ ಒಡೆಯ.

೯೪೫) ಸವೀರಃ

ಪ್ರತಿಯೊಬ್ಬರೊಳಗಿದ್ದು, ಒಬ್ಬೊಬ್ಬರಲ್ಲಿ ಅವರವರ ಚೇತನದ ಸ್ಥಿತಿ-ಗತಿಗೆ ತಕ್ಕಂತೆ ಪ್ರೇರಣೆಯನ್ನು ಕೊಟ್ಟು ಆನಂದವನ್ನು ಕೊಡುವವನು ಸವೀರಃ. ಇಂತಹ ಸುಖ ಕಾರ್ಯಕ್ಕೆ ಅಡ್ಡಗಾಲಾಗಿ ಬರುವ ದುಷ್ಟ ಶಕ್ತಿಯನ್ನು ದಮನಮಾಡುವ ವೀರ ಭಗವಂತ ಸವೀರಃ. ಮಹಾ ವೀರರಾದ ಗರುಡ(ವಿ) ಮತ್ತು ಪ್ರಾಣ(ಈರ) ದೇವರಿಂದ ಸದಾ ಸುತ್ತುವರಿದಿರುವ ಭಗವಂತ ಸವೀರಃ.

೯೪೫) ರುಚಿರಾಂಗದಃ
ಸುಂದರವಾದ ತೊಳ್ಭಂದಿ ತೊಟ್ಟವನು. ಸದಾ ಬೆಳಕನ್ನು ಕೊಡುವ ಜ್ಞಾನಾನಂದಮಯವಾದ ಆಭರಣ ತೊಟ್ಟ ಭಗವಂತ ರುಚಿರಾಂಗದಃ. ಹೀಗೆ ಆನಂದಮಯವಾದ ಸ್ವರೂಪಭೂತವಾದ ಅಂಗವುಳ್ಳ ಭಗವಂತ ನಮಗೆ ಮೋಕ್ಷದಲ್ಲಿ ಸ್ವರೂಪಭೂತ ಶರೀರವನ್ನು ಕರುಣಿಸುವ ಕರುಣಾಮೂರ್ತಿ.

೯೪೭) ಜನನಃ

ಜನಯತೀತಿ ಜನನಃ; ಇಡೀ ಜಗತ್ತಿನ ಸೃಷ್ಟಿಗೆ ಕಾರಣನಾದ ಭಗವಂತ ಜನನಃ. ಅದೇ ರೀತಿ ಆತ ನಜನಯತಿ ಕೂಡಾ ಹೌದು. ಅಂದರೆ ನಮಗೆ ಹುಟ್ಟು ಇಲ್ಲದ ಮೋಕ್ಷ ಸ್ಥಿತಿಯನ್ನು ದಯಪಾಲಿಸುವವನು.

೯೪೯) ಜನಜನ್ಮಾದಿಃ

ಜೀವದ ಹುಟ್ಟಿಗೆ ಮೂಲ ಕಾರಣ ಭಗವಂತ-ಜನಜನ್ಮಾದಿಃ. ಪ್ರತಿಯೊಂದು ಜೀವಕ್ಕೆ ಒಂದು ಜನ್ಮವಿದೆ. ಈ ಜನ್ಮಕ್ಕೆ ಆದಿ ಕಾರಣ ಭಗವಂತ. ಜೀವದ ಹುಟ್ಟನ್ನು ಸ್ವೀಕಾರ ಮಾಡಿ ಮುಂದೆ ಹುಟ್ಟಿಲ್ಲದ ಮೋಕ್ಷವನ್ನು ಕರುಣಿಸುವ ಭಗವಂತ ಜನಜನ್ಮಾದಿಃ.

೯೪೯) ಭೀಮಃ

ತಪ್ಪು ಮಾಡಿದವರಿಗೆ ಭಯಂಕರ ಹಾಗು ಸಜ್ಜನರಿಗೆ ಅಭಯಂಕರನಾದ ಭಗವಂತ  ಭೀಮಃ.

೯೫೦) ಭೀಮಪರಾಕ್ರಮಃ

ಭಗವಂತನ ಪೌರುಷಕ್ಕೆ ಸಾಟಿ ಇಲ್ಲ. ಭಯ ಬರಿಸುವ ಪೌರುಷವುಳ್ಳ, ಸಜ್ಜನರಿಗೆ ಅಭಯಪ್ರದನಾದ ಭಗವಂತ ಭೀಮಪರಾಕ್ರಮಃ.

ಮುಂದುವರೆಯುವುದು....✍️💐

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -100


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಅನಂತರೂಪೋsನಂತಶ್ರೀರ್ಜಿತಮನ್ಯುರ್ಭಯಾಪಹಃ |
ಚತುರಶ್ರೋ ಗಭೀರಾತ್ಮಾ ವಿದಿಶೋ ವ್ಯಾದಿಶೋ ದಿಶಃ || 100 ||
೯೩೪) ಅನಂತರೂಪಃ

ಭಗವಂತ  ಒಬ್ಬನೆ, ಆದರೆ ಆತನ ರೂಪ ಹಲವು. ಅನೇಕ ರೂಪದಲ್ಲಿ ಜಗತ್ತಿನಾದ್ಯಂತ ತುಂಬಿರುವ ಭಗವಂತ ಅನಂತರೂಪಃ. ನಮ್ಮ ದೇಹದಲ್ಲಿ ಕೂಡಾ ಆತ ಅನೇಕ ರೂಪದಲ್ಲಿ ತುಂಬಿ ನಡೆಸುತ್ತಿದ್ದಾನೆ.

೯೩೫) ಅನಂತಶ್ರೀಃ

ಶ್ರೀ ಎಂದರೆ ಸಂಪತ್ತು. ಆಚಲವೂ ಅನಂತವೂ ಆದ ಹಿರಿಯ ತತ್ವ ಭಗವಂತ ಅನಂತಶ್ರೀಃ.

೯೩೬) ಜಿತಮನ್ಯುಃ

ಭಗವಂತನಿಗೆ ಅಹಂಕಾರವಾಗಲಿ, ಕೋಪವಾಗಲಿ, ಆಕ್ರೋಶವಾಗಲಿ ಇಲ್ಲ. ಇಲ್ಲಿ 'ಮನ್ಯು' ಎನ್ನುವ ಪದಕ್ಕೆ ಸಿಟ್ಟು ಎನ್ನುವುದು ಒಂದು ಅರ್ಥವಾದರೆ ಇನ್ನೊಂದು ಮುಖದಲ್ಲಿ 'ಮನ್ಯು' ಎನ್ನುವುದಕ್ಕೆ  ಯಜ್ಞ ಹಾಗೂ ಜ್ಞಾನ ಎನ್ನುವ ಇತರ ಅರ್ಥವಿದೆ. 'ಮನ್ಯುಸೂಕ್ತ' ಭಗವಂತನ ಮಾಂಗಲಿಕ ಕೋಪವನ್ನು ಹೊಗಳುವ ಸೂಕ್ತ. ಭಗವಂತ ಜ್ಞಾನಸ್ವರೂಪನಾಗಿ ಎಲ್ಲಾ ಯಜ್ಞಗಳನ್ನು ಸ್ವೀಕರಿಸುವ ಕೋಪವೇ ಇಲ್ಲದ ಯಜ್ಞಗಳ ಸ್ವಾಮಿ.

೯೩೭) ಭಯಾಪಹಃ

ನಮ್ಮನ್ನು ಭಯದಿಂದ ಪಾರು ಮಾಡುವ ಭಗವಂತ ಭಯಾಪಹಃ. ದೇವರಿದ್ದಾನೆ, ಆತ ನಮ್ಮನ್ನು ಎಂದೂ ಕೈಬಿಡುವುದಿಲ್ಲ ಎಂದು ಸಂಪೂರ್ಣ ನಂಬಿದರೆ ನಾವು ಎಂದೂ ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ. ಆತ  ಭಯಾಪಹಃ, ಆತ ನಮ್ಮನ್ನು ಭಯದಿಂದ ಪಾರುಮಾಡುತ್ತಾನೆ. ಉದಾಹರಣೆಗೆ ಒಂದು ಪುಟ್ಟ ಮಗು. ಅದು ಒಂಟಿಯಾಗಿದ್ದಾಗ ಒಂದು ಚಿಕ್ಕ ಹುಳವನ್ನು ಕಂಡರೂ ಭಯಪಡುತ್ತದೆ, ಆದರೆ ಅದೇ ಮಗು ತಾಯಿಯ ಮಡಿಲಲ್ಲಿದ್ದಾಗ ಎದುರಿಗೆ ಹುಲಿ ಚಿರತೆ ಬಂದರೂ ನಗುತ್ತಿರುತ್ತದೆ!  ಹೀಗೆ ನಾವು ಮಗುವಿನಂತೆ ಭಗವಂತನ ಮಡಿಲಲ್ಲಿ ಆಸರೆ ಕೋರಿದರೆ ಆತ ನಮಗೆ ರಕ್ಷಾ ಕವಚವಾಗುತ್ತಾನೆ.

೯೩೮) ಚತುರಶ್ರಃ

ಸಾಮಾನ್ಯವಾಗಿ ಒಂದು ಕೆಲಸ ತುಂಬಾ ಚೊಕ್ಕವಾಗಿ ಅಚ್ಚುಕಟ್ಟಾಗಿ ಆದರೆ ನಾವು 'ಸರ್ವಂ ಚತುರಶ್ರಮ್' ಎನ್ನುತ್ತೇವೆ.  ಆದರೆ ನಾವು ಮಾಡುವ ಯಾವುದೇ ಕೆಲಸ ನೂರಕ್ಕೆ ನೂರು ಚೊಕ್ಕವಾಗಿ ಅಚ್ಚುಕಟ್ಟಾಗಿ ಆಗುವುದೇ ಇಲ್ಲ. ಅಲ್ಲಿ ಯಾವುದಾದರೂ ಒಂದು ದೋಷ ಇದ್ದೇ ಇರುತ್ತದೆ. ಇದನ್ನು ಗೀತೆಯಲ್ಲಿ ಶ್ರೀಕೃಷ್ಣ ಹೀಗೆ ಹೇಳಿದ್ದಾನೆ:

ಸಹಜಂ ಕರ್ಮ ಕೌಂತೇಯ ಸದೋಷಮಪಿ ನ ತ್ಯಜೇತ್ |
ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾऽವೃತಾಃ ||

ಅಂದರೆ " ಬೆಂಕಿಯಿದ್ದಲ್ಲಿ ಹೊಗೆ ಇದ್ದಂತೆ ಸಕಲ ಕರ್ಮಗಳಲ್ಲಿ ದೋಷವಿದ್ದೇ ಇರುತ್ತದೆ, ಆದರೆ ನಾವು ಸಹಜವಾದ ಕರ್ಮವನ್ನು ಎಂದೂ ಬಿಡಬಾರದು"

ನಮ್ಮ ಪ್ರತಿಯೊಂದು ಕರ್ಮದಲ್ಲಿ ದೋಷವಿದ್ದಂತೆ ಭಗವಂತನ ಕರ್ಮದಲ್ಲಿ ದೋಷವಿರುವುದಿಲ್ಲ. ಆತ ಚತುರಶ್ರಃ.

ಅನಿರುದ್ಧ, ಸಂಕರ್ಷಣ, ಪ್ರದ್ಯುಮ್ನ ಮತ್ತು ವಾಸುದೇವ ಎನ್ನುವ ನಾಲ್ಕು ರೂಪದಲ್ಲಿದ್ದು, ಚತುರತೆಯಿಂದ ಲೋಕದ ಸೃಷ್ಟಿಮಾಡಿ, ನಾಲ್ಕು ಅವಸ್ಥೆಗಳನ್ನು(ಎಚ್ಚರ, ಕನಸು, ನಿದ್ದೆ ಹಾಗೂ ತುರೀಯ), ದೇಹವೆಂಬ ಹನ್ನೊಂದು ಬಾಗಿಲಿನ ನಗರವನ್ನು(ನವರಂದ್ರಗಳು, ಹೊಕ್ಕುಳು ಮತ್ತು ನೆತ್ತಿಯಲ್ಲಿನ ಬ್ರಹ್ಮರಂದ್ರ) ಅಚ್ಚುಕಟ್ಟಾಗಿ ನಿಯಂತ್ರಿಸುವ ಭಗವಂತ, ಜೀವನಿಗೆ ಮೋಕ್ಷದ ಮಾರ್ಗವನ್ನು ತೋರುವ ಕಾರುಣ್ಯಮೂರ್ತಿ.

೯೩೯) ಗಭೀರಾತ್ಮಾ

ಸರ್ವಾಂತರ್ಯಾಮಿ; ನಮ್ಮ ದೇಹದಲ್ಲಿ ಗುಪ್ತವಾಗಿ, ಅಳೆಯಲು ಅಸಾಧ್ಯವಾದ ಆಳದಲ್ಲಿ ಅಡಗಿರುವ ಸ್ವರೂಪಭೂತವಾದ ಮಹಾ ತತ್ವ ಭಗವಂತ ಗಭೀರಾತ್ಮಾ.

೯೪೦) ವಿದಿಶಃ

ವಿವಿಧವಾದ ಸಂದೇಶಗಳನ್ನು, ವಿವಿಧ ಮಾಧ್ಯಮದ ಮೂಲಕ ನಿರಂತರ ಕಳುಹಿಸುವ ಭಗವಂತ ವಿದಿಶಃ. ಭಗವಂತನ ಅವತಾರದಲ್ಲಿ ಕೂಡಾ ಇದನ್ನು ಕಾಣಬಹುದು. ಶ್ರೀಕೃಷ್ಣ ತನ್ನ ಅವತಾರ ಕಾಲದಲ್ಲಿ ನಮಗೆ ಕೊಟ್ಟ ಸಂದೇಶ ಅಪರಿಮಿತ. ಯುದ್ಧ ಭೂಮಿಯಲ್ಲಿ ಆತ ಕೊಟ್ಟ ಸಂದೇಶ ಭಗವದ್ ಗೀತೆ, ಆನಂತರ ಅರ್ಜುನನಿಗೆ ಏಕಾಂತದಲ್ಲಿ ಭೋದಿಸಿದ 'ಅನುಗೀತೆ'; ಇಷ್ಟೇ ಅಲ್ಲದೆ, ತನ್ನ ಅವತಾರ ಸಮಾಪ್ತಿಯ ನಂತರ ತನ್ನ ಸಂದೇಶವನ್ನು ದೇಶದ ಮೂಲೆ-ಮೂಲೆಗೆ ತಲುಪಿಸುವಂತೆ ಉದ್ಧವನಿಗೆ ಭೋದಿಸಿದ ಉದ್ಧವ ಗೀತೆ. ಹೀಗೆ ಆತ ಕೆಲವೊಮ್ಮೆ ಸ್ವಯಂ ಸಂದೇಶವನ್ನು ಸಾರಿದರೆ, ಇನ್ನು ಕೆಲವೊಮ್ಮೆ ತನ್ನ ಪ್ರತಿನಿಧಿಗಳನ್ನು ಕಳುಹಿಸಿ ಸಂದೇಶವನ್ನು ತಲುಪಿಸುತ್ತಾನೆ.

೯೪೧) ವ್ಯಾದಿಶಃ

ನಿರಂತರ ಸಂದೇಶವನ್ನು ಕಳುಹಿಸುವ ಭಗವಂತ ಕೆಲವೊಮ್ಮೆ ತನ್ನ ಆದೇಶವನ್ನು ಕೂಡಾ ರವಾನಿಸುತ್ತಾನೆ. ವಿವಿಧ ಆಜ್ಞೆಗಳನ್ನೀಯುವ ಭಗವಂತ  ವ್ಯಾದಿಶಃ

೯೪೨) ದಿಶಃ

ಭಗವಂತನ ಸಂದೇಶ, ಆಜ್ಞೆ, ಕೇವಲ ಒಂದು ಪ್ರದೇಶಕ್ಕೆ , ಒಂದು ದೇಶಕ್ಕೆ ಮೀಸಲಾಗಿಲ್ಲ. ಆತ ದಿಕ್ಕು ದಿಕ್ಕಿನಲ್ಲಿ ತುಂಬಿದ್ದಾನೆ. ಸರ್ವರಿಗೂ ಫಲವನ್ನೀಯುವ, ಉಪದೇಶಿಸುವ ಭಗವಂತ ದಿಶಃ.

ಮುಂದುವರೆಯುವುದು....✍️💐

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -99


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಉತ್ತಾರಣೋ ದುಷ್ಕ್ರತಿಹಾ ಪುಣ್ಯೋ ದುಃಸ್ವಪ್ನನಾಶನಃ |
ವೀರಹಾ ರಕ್ಷಣಃ ಸಂತೋ ಜೀವನಃ ಪರ್ಯವಸ್ಥಿತಃ || 99 ||

೯೨೫) ಉತ್ತಾರಣಃ

ಸಂಸಾರದಿಂದ ನಮ್ಮನ್ನು ಮೇಲೆತ್ತಿ ಪಾರುಮಾಡುವ ಭಗವಂತ ಉತ್ತಾರಣಃ. ಸಂಸಾರವೆಂಬ ಈ ಮಹಾ ಕಡಲಿನಲ್ಲಿ ದಡಸಿಗದೆ ಒದ್ದಾಡುತ್ತಿರುವ ನಮ್ಮನ್ನು ದಡಸೇರಿಸುವ ಏಕೈಕ ಶಕ್ತಿ.

೯೨೬) ದುಷ್ಕೃತಿಹಾ

ನಮ್ಮ ಪಾಪಗಳನ್ನು ಪರಿಹರಿಸುವವನು. ದುಷ್ಟರನ್ನು ಪಾಪಿಗಳನ್ನು ಕೊಲ್ಲುವವನು.

೯೨೪) ಪುಣ್ಯಃ

ಪುಣ್ಯ ಎಂದರೆ ಪಾವನ ಅಥವಾ ಪರಮ ಸುಂದರ. ಭೀಷ್ಮಾಚಾರ್ಯರು ವಿಷ್ಣು ಸಹಸ್ರನಾಮವನ್ನು ಧರ್ಮರಾಯನಿಗೆ ಹೇಳುವ ಮೊದಲು ಈ ರೀತಿ ಹೇಳುತ್ತಾರೆ "ಪವಿತ್ರಾಣಾಂ ಪವಿತ್ರಂ ಯೋ ಮಂಗಲಾನಾಂ ಚ ಮಂಗಲಮ್". ಭಗವಂತನ ನಾಮಕ್ಕೇ ಅಷ್ಟೊಂದು ಬಲವಿರುವಾಗ ಇನ್ನು ಆತನನ್ನು ನಾವು ಊಹಿಸುವುದೂ ಕಷ್ಟ. ಆತ ಪವಿತ್ರ ಹಾಗೂ ಪರಮ ಸುಂದರ. ಆತ ಪುಣ್ಯಃ. ಅಗ್ನಿ ಮತ್ತು ತೀರ್ಥಗಳಲ್ಲಿ ಶುದ್ಧಿಕಾರಕನಾಗಿ, ಪಾವನನಾಗಿ ತುಂಬಿದ ಭಗವಂತ ಪುಣ್ಯಃ. ನಮ್ಮೊಳಗೆ  ನಿಂತು ನಮ್ಮಿಂದ ಪುಣ್ಯ ಕರ್ಮಗಳನ್ನು ಮಾಡಿಸಿ ಮೋಕ್ಷ ಕೊಡುವ ಭಗವಂತ ಪುಣ್ಯಃ.

೯೨೫) ದುಃಸ್ವಪ್ನನಾಶನಃ

ನಮಗೆ ಕನಸು ಬೀಳುತ್ತದೆ, ಎಲ್ಲಾ ಕನಸುಗಳಿಗೆ ಅರ್ಥವಿದೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಆದರೆ ಅಪರೂಪಕ್ಕೆ ಬೀಳುವ ಕನಸು, ಬೆಳಗಿನ ಜಾವದ ಕನಸು ಅರ್ಥಪೂರ್ಣವಾಗಿರುತ್ತದೆ.  ಕೆಲವರು  ರಾತ್ರಿಯಿಂದ ಬೆಳಗಿನ ತನಕ ಕನಸಿನಲ್ಲೇ ಇರುತ್ತಾರೆ, ಇದು ಕೇವಲ ಮಾನಸಿಕ ಸಮಸ್ಯೆ. ಕೆಲವು ಅರ್ಥಪೂರ್ಣ ಕನಸು ನಮಗೆ ನಮ್ಮ ಜೀವನದಲ್ಲಿ ಮುಂದೆ ಆಗತಕ್ಕಂತಹ ಒಳಿತು ಕೆಡುಕುಗಳ ಬಗ್ಗೆ ಮುನ್ಸೂಚನೆ ಕೊಡುತ್ತವೆ. ಇನ್ನು ಕೆಲವೊಮ್ಮೆ ನಮಗೆ ಕನಸಿನ ಮುಖೇನ ದೈವವಾಣಿ ಕೂಡಾ ಬರುತ್ತದೆ. ಕನಸಿಗೆ ಅದರದ್ದೇ ಆದ ಭಾಷೆ ಇದೆ. ಇದನ್ನು ಕನಸಿನ ಮನಃಶಾಸ್ತ್ರ ಎನ್ನುತ್ತಾರೆ. ಇದನ್ನು ಪುರಾಣಗಳಲ್ಲಿ, ಉಪನಿಷತ್ತಿನಲ್ಲಿ ವಿವರವಾಗಿ ಹೇಳಿದ್ದಾರೆ. ಕನಸಿನಲ್ಲಿ ಬಣ್ಣಕ್ಕೆ ವಿಶೇಷ ಅರ್ಥವಿದೆ. ಉದಾಹರಣೆಗೆ ಕನಸಿನಲ್ಲಿ ಬಿಳಿ ಬಣ್ಣದ ಯಾವ ವಸ್ತುವನ್ನು ಕಂಡರೂ ಅದು ಮುಂದೆ ಆಗತಕ್ಕ ಶುಭವನ್ನು ಸೂಚಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಕೆಂಪುಬಣ್ಣದ ಯಾವ ವಸ್ತುವನ್ನು ಕಂಡರೂ ಕೆಟ್ಟದ್ದು. ಕನಸಿನ 'ಕೆಂಪು' ಸಾವಿನ ಸಂಕೇತ. ಕೆಂಪು ತಾವರೆಯ ಒಂದೇ ಹೂ ಕನಸಿನಲ್ಲಿ ಯಾವಾಗಲೂ ಬಂದರೆ ಖಂಡಿತವಾಗಿಯೂ ಅದು ಸಾವಿನ ಸಂಕೇತ. ಎಣ್ಣೆ ಹಾಕಿ ಅಭ್ಯಂಜನ ಸ್ನಾನಮಾಡಿದಂತೆ ಕನಸು ಬಿದ್ದರೆ ಒಳ್ಳೆಯದು, ಮೈತುಂಬ ಎಣ್ಣೆ ಹಚ್ಚಿದಂತೆ ಕನಸುಬಿದ್ದರೆ ಅದು ರೋಗದ ಮುನ್ಸೂಚನೆ. ಇನ್ನು 'ದಿಕ್ಕು'; ಕನಸಿನಲ್ಲಿ ಪೂರ್ವಕ್ಕೆ ಅಥವಾ  ಉತ್ತರಕ್ಕೆ ನಡೆದುಕೊಂಡು ಹೋದಂತೆ ಕನಸುಬಿದ್ದರೆ ಒಳ್ಳೆಯದು. ಆದರೆ ಒಂದುವೇಳೆ ದಕ್ಷಿಣ ದಿಕ್ಕಿಗೆ ನಡೆದುಕೊಂಡು ಹೋದಂತೆ ಕನಸುಬಿದ್ದರೆ ಅದು ಪರಲೋಕ ಯಾತ್ರೆಯ ಸಂಕೇತ!  ಬಿಳಿ ಆನೆ ಒಳ್ಳೆಯದು, ಕಪ್ಪು ಆನೆ ಕೆಟ್ಟದ್ದು. ಇನ್ನು ಕೆಲವೊಮ್ಮೆ ಮುಂದೆ ಆಗುವ ಯಥಾಸ್ಥಿತಿ ಕನಸಿನಲ್ಲಿ ಬರುತ್ತದೆ. ಹೀಗೆ ಕನಸು ನಮಗೆ ಮುಂದೆ ಆಗುವ ಅನಿಷ್ಟದ ಎಚ್ಚರಿಕೆ ಕೂಡಾ ಹೌದು. ಅದಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳಲು ಅವಕಾಶ ಕೂಡಾ ಹೌದು. ಈ ರೀತಿ ದುಃಸ್ವಪ್ನ ಬಿದ್ದಾಗ ಆ ಬಗ್ಗೆ ಎಂದೂ ಭಯಪಡಬೇಕಾಗಿಲ್ಲ. ಏಕೆಂದರೆ ಇದು ಭಗವಂತ ನಮಗೆ ಕೊಟ್ಟ ಮುನ್ಸೂಚನೆ.  ಇಂತಹ ಸಂಧರ್ಭದಲ್ಲಿ ಆ ಭಗವಂತನಲ್ಲಿ ಸಂಪೂರ್ಣ ಶರಣಾದರೆ ಆತ ಖಂಡಿತವಾಗಿ ನಮಗೆ ಪರಿಹಾರವನ್ನು ತೋರಿಸುತ್ತಾನೆ. ಮುಂದೆ ಆಗತಕ್ಕಂತಹ ಅನಿಷ್ಟದಿಂದ ನಮ್ಮನ್ನು ಪಾರು ಮಾಡುತ್ತಾನೆ. ಇಂತಹ ಭಗವಂತನಿಗೆ ದುಃಸ್ವಪ್ನನಾಶನಃ ಅನ್ವರ್ಥನಾಮ.

೯೨೯) ವೀರಹಾ

ವೀರ+ಹಾ-ವೀರಹಾ; ಯಾರ ಪೌರುಷ ಸಮಾಜಭಾದಕವೋ ಅಂತಹ ಲೋಕಕಂಟಕರನ್ನು ನಾಶ ಮಾಡುವ ಭಗವಂತ ವೀರಹಾ. ಇಷ್ಟೇ ಅಲ್ಲ, ಲೋಕಕಂಟಕರಿಗೆ ಸಹಾಯಕನಾಗಿ ನಿಲ್ಲುವವರನ್ನೂ ಕೂಡಾ ಭಗವಂತ ನಿಗ್ರಹ ಮಾಡುತ್ತಾನೆ. ಕೆಲವೊಮ್ಮೆ ಕಾರುಣ್ಯದಿಂದ ಇನ್ನು ಕೆಲವೊಮ್ಮೆ ಧರ್ಮ ರಕ್ಷಣೆಗಾಗಿ. ಶ್ರೀ ಕೃಷ್ಣ - ಭೀಷ್ಮ, ದ್ರೋಣರನ್ನು ಕೊಲ್ಲುವ ಮುಖೇನ ಅಂಥಹ ದಿವ್ಯ ಚೇತನ ಮತ್ತೆ ತಪ್ಪು ಮಾಡಿ ಪಾಪ ಕಟ್ಟಿಕೊಳ್ಳದಂತೆ ತಡೆದ.

ವೀರೇಶು ಹಂತಿ ಗಚ್ಛತಿ. ವೀರರಲ್ಲಿ ಸನ್ನಿಹಿತನಾಗಿರುವ ಭಗವಂತ ವೀರಹಾ.

೯೩೦) ರಕ್ಷಣಃ

ಇಡೀ ಜಗತ್ತಿನ ಸಂರಕ್ಷಕ ಭಗವಂತ ರಕ್ಷಣಃ.

೯೩೧) ಸಂತಃ

ಅನೇಕ ರೂಪದಲ್ಲಿ ಸಜ್ಜನರೊಳಗೆ ತುಂಬಿ ಪಾಲನೆ ಮಾಡುವ ಭಗವಂತ  ಸಂತಃ. ಆತ "ಸಮ್ಯಕ್ ತತಃ" ಎಲ್ಲೆಡೆಯೂ ವ್ಯಾಪ್ತನಾದವನು.

೯೩೨) ಜೀವನಃ

ಪ್ರತಿಯೊಬ್ಬರಿಗೂ ಬದುಕು ಕೊಡುವವ. ಜಗತ್ತಿನ ಸಮಸ್ತ ಜೀವ ಜಾತಕ್ಕೆ ಬದುಕು ಕೊಡುವ ಪ್ರತಿಯೊಂದು ಜೀವವನ್ನು ನಿಯಂತ್ರಿಸುವ ಭಗವಂತ ಜೀವನಃ.

೯೩೩) ಪರ್ಯವಸ್ಥಿತಃ

ಎಲ್ಲೆಡೆ ನೆಲೆಸಿರುವವನು, ನಮ್ಮ ಪಂಚ ಕೋಶದಲ್ಲಿ, ಪಂಚ ಜ್ಞಾನೇಂದ್ರಿಯದಲ್ಲಿ, ಪಂಚಪ್ರಾಣದಲ್ಲಿ, ಪಂಚ ಭೂತದಲ್ಲಿ ಪಂಚ ರೂಪದಲ್ಲಿ ಅನಂತರೂಪದಲ್ಲಿ ತುಂಬಿರುವ ಭಗವಂತ ಪರ್ಯವಸ್ಥಿತಃ.

ಮುಂದುವರೆಯುವುದು....✍️💐

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -98


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಅಕ್ರೂರಃ ಪೇಶಲೋ ದಕ್ಷೋ ದಕ್ಷಿಣಃ ಕ್ಷಮಿಣಾಂ ವರಃ |
ವಿದ್ವತ್ತಮೋ ವೀತಭಯಃ ಪುಣ್ಯಶ್ರವಣಕೀರ್ತನಃ || 98 ||

೯೧೭) ಅಕ್ರೂರಃ

ಭಗವಂತ  ಎಂದೂ ಕ್ರೂರನಲ್ಲ. ಸಮಾಜದಲ್ಲಿ ಅನೇಕ ಕ್ರೂರ ಘಟನೆಗಳು ನಡೆಯುತ್ತವೆ. ಅದಕ್ಕೆ ಮೂಲ ಕಾರಣ ಮನುಷ್ಯನಲ್ಲಿರುವ ದುರಾಸೆ. ತನ್ನ ಆಸೆ ಈಡೇರದಿದ್ದಾಗ, ತಾನು ಅಂದುಕೊಂಡಂತೆ ಆಗದಿದ್ದಾಗ, ತನ್ನ ಕೆಲಸಕ್ಕೆ ಇನ್ನ್ಯಾರೋ ಅಡ್ಡಿಬಂದಾಗ ಮನುಷ್ಯ ಕ್ರೂರಿಯಾಗಿ ವರ್ತಿಸುತ್ತಾನೆ. ಆದರೆ ಭಗವಂತನಿಗೆ ಈಡೇರದ ಬಯಕೆ ಎನ್ನುವುದೊಂದಿಲ್ಲ. ಅವನು ಸತ್ಯಕಾಮ, ಸತ್ಯಸಂಕಲ್ಪ, ಪೂರ್ಣಕಾಮ. ಇಂತಹ ಭಗವಂತನಿಗೆ ಕೋಪವಿಲ್ಲ. ನಮಗೆ ಕ್ರೌರ್ಯವಾಗಿ ಕಾಣುವುದು ನಿಜವಾಗಿ ಕ್ರೂರತನವಲ್ಲ. ಅದರ ಹಿಂದೆ ಯಾವಾಗಲೂ ಪ್ರೀತಿ ಅಡಗಿರುತ್ತದೆ. ಭಗವಂತ ಎಂದೂ ನಿರ್ದಯನಲ್ಲ. ಅವನಿಗೆ ಯಾರ ಮೇಲೂ ಹಗೆ ಇಲ್ಲ ಆತ ಅಕ್ರೂರಃ.

೯೧೮) ಪೇಶಲಃ
ಸರ್ವಾಂಗ ಸುಂದರ, ಚೆಲುವ, ಮುದ್ದು ಮುದ್ದಾದ ರೂಪವುಳ್ಳ ಭಗವಂತ ಪೇಶಲಃ. ಭಗವಂತನ ಈ ಅಪೂರ್ವ ಸೌಂದರ್ಯವನ್ನು ಆತನ ಕೃಷ್ಣಾವತಾರದಲ್ಲಿ ಕಾಣುತ್ತೇವೆ. ಗುಣದ ಸೌಂದರ್ಯದ ಪರಾಕಾಷ್ಠೆಯನ್ನು ಶ್ರೀರಾಮ ನಮಗೆ ತೋರಿಸಿಕೊಟ್ಟಿದ್ದಾನೆ. ಇಂದ್ರಾದಿ ದೇವತೆಗಳಿಗೆ ಈಶನಾಗಿ ಪಾಲನೆ ಮಾಡುವ ಲಾವಣ್ಯ ಮೂರ್ತಿ ಭಗವಂತ ಪೇಶಲಃ.

೯೧೯) ದಕ್ಷಃ

ಜಗತ್ತಿನಲ್ಲಿ   ಯಾವ-ಯಾವ ಕಾರ್ಯ ಯಾವ-ಯಾವ ಕಾಲದಲ್ಲಿ ಹೇಗೆ ಆಗಬೇಕೋ ಹಾಗೇ ಅದೇ ಕಾಲದಲ್ಲಿ ನಿಯಮಬದ್ಧವಾಗಿ ಮಾಡುವ ಸಾಮರ್ಥ್ಯವಿರುವ ಏಕೈಕ ಸ್ವರೂಪ ಭಗವಂತ ದಕ್ಷಃ.

೯೨೦) ದಕ್ಷಿಣಃ

ದಕ್ಷೆತೆಯ ಜೊತೆಗೆ ದಾಕ್ಷಿಣ್ಯ(ಸೌಜನ್ಯ) ಸೇರಿದಾಗ ಅದು ದಕ್ಷಿಣಃ. ಭಗವಂತ ಸೌಜನ್ಯದ ಖನಿ. ಆದ್ದರಿಂದ ದಕ್ಷಿಣಃ  ಆತನಿಗೆ ಅನ್ವರ್ಥನಾಮ.

೯೨೧) ಕ್ಷಮಿಣಾಂವರಃ

ಭಗವಂತ ಕ್ಷಮಾಶೀಲರಲ್ಲಿ ಶ್ರೇಷ್ಠ. ನಾವು ಒಂದೊಂದು ಜನ್ಮದಲ್ಲಿ ಮಾಡುವ ಪಾಪ ನಮ್ಮ ಹತ್ತು ಜನ್ಮದಲ್ಲಿ ತೊಳೆಯಲು ಆಗದು. ಪ್ರತೀ ಜನ್ಮದಲ್ಲಿ ಪಾಪದ ಹೊರೆಯನ್ನು ಹೊತ್ತು ಸಾಗುವ ನಮ್ಮ ಪಾಪವನ್ನು ಕ್ಷಮಿಸಿ ಪಾಪದ ಹೊರೆಯಿಂದ ನಮ್ಮನ್ನು ಪಾರುಮಾಡುವ ಭಗವಂತ ಕ್ಷಮಾಮೂರ್ತಿ, ಆತ ಕ್ಷಮಿಣಾಂವರಃ

೯೨೨) ವಿದ್ವತ್ತಮಃ

ವಿದ್ವಾನ್ ಎಂದರೆ ತಿಳುವಳಿಕೆ ಉಳ್ಳವರು, ಜ್ಞಾನಿಗಳು. ಜ್ಞಾನಿಗಳಲ್ಲೆಲ್ಲಾ ಅತ್ಯಂತ ಉತ್ತಮ ಹಾಗೂ ಮಹಾ ಜ್ಞಾನಿ ಭಗವಂತ ವಿದ್ವತ್ತಮಃ.

೯೨೩) ವೀತಭಯಃ

ನಮ್ಮ ಭಯ ಕಳೆಯುವ, ಎಂದೂ ಭಯವಿರದ ಸರ್ವ ಸಮರ್ಥ ಭಗವಂತ ವೀತಭಯಃ.

೯೨೪) ಪುಣ್ಯಶ್ರವಣಕೀರ್ತನಃ

ಪುಣ್ಯಪ್ರದವಾದ ಶ್ರವಣ ಕೀರ್ತನಗಳವನು. ಭಗವಂತನ ಬಗ್ಗೆ ಕೇಳುವುದು, ಅವನ ಬಗ್ಗೆ ಮಾತನಾಡುವುದು, ಅವನತ್ತ ಮುಖ ಹಾಕಿ ನಡೆಯುವುದು ನಮ್ಮ ಬದುಕಿನ ಮಹಾ ಪಾವಿತ್ರ್ಯವಾದ ಕರ್ಮ. ಇದಕ್ಕಿಂತ ಉತ್ತಮವಾದದ್ದು ಇನ್ನೊಂದಿಲ್ಲ.

ಮುಂದುವರೆಯುವುದು....✍️💐

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -97


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಅರೌದ್ರಃ ಕುಂಡಲೀ ಚಕ್ರೀ ವಿಕ್ರಮ್ಯೂರ್ಜಿತಶಾಸನಃ |
ಶಬ್ದಾತಿಗಃ ಶಬ್ದಸಹಃ ಶಿಶಿರಃ ಶರ್ವರೀಕರಃ || 97 ||

೯೦೮) ಅರೌದ್ರಃ

'ರೌದ್ರ' ಎಂದರೆ ಉಗ್ರ ಸ್ವಭಾವ. ಭಗವಂತ ಅರೌದ್ರಃ, ಅಂದರೆ ಆತ ಮಹಾ ಕರುಣಾಳು. ಪರಮ ಸೌಮ್ಯ ಸ್ವಭಾವದವನು. ಇಂತಹ ಭಗವಂತ ಜ್ಞಾನದ, ಧರ್ಮದ, ದ್ವೇಷಿಗಳಿಗೆ(ಅರಿಗಳಿಗೆ) ಪರಮ ನಿಷ್ಠುರ (ಅರಿ ದ್ರವತಿ ಇತಿ ಅರೌದ್ರಃ)

೯೦೯) ಕುಂಡಲೀ

ಕುಂಡಲೀ ಎಂದರೆ ಕಿವಿಯಲ್ಲಿ ಧರಿಸುವ ಆಭರಣ. ಸೂರ್ಯನಲ್ಲಿ ಸನ್ನಿಹಿತನಾದ ಗಾಯತ್ರಿ ಪ್ರತಿಪಾಧ್ಯ ಭಗವಂತನನ್ನು ಧ್ಯಾನ ಮಾಡುವಾಗ ಈ ರೀತಿ ಹೇಳುತ್ತಾರೆ:

ದೇಹ್ಯಸದಾ ಸವಿತ್ರಮಂಡಲ ಮಧ್ಯವರ್ತೀ
ನಾರಾಯಣಃ  ಸರಸಿಜಾಸನ ಸನ್ನಿವಿಷ್ಟಃ  
ಕೇಯೂರವಾನ್ ಮಕರಕುಂಡಲವಾನ್  
ಕಿರೀಟೀಹಾರಿ ಹಿರಣ್ಮಯವಪುಹುಃ ದೃತ ಶಂಖ ಚಕ್ರಃ.

ಇದು ಋಗ್ವಿಧಾನದಲ್ಲಿದೆ. ಈ ಶ್ಲೋಕ ನರಸಿಂಹ ಪುರಾಣದಲ್ಲಿದೆ. ಇದು ಗಾಯತ್ರಿಯ ಧ್ಯಾನ ಶ್ಲೋಕ.

ಇಲ್ಲಿ ಹೇಳುವಂತೆ ಧ್ಯಾನ ಮಾಡುವಾಗ ಭಗವಂತನನ್ನು ಈ ರೀತಿ ಕಲ್ಪಿಸಿಕೊಳ್ಳುತ್ತಾರೆ. "ಸೂರ್ಯ ಮಂಡಲದ ಮಧ್ಯದಲ್ಲಿ ಸರ್ವಾಭರಣಭೂಷಿತನಾಗಿ ಪದ್ಮಾಸನದಲ್ಲಿ ಭಗವಂತ ಕುಳಿತಿದ್ದಾನೆ, ಆತ ಕೈಗೆ ತೊಳ್ಭಂದಿ ಕಿವಿಯಲ್ಲಿ ಕರ್ಣ ಕುಂಡಲ ಧರಿಸಿದ್ದಾನೆ. ಎರಡು ಕೈಯಲ್ಲಿ ಶಂಖ ಚಕ್ರ ಹಿಡಿದು ಕಿರೀಟ ತೊಟ್ಟು ಸರ್ವಾಭರಣ ಭೂಷಿತನಾಗಿದ್ದಾನೆ". ಇಲ್ಲಿ ಭಗವಂತ ಮಕರ, ಕುಂಡಲ  ಧರಿಸಿದ್ದಾನೆ ಎನ್ನುತ್ತಾರೆ. ಮಕರ ಎಂದರೆ ಮೊಸಳೆ. ಮೊಸಳೆಯ ಬಾಲ ಮತ್ತು ಬಾಯಿಯನ್ನು ಜೋಡಿಸಿ ಮಾಡುವ ಆಭರಣ ಮಕರಕುಂಡಲ. ಮಕರ ಕಾಮದೇವ ಮನ್ಮಥನ ವಾಹನ ಕೂಡಾ ಹೌದು. (ಇಲ್ಲಿ ಕಾಮ(Desire) ಎಷ್ಟು ಪವಿತ್ರವೋ ಅಷ್ಟೇ ಅಪಾಯಕಾರಿ ಎನ್ನುವುದನ್ನು ಮನ್ಮಥನ ವಾಹನ ಮಕರ ಪ್ರತಿನಿಧಿಸುತ್ತದೆ). ಈ ರೀತಿ ಕುಂಡಲೀ-ಭಗವಂತ ಧರಿಸುವ ಆಭರಣದ ಒಂದು ಮುಖ.

ಅಗ್ನಿ ಕುಂಡದಲ್ಲಿ ಲೀನವಾಗಿರುವ ಅಗ್ನಿಯ ಅಂತರ್ಯಾಮಿ ಭಗವಂತ ಕುಂಡಲೀ.

೯೧೦) ಚಕ್ರೀ

ಭಕ್ತರ ರಕ್ಷಣೆಗೋಸ್ಕರ ಅಧರ್ಮದ ನಾಶಕ್ಕೋಸ್ಕರ ಚಕ್ರಧಾರಿಯಾಗಿ ಭೂಮಿಗೆ ಇಳಿದು ಬರುವ ಭಗವಂತ ಚಕ್ರೀ. ಈ ಬ್ರಹ್ಮಾಂಡವೆಂಬ ವಿಶ್ವ ಚಕ್ರವನ್ನು ತನ್ನ ಹಿಡಿತದಲ್ಲಿಟ್ಟುಕೊಂಡ ಭಗವಂತ ಚಕ್ರೀ. ಸರ್ವ ಆಕಾಶ ಕಾಯಗಳನ್ನು ಧ್ರುವ ಮಂಡಲ ಮಧ್ಯದಲ್ಲಿದ್ದು ನಿರ್ವಹಿಸುವ ಭಗವಂತ ಚಕ್ರೀ.

೯೧೧) ವಿಕ್ರಮೀ

ಎಲ್ಲವನ್ನು ಮಣಿಸುವ ಪರಾಕ್ರಮವುಳ್ಳ, ವಿಶಿಷ್ಟವಾದ ಮೂರು ಹೆಜ್ಜೆಗಳುಳ್ಳ, ಇಡೀ ವಿಶ್ವವನ್ನು ಕ್ಷಣಮಾತ್ರದಲ್ಲಿ ಕಬಳಿಸಬಲ್ಲ ಭಗವಂತ ವಿಕ್ರಮೀ.

೯೧೨) ಊರ್ಜಿತಶಾಸನಃ

ಭಗವಂತನ ಶಾಸನ ಎಂದೂ ಅನೂರ್ಜಿತವಾಗುವುದಿಲ್ಲ. ಆತನ ಆಜ್ಞೆಯನ್ನು ಉಲ್ಲಂಘಿಸುವುದು ಅಸಾಧ್ಯ. ಆತನ ಅಣತಿಯಂತೆ ಸರ್ವ ದೇವತೆಗಳು ಕ್ರಮಬದ್ಧವಾಗಿ ಕಾರ್ಯ ನಿರ್ವಹಿಸುತ್ತಾರೆ.  ಇಂತಹ ಅಭೇಧ್ಯ ಶಾಸನದಿಂದ ಲೋಕರಕ್ಷಣೆ ಮಾಡುವ ಭಗವಂತ ಊರ್ಜಿತಶಾಸನಃ.

೯೧೩) ಶಬ್ದಾತಿಗಃ

ಭಗವಂತನನ್ನು ಹೀಗೆ ಎಂದು ಯಾವ ಶಬ್ಧದಿಂದ ಹೇಳಲು ಅಸಾಧ್ಯ. ತೈತ್ತಿರೀಯ ಉಪನಿಷತ್ತಿನಲ್ಲಿ  ಹೀಗೆ ಹೇಳುತ್ತಾರೆ:

ಯತೋ ವಾಚೋ ನಿವರ್ತಂತೆ ಅಪ್ರಾಪ್ಯ ಮನಸಾ ಸಹ |

ಅಂದರೆ ಮಾತು ಮನಸ್ಸಿಗೆ ಮುಟ್ಟದ ಶಬ್ಧಕ್ಕೆ ಎಟುಕದ ಸ್ವರೂಪ.

೯೧೪) ಶಬ್ದಸಹಃ

ಯಾವ ಶಬ್ಧಕ್ಕೂ ಸಿಗದ ಭಗವಂತ, ನಾವು ಯಾವ ಶಬ್ದದಿಂದ ಕರೆದರೂ ಅದನ್ನು ಸಹಿಸಿಕೊಳ್ಳುತ್ತಾನೆ. ಇಂತಹ ಸರ್ವಶಬ್ದವಾಚ್ಯ ಭಗವಂತ ಶಬ್ದಸಹಃ. ಆದ್ದರಿಂದ ಆತನನ್ನು ಯಾವ ಹೆಸರಿನಿಂದ ಕೂಡಾ ಕರೆಯಬಹುದು.

೯೧೫) ಶಿಶಿರಃ

'ಶ' ಎಂದರೆ ಆನಂದ. ಅತಿಶಯವನ್ನು ವ್ಯಕ್ತಪಡಿಸುವಾಗ ನಾವು ಸಾಮಾನ್ಯವಾಗಿ ಮೂರನೇ ಪದವನ್ನು ಬಳಸುತ್ತೇವೆ (ಶ, ಶಾ, ಶಿ). ಇಲ್ಲಿ 'ಶಿ' ಎಂದರೆ ಅತಿಶಯವಾದ ಆನಂದ. 'ರ' ಎಂದರೆ ಕೊಡುವವನು, ರಮಿಸುವವನು. ಶಿಶಿರಃ ಎಂದರೆ ಅತಿಶಯವಾದ ಮಹದಾನಂದವನ್ನು ಕೊಡುವ, ಭೂಮಿಗೆ ತಂಪನ್ನು ಸುರಿಸುವ  ಆನಂದದ ಪರಾಕಾಷ್ಠೆಯಲ್ಲಿ ರಮಿಸುವ ಭಗವಂತ.

೯೧೬) ಶರ್ವರೀಕರಃ

ಶರ್ವರೀಕರಃ ಎಂದರೆ ರಾತ್ರಿಯನ್ನು ಮಾಡುವವನು !  ಚಂದ್ರನೊಳಗಿದ್ದು ಈ ಭೂಮಿಗೆ ಅದ್ಭುತವಾದ ಬೆಳದಿಂಗಳನ್ನು ಉಣಿಸುವ ಭಗವಂತ ಶರ್ವರೀಕರಃ. ರಾತ್ರಿಯಲ್ಲಿ ಕ್ರಿಯಾತ್ಮಕವಾಗಿರುವ ಪ್ರಾಣಿ-ಪಕ್ಷಿಗಳಿಗೆ, ಗಿಡ-ಕಂಟಿಗಳಿಗೆ ಚೈತನ್ಯವನ್ನು ಕೊಡುವ ಭಗವಂತ ಶರ್ವರೀಕರಃ.

ಮುಂದುವರೆಯುವುದು....✍️💐

Thursday, June 15, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -96


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸನಾತ್ ಸನಾತನತಮಃ ಕಪಿಲಃ ಕಪಿರವ್ಯಯಃ |
ಸ್ವಸ್ತಿದಃ ಸ್ವಸ್ತಿಕೃತ್ ಸ್ವಸ್ತಿ ಸ್ವಸ್ತಿಭುಕ್ ಸ್ವಸ್ತಿದಕ್ಷಿಣಃ || 96 ||

೮೯೮) ಸನಾತ್

ಕೆಲವರು ಹೇಳುವುದಿದೆ "ದೇವರು ಎನ್ನುವುದು ಮನುಷ್ಯನ ಮಾನಸಿಕ ಕಲ್ಪನೆ" ಎಂದು. ಇಂತಹ ಪೊಳ್ಳು ವಾದಕ್ಕೆ ಭಗವಂತನ ಈ ನಾಮ ಉತ್ತರ. ಭಗವಂತ ಎನ್ನುವ ತತ್ವ ನಮ್ಮ ನಂಬಿಕೆಯನ್ನವಲಂಬಿಸಿ ಇರುವುದಲ್ಲ. ಅದು ಯಾವಾಗಲೂ ಎಂದೆಂದೂ ಇರುವ ಶಕ್ತಿ. ಆತ ಸನಾತ್.

೮೯೯) ಸನಾತನತಮಃ

ಭಗವಂತ ಸನಾತನತಮಃ, 'ಸನ' ಎಂದರೆ ಎಲ್ಲಾ ಕಾಲದಲ್ಲಿ, 'ತನ' ಎಂದರೆ ಇರುವಂತದ್ದು. 'ತಮ' ಎಂದರೆ ನಿಯಂತ್ರಿಸುವುದು.  ಭಗವಂತ ಎಲ್ಲರಿಗಿಂತ ಪುರಾತನ. ಆತ ಅನಾದಿನಿತ್ಯ. ಎಲ್ಲಾ ಕಾಲದಲ್ಲಿ ಇರುವಂತಹ ಇತರ ತತ್ವಗಳೆಂದರೆ ಜೀವರು, ಪ್ರಕೃತಿ , ಆಕಾಶ, ಕಾಲ ಇತ್ಯಾದಿ. ಭಗವಂತ ಎಲ್ಲಾ ಸನಾತನವನ್ನು ನಿಯಂತ್ರಿಸುವ, ಪರಿಪೂರ್ಣವಾದ, ನಿರ್ವಿಕಾರ ಸ್ವರೂಪ.

೯೦೦) ಕಪಿಲಃ

ಕಪಿಲ ಎನ್ನುವುದು ಭಗವಂತನ ಒಂದು ಅವತಾರದ ಹೆಸರು. ಸ್ವಾಯಂಭುವ ಮನುವಿನ ಕಾಲದಲ್ಲಿ ದೇವಭೂತಿ ಹಾಗೂ ಕರ್ದಮ ಪ್ರಜಾಪತಿಯ ದಾಂಪತ್ಯ ಫಲದಲ್ಲಿ ಮೂಡಿಬಂದ ಭಗವಂತನ ಅವತಾರ ಕಪಿಲ. ಇದಲ್ಲದೆ ಜಗತ್ತಿಗೆ ಸಂಖ್ಯಾಶಾಸ್ತ್ರವನ್ನು ಕೊಟ್ಟ ಭಗವಂತ ಕಪಿಲಃ.

೯೦೧) ಕಪಿಃ

ಕಂ ಎಂದರೆ ಸುಖ, ಸದಾ ಆನಂದದ ಸ್ಥಿತಿಯಲ್ಲಿರುವ ಭಗವಂತ ಕಪಿಃ. ಕಂಪಯತೀತಿ ಇತಿ ಕಪಿಃ, ತನ್ನ ನೀತಿಗೆ ಬದ್ಧವಾಗದೆ ಇರುವ ದುಷ್ಟರನ್ನು ನಡುಗಿಸುವ ಭಗವಂತ ಕಪಿಃ.

೯೦೨) ಅಪ್ಯಯಃ

ಪ್ರಳಯ ಕಾಲದಲ್ಲಿ ಎಲ್ಲವನ್ನು ತನ್ನ ಒಡಲಲ್ಲಿ ಅಡಗಿಸಿಟ್ಟು ರಕ್ಷಿಸುವ ಭಗವಂತ ಅಪ್ಯಯಃ.

೯೦೩) ಸ್ವಸ್ತಿದಃ

ಸದಾ ಸಂಕಟ, ದುಃಖವಿಲ್ಲದ ಆನಂದಮಯವಾದ ಸ್ಥಿತಿಯನ್ನು ಸಜ್ಜನರಿಗೆ ಕೊಡುವ ಭಗವಂತ ಸ್ವಸ್ತಿದಃ, ಯಾರು ಅಧರ್ಮದ ಹಾದಿಯಲ್ಲಿರುತ್ತಾರೋ ಅವರ ಸುಖದ ಇರವನ್ನು ನಾಶಮಾಡುವ ಭಗವಂತ ಸ್ವಸ್ತಿದಃ.

೯೦೪) ಸ್ವಸ್ತಿಕೃತ್

ಬದುಕಿನಲ್ಲಿ ಆನಂದದ ಇರವನ್ನು ಸೃಷ್ಟಿಮಾಡುವ(ಕೃತ) ಭಗವಂತ, ಇದ್ದ ಆನಂದವನ್ನು ಕತ್ತರಿಸಿ ತೆಗೆಯುತ್ತಾನೆ(ಕೃನ್ತತಿ), ಇದು ಆತನ ಶಿಕ್ಷಣ ಕ್ರಮ ಹಾಗು ದುಷ್ಟ ನಿಗ್ರಹದ ಜಾಲ.

೯೦೫) ಸ್ವಸ್ತಿ

ಸದಾ ಆನಂದಮಯ ಸ್ವರೂಪನಾಗಿರುವ ಸಚ್ಚಿಧಾನಂದ  ಸ್ವರೂಪ ಭಗವಂತ ಸ್ವಸ್ತಿ. ಈ ಕಾರಣಕ್ಕಾಗಿ ಸದಾ ಮನೆಯಲ್ಲಿ ಸಂತೋಷವಿರಲಿ ಎನ್ನುವ ಉದ್ದೇಶದಿಂದ, ಮನೆ ಮುಂದೆ ಸ್ವಸ್ತಿ ಎಂದು ಬರೆಯುತ್ತಾರೆ. ಭಗವಂತ ಮಂಗಳ ಸ್ವರೂಪ ಹಾಗು ಆನಂದ ಸ್ವರೂಪ.

೯೦೬) ಸ್ವಸ್ತಿಭುಕ್

ನಿರಂತರ ಆನಂದ ಭೋಗಿಸುವ ಭಗವಂತ ಸ್ವಸ್ತಿಭುಕ್. ಆತ ಜಗತ್ತಿನ ಸಮಸ್ಥ ಆನಂದವನ್ನು ಅನುಭವಿಸುತ್ತಿರುತ್ತಾನೆ.

೯೦೭) ಸ್ವಸ್ತಿದಕ್ಷಿಣಃ

ಭಗವಂತನ ನಿರಂತರ ಆರಾಧನೆ ಮಾಡುವ ಭಕ್ತರಿಗೆ ನಿರಂತರ ಆನಂದವನ್ನುಕೊಡುವ, ಲಕ್ಷ್ಮಿಯನ್ನು ಸದಾ ತನ್ನ ಎಡಭಾಗದಲ್ಲಿ ಧರಿಸಿದ ಆನಂದ ಸ್ವರೂಪ ಭಗವಂತ ಸ್ವಸ್ತಿದಕ್ಷಿಣಃ.

ಮುಂದುವರೆಯುವುದು....✍️💐

Wednesday, June 14, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -94


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ವಿಹಾಯಸಗತಿರ್ಜ್ಯೋತಿಃ ಸುರಚಿರ್ಹುತಭುಗ್ವಿಭುಃ |
ರವಿರ್ವಿರೋಚನಃ ಸೂರ್ಯಃ ಸವಿತಾ ರವಿಲೋಚನಃ || 94 ||

೮೮೦) ವಿಹಾಯಸಗತಿಃ

ವಿಹಾಯಸನ್ ಅಂದರೆ ಆಕಾಶ; ವಿಹಾಯಸಗತಿಃ ಎಂದರೆ ಆಕಾಶದಲ್ಲಿ ಚಲಿಸುವವ. ಉಪನಿಷತ್ತಿನಲ್ಲಿ ಹೇಳಿದಂತೆ ಭಗವಂತ ಸೃಷ್ಟಿಪೂರ್ವದಲ್ಲಿ ತನಗೊಬ್ಬ ಆತ್ಮೀಯ ಜೊತೆಗಾರ ಬೇಕು ಎಂದು ನಿರ್ಧರಿಸಿದನಂತೆ. ಹಾಗೆ ನಿರ್ಧರಿಸಿ ಪ್ರಾಣದೇವರ ಸೃಷ್ಟಿ ಮಾಡಿದನಂತೆ. ಭಗವಂತ ಸದಾ ಪ್ರಾಣದೇವರ ಜೊತೆಗಾರ. ಪ್ರಾಣನಿದ್ದಲ್ಲಿ  ಭಗವಂತ, ಭಗವಂತನಿದ್ದಲ್ಲಿ ಪ್ರಾಣ. ಆದ್ದರಿಂದ ವಾಯುದೇವರು ಭಗವಂತನ ಜೊತೆಗಿರುವ ಜೊತೆಗಾರ. ವಾಯು ಅಂದರೆ ಸದಾ ಆಕಾಶದಲ್ಲಿ ಸಂಚರಿಸುವ ಗಾಳಿ. ಇಂತಹ ಪ್ರಾಣಶಕ್ತಿಯೊಳಗಿದ್ದು, ಆಕಾಶದಲ್ಲಿ ಚಲಿಸುವ ಭಗವಂತ ವಿಹಾಯಸಗತಿಃ.

ಇನ್ನು ಈ ನಾಮವನ್ನು ಒಡೆದು ನೋಡಿದಾಗ ವಿಹಾ+ಯಸ+ಗತಿಃ; 'ವಿಹಾ' ಎಂದರೆ ಸರ್ವ ಗುಣಗಳಿಂದ ಪೂರ್ಣವಾದ, ಸರ್ವ ದೋಷಗಳಿಂದ ದೂರವಾದ ತತ್ವ.  'ಯಸ' ಎಂದರೆ ಜ್ಞಾನಾನಂದ ಸ್ವರೂಪ. 'ಗತಿಃ' ಎಂದರೆ 'ಗಚ್ಛತಿ', ಭಗವಂತ ಸರ್ವಾಂತರ್ಯಾಮಿ, ಎಲ್ಲಾ ಕಡೆಯಲ್ಲೂ ಇರುವ, ಇಡೀ ವಿಶ್ವಕ್ಕೆ ಆಶ್ರಯ ಕೊಡುವ ನಿಲುದಾಣ.

೮೮೧) ಜ್ಯೋತಿಃ

ಸೂರ್ಯನಿಗಿಂತಲೂ ಪ್ರಖರವಾದ ಬೆಳಕುಳ್ಳವನು. ಆತ ಸೂರ್ಯನಿಗಿಂತಲೂ ಪ್ರಖರ ಆದರೆ ಚಂದ್ರನಿಗಿಂತ ತಂಪು. ಗೂಬೆ ಹೇಗೆ ಸೂರ್ಯನನ್ನು ನೋಡಲಾರದೋ ಹಾಗೆ ಇಂತಹ ಬೆಳಕನ್ನು ನಾವು ನಮ್ಮ ಹೊರಗಣ್ಣಿನಿಂದ ಎಂದೂ ನೋಡಲಾರೆವು. ಆತನನ್ನು ನಮ್ಮ ಸ್ವರೂಪದ ಕಣ್ಣಿನಿಂದ ಮಾತ್ರ ಕಾಣಲು ಸಾಧ್ಯ.
ಜ್ಯಾ+ಊತಿ-ಜ್ಯೋತಿ, ಇಲ್ಲಿ 'ಜ್ಯಾ' ಎಂದರೆ ಭೂಮಿ.'ಊತಿ' ಎಂದರೆ ರಕ್ಷಣೆ.ಈ ಭೂಮಿ, ಆಕಾಶದಲ್ಲಿ ನಿರಾಲಂಭವಾಗಿ ನಿಲ್ಲುವಂತೆ ಮಾಡಿದ ಸಂಕರ್ಷಣ ಶಕ್ತಿಯ ಅಂತರ್ಯಾಮಿ ಭಗವಂತ ಜ್ಯೋತಿಃ

೮೮೨) ಸುರುಚಿಃ

ಇಲ್ಲಿ ರುಚಿ ಎಂದರೆ 'ಬೆಳಕು'. ಸುರುಚಿ ಎಂದರೆ ಸುಖಕರವಾದ ಬೆಳಕು. ನಮಗೆ ಆನಂದದ ಬೆಳಕನ್ನು ಕೊಟ್ಟು ಎತ್ತರಕ್ಕೆ ಕೊಂಡೊಯ್ಯುವ ಭಗವಂತ ಸುರುಚಿಃ.

೮೮೩) ಹುತಭುಗ್ವಿಭುಃ

ಬೆಂಕಿಗೆ ಹಾಕಿದ ಆಹುತಿಯನ್ನು ಸ್ವೀಕರಿಸುವ ಅಗ್ನಿಯ ಒಡೆಯ.

೮೮೪) ರವಿಃ

ಸೂರ್ಯನೊಳಗಿದ್ದು ರವಿ ಎನಿಸಿಕೊಂಡವನು. ರವ+ಇ-ರವಿ. ಮಂತ್ರದ ನಾದದಿಂದ ಸೂರ್ಯ ಮಂಡಲದಲ್ಲಿರುವ ರವಿ ನಾಮಕ ಭಗವಂತನ ಉಪಾಸನೆಯಲ್ಲಿ ಭಗವಂತನ ಈ ನಾಮ ಬಳಕೆಯಾಗಿದೆ. ಹಿಂದೆ ಬೆಳಿಗ್ಗೆ ಸುಮಾರು ನಾಲ್ಕು ಗಂಟೆಗೆ ಎದ್ದು ಸ್ನಾನ ಮಾಡಿ ಮುಖ್ಯವಾಗಿ ಗಾಯತ್ರಿ ಜಪ ಮಾಡುತ್ತಿದ್ದರು. ಅದೇ ರೀತಿ ಸಂಜೆ ಸೂರ್ಯಾಸ್ತಕ್ಕೆ ಮೊದಲು ಕೂಡಾ ಧ್ಯಾನದಲ್ಲಿ ತೊಡಗುತ್ತಿದ್ದರು. ಕಾರಣವೆಂದರೆ, ಮುಂಜಾವಿನ ಹಾಗೂ ಸಂಜೆಯ ಕೆಂಪಾದ ಸೂರ್ಯ ಕಿರಣದಲ್ಲಿ ನಮ್ಮ ಬುದ್ಧಿ ಶಕ್ತಿಯನ್ನು ಕುಂದಿಸುವ ಶಕ್ತಿ ಇರುತ್ತದೆ. ಅಂತಹ ಕೆಟ್ಟ ಶಕ್ತಿಯ ನಿರೋಧಕ್ಕಾಗಿ ಈ ರೀತಿ ಧ್ಯಾನ ಮಾಡುತ್ತಿದ್ದರು. ಸೂರ್ಯನ ಮುಂಜಾವಿನ ಹಾಗೂ ಸಂಜೆಯ ಕಿರಣ, ಗ್ರಹಣ ಕಾಲದ ಕಿರಣ ಮತ್ತು ನೀರಿನಿಂದ ಪ್ರತಿಫಲಿಸಿ ಕಾಣುವ ಸೂರ್ಯ ಕಿರಣ ವಿಷಕಾರಿ. ಮುಂಜಾವಿನ ಮತ್ತು ಸಂಜೆಯ ಕಿರಣ ಮಾನಸಿಕವಾಗಿ  ಪರಿಣಾಮ ಬೀರಿದರೆ, ಗ್ರಹಣದ ಕಿರಣ ನಮಗೆ ದೈಹಿಕವಾಗಿ ಕೆಟ್ಟದ್ದು. ಆದರೆ ಗ್ರಹಣ ಕಾಲದಲ್ಲಿ ನಮ್ಮ ಮೆದುಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅದಕ್ಕಾಗಿ ಹಿಂದೆ ಗ್ರಹಣ ಕಾಲದಲ್ಲಿ ಉಪವಾಸವಿದ್ದು ಪಾರಾಯಣ ಮಾಡುತ್ತಿದ್ದರು. ಗ್ರಹಣ ಕಾಲದಲ್ಲಿ ಒಂದು ಬಾರಿ ಮಾಡುವ ಪಾರಾಯಣ ಬೇರೆ ಸಮಯದ ನೂರಕ್ಕೂ ಹೆಚ್ಚು ಪಾರಾಯಣಕ್ಕೆ ಸಮನಾಗಿರುತ್ತದೆ. ಹೊಟ್ಟೆ ಖಾಲಿಯಿದ್ದು ಪಾರಾಯಣ ಮಾಡಿದರೆ ಇದರ ಪರಿಣಾಮ ಇನ್ನೂ ಹೆಚ್ಚು. ಅದಕ್ಕಾಗಿ ಉಪವಾಸವಿದ್ದು ಪಾರಾಯಣ ಮಾಡುತ್ತಿದ್ದರು. ಹೀಗೆ ಸೂರ್ಯ ಮಂಡಲದಲ್ಲಿ ಅಡಗಿರುವ ಅಪೂರ್ವ ಶಕ್ತಿ ಭಗವಂತ ರವಿಃ.

     
೮೮೫) ವಿರೋಚನಃ

ರೋಚನ ಎಂದರೆ ಬೆಳಗಿಸುವ ವಸ್ತು. ವಿಶಿಷ್ಟವಾದ ಬೆಳಕನ್ನು ಜಗತ್ತಿಗೆ ನೀಡುವ ಭಗವಂತ ವಿರೋಚನಃ. ನಮ್ಮ ಹೃದಯ ಗುಹೆಯಲ್ಲಿ ಕುಳಿತು ನಮಗೆ ಜ್ಞಾನದ ಬೆಳಕನ್ನು ನೀಡುವ ಜ್ಯೋತಿರ್ಮಯರೂಪಿ ಭಗವಂತ ವಿರೋಚನಃ.

೮೮೬) ಸೂರ್ಯಃ

ಸೂರಿಭಿಃ ಈಯತೇ ಇತಿ ಸೂರ್ಯಃ; ಅಂದರೆ ಸೂರಿಗಳಿಗೆ(ಜ್ಞಾನಿಗಳಿಗೆ) ಗೋಚರವಾಗುವ, ಸೂರ್ಯನೊಳಗಿದ್ದು ಸೂರ್ಯನೆನಿಸಿಕೊಂಡ ಭಗವಂತ ಸೂರ್ಯಃ

೮೮೭) ಸವಿತಾ

ಸೂತೇ ಇತಿ ಸವಿತಾ; ಇಡೀ ಜಗತ್ತನ್ನು ತನ್ನ ಒಡಲಲ್ಲಿ ಹೊತ್ತು, ಸೃಷ್ಟಿ ಕಾಲದಲ್ಲಿ ತನ್ನ ನಾಭಿ ಕಮಲದಿಂದ ಹೆತ್ತ ಜಗತ್ತಿನ ತಂದೆ ಸವಿತಾ; ಗಾಯತ್ರಿ ಪ್ರತಿಪಾಧ್ಯನಾದ ಸೂರ್ಯನಲ್ಲಿ ಸನ್ನಿಹಿತನಾಗಿರುವ ಸವಿತಾ ನಾಮಕ ಭಗವಂತ ಸವಿತಾ.

೮೮೮) ರವಿಲೋಚನಃ

ಭಗವಂತನ ಕಿಡಿನೋಟದ ಒಂದು ಚಿಕ್ಕ ಕಿಡಿ ಆ ಸೂರ್ಯ. ಯಾರಿಂದ ಆ ಸೂರ್ಯ ಹುಟ್ಟಿ ಬಂದನೋ, ಯಾರಲ್ಲಿ ಸೇರಿ ಕಣ್ಮರೆಯಾಗುತ್ತಾನೋ ಅವನು ಹುತಭುಗ್ಭೋಕ್ತಾ.

ಮುಂದುವರೆಯುವುದು...✍️💐

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -95


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಅನಂತೋ ಹುತಭುಗ್ಭೋಕ್ತಾ ಸುಖದೋ ನೈಕಜೋsಗ್ರಜಃ |
ಅನಿರ್ವಿಣಃ ಸದಾಮರ್ಷೀ ಲೋಕಾಧಿಷ್ಠಾನಮದ್ಭುತಃ || 95 ||

೮೮೯) ಅನಂತಃ

ಎಲ್ಲವುದರ ಕೊನೆಯಾದಾಗಲೂ ಕೊನೆಯಾಗದೇ ಉಳಿಯುವ ಏಕೈಕ ತತ್ವ ಭಗವಂತ ಅನಂತಃ. ಅನಂತ ಅಂದರೆ 'ಶೇಷ' ಶೇಷನ ಅಂತರ್ಯಾಮಿಯಾಗಿರುವ ಅನಂತಶಯನ ಭಗವಂತ ಅನಂತಃ..

೮೯೦) ಹುತಭುಗ್ಭೋಕ್ತಾ.

ನಾವು ಅಕ್ಕರೆಯಿಂದ ಆಪ್ತನಾಗಿ, ಮನಃಪೂರ್ವಕವಾಗಿ, ಶರಣಾಗತಿಯಿಂದ ಘಜೇಂದ್ರನಂತೆ  ಮೊರೆಯಿಟ್ಟಾಗ ಬಂದು ನಮ್ಮನ್ನು ರಕ್ಷಿಸುವ ಭಗವಂತನ ಕಾಣದ ಕೈ ಸದಾ ನಮ್ಮನ್ನು ಕಾಪಾಡುತ್ತಿರುತ್ತದೆ. ಪ್ರೀತಿಯಿಂದ ನಾವು ಅಗ್ನಿಮುಖೇನ ಕೊಡುವ ಆಹುತಿಯನ್ನು ಸ್ವೀಕರಿಸಿ ರಕ್ಷಿಸುವ, ಜಗತ್ತಿನ ಸಮಸ್ತ ವಿಷಯವನ್ನು ಭೋಗಿಸುವ ಹಾಗೂ ಎಲ್ಲರಿಗೂ ಸುಖ-ದುಃಖವನ್ನು ಕೊಟ್ಟು ಪಾಲಿಸುವ ಭಗವಂತ ಹುತಭುಗ್ಭೋಕ್ತಾ

೮೯೧) ಸುಖದಃ

ನಮಗೆ ಸುಖವನ್ನು ಕೊಡುವವನು, ನಮ್ಮ ಸುಖವನ್ನು ಕಸಿದುಕೊಳ್ಳುವವನೂ ಭಗವಂತ! ಇಲ್ಲಿ ಕಸಿದುಕೊಳ್ಳುವುದು ಎಂದರೆ ಹೊಟ್ಟೆಕಿಚ್ಚಿನಿಂದ ಹಿಂದೆ ಪಡೆಯುವುದಲ್ಲ. ತಾಯಿ ತನ್ನ ಮಗುವಿಗೆ ಶಿಕ್ಷೆ ಕೊಟ್ಟು ಒಳ್ಳೆಯವನಾಗಿ ಹೇಗೆ ಬೆಳೆಸುತ್ತಾಳೋ ಹಾಗೇ ಭಗವಂತ ನಾವು ದಾರಿ ತಪ್ಪಿದಾಗ ನಮಗೆ ದುಃಖ ಕೊಟ್ಟು ಉದ್ಧರಿಸುತ್ತಾನೆ.

೮೯೨) ನೈಕಜಃ

ಅನಂತ ರೂಪದಲ್ಲಿ ಅನಂತ ಜೀವರಲ್ಲಿ ತುಂಬಿರುವ ಭಗವಂತ ಏಕ ತತ್ವ. ಹಲವು ಅವತಾರ ತಾಳಿದ ಭಗವಂತ ನೈಕಜ.

೮೯೩) ಅಗ್ರಜಃ

ಎಲ್ಲಕ್ಕಿಂತ ಮೊದಲು ಚತುರ್ಮೂರ್ತಿಯಾಗಿ ಅವತರಿಸಿ ಈ ಪ್ರಪಂಚ ಸೃಷ್ಟಿ ಮಾಡಿದ  ಭಗವಂತ ಎಲ್ಲರ ಹಿರಿಯಣ್ಣ.

೮೯೪) ಅನಿರ್ವಿಣ್ಣಃ

ಭಗವಂತ ಎಂದೂ ಬೇಸರಗೊಳ್ಳದವನು. ಆತನಿಗೆ ಎಂದೂ ವೈರಾಗ್ಯವಿಲ್ಲ. ಸಾಮಾನ್ಯವಾಗಿ ನಮಗೆ ವೈರಾಗ್ಯ ಬರುವುದು ಕೊರತೆಯಿಂದ. ಭಗವಂತನಿಗೆಲ್ಲಿಯ ಕೊರತೆ? ಭಗವಂತನ ಈ ಗುಣವನ್ನು ನಾವು ಆತನ ಕೃಷ್ಣಾವತಾರದಲ್ಲಿ ಕಾಣಬಹುದು. ಗಾಂಧಾರಿ ಕೃಷ್ಣನಿಗೆ ನಿನ್ನ ಯಾದವ ವಂಶ ನಾಶವಾಗಿ ಹೋಗಲಿ ಎಂದು ಶಾಪ ಕೊಟ್ಟಾಗ, ಯಾದವರೆಲ್ಲರು ಹೊಡೆದಾಡಿಕೊಂಡು ಸಾಯುತ್ತಿರುವಾಗಲೂ ಸಹ ಕೃಷ್ಣ ನಗುತ್ತ ನಿಂತಿದ್ದ! ಭಗವಂತ ಎಂದೂ ನಿರ್ವೇದ ಕಾಡದ ಉತ್ಸಾಹದ ಚಿಲುಮೆ, ಆತ ಅನಿರ್ವಿಣ್ಣಃ.

೮೯೫) ಸದಾಮರ್ಷೀ

ಮರ್ಷಿ ಎಂದರೆ ತಡೆದುಕೊಳ್ಳುವುದು(tolerate), ಭಗವಂತ ಸದಾ 'ಮರ್ಷಿ', ಸಾತ್ವಿಕರಿಂದ ತಿಳಿಯದೆ ತಪ್ಪಾದಾಗ ಅದನ್ನು ಆತ ಕ್ಷಮಿಸುತ್ತಾನೆ. ಆದರೆ ಆತ ಸದಾ 'ಅಮರ್ಷಿ' ಕೂಡಾ ಹೌದು. ಆತ ದುಷ್ಟತನವನ್ನು ಎಂದೂ ತಾಳಿಕೊಳ್ಳುವುದಿಲ್ಲ. ಆತನ ಮೂಲ ಉದ್ದೇಶ ದುಷ್ಟ ನಾಶನ ಶಿಷ್ಟ ರಕ್ಷಣ.

೮೯೬) ಲೋಕಾಧಿಷ್ಠಾನಮ್

ಭಗವಂತ ಇಡಿಯ ಲೋಕಕ್ಕೆ ಮೂಲಾಧಾರ. ಆತ ಇಡಿಯ ಜಗತ್ತನ್ನು ಧಾರಣೆ ಮಾಡಿರುವ  ಏಕೈಕ ಕೊನೆಯ ಆಸರೆ.

೮೯೭) ಅದ್ಭುತಃ

ಭಗವಂತ ಎಲ್ಲಕ್ಕಿಂತ ವಿಸ್ಮಯ. ಆತನನ್ನು ನೋಡಿದವರಿಗೂ ಕೂಡಾ ಆತನ ವರ್ಣನೆ ಸಾಧ್ಯವಿಲ್ಲ. ಏಕೆಂದರೆ ಆತ ಅಚ್ಚರಿಯೊಳಚ್ಚರಿ. ಇದನ್ನು ಗೀತೆಯಲ್ಲಿ ಹೀಗೆ ಹೇಳಿದ್ದಾರೆ:

ಆಶ್ಚರ್ಯವತ್ಪಶ್ಯತಿ ಕಶ್ಚಿದೇನಮಾಶ್ಚರ್ಯವದ್ವದತಿ ತಥೈವ ಚಾನ್ಯಃ |
ಆಶ್ಚರ್ಯವಚ್ಚೈನಮನ್ಯಃ ಶೃಣೋತಿ ಶ್ರುತ್ವಾऽಪ್ಯೇನಂ ವೇದ ನಚೈವ ಕಶ್ಚಿತ್ ||

ಅಂದರೆ "ಯಾರೋ ಒಬ್ಬ ಭಗವಂತನನ್ನು ಅಚ್ಚರಿಯಿಂದ ನೋಡುತ್ತಾನೆ, ಯಾರೋ ಒಬ್ಬ ಅಚ್ಚರಿಗೊಂಡು ಆಡುತ್ತಾನೆ , ಯಾರೋ ಒಬ್ಬ ಅವನನ್ನು ಅಚ್ಚರಿಗೊಂಡು ಕೇಳುತ್ತಾನೆ. ಎಷ್ಟು ಕೇಳಿದರೂ ಅವನನ್ನು ಸರಿಯಾಗಿ ಅರಿತವರು ಯಾರೂ ಇಲ್ಲ" ಆತ ಅದ್ಭುತಃ.

ಮುಂದುವರೆಯುವುದು....✍️💐

Monday, June 12, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -93


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸತ್ವವಾನ್ ಸಾತ್ತ್ವಿಕಃ ಸತ್ಯಃ ಸತ್ಯಧರ್ಮಪರಾಯಣಃ |
ಅಭಿಪ್ರಾಯಃ ಪ್ರಿಯಾರ್ಹೋsರ್ಹಃ ಪ್ರಿಯಕೃತ್ ಪ್ರೀತಿವರ್ಧನಃ || 93 ||

೮೭೨) ಸತ್ವವಾನ್

ಸತ್ವ ಎಂದರೆ ಎಂದರೆ ಸಾಮರ್ಥ್ಯ. ಒಂದು ದೈಹಿಕ ಸಾಮರ್ಥ್ಯವಾದ ಬಲ, ಇನ್ನೊಂದು ಬೌದ್ಧಿಕ ಸಾಮರ್ಥ್ಯವಾದ ಜ್ಞಾನ. ಪೂರ್ಣವಾದ ಜ್ಞಾನ ಹಾಗೂ ಬಲವುಳ್ಳ ಭಗವಂತ ಸತ್ವವಾನ್.

೮೭೩) ಸಾತ್ವಿಕಃ

ಯಾರಲ್ಲಿ ಜ್ಞಾನ ಭಲವಿದೆಯೋ ಅವರಲ್ಲಿ ಭಗವಂತನ  ವಿಶೇಷ ಸನ್ನಿಧಾನವಿರುತ್ತದೆ. ಬಲದಲ್ಲಿ ಭೀಮ, ಆಂಜನೇಯ, ಲಕ್ಷ್ಮಣ, ಅರ್ಜುನ; ಇವರೆಲ್ಲರ ಒಳಗೆ ಸನ್ನಿಹಿತನಾಗಿದ್ದ ಭಗವಂತ ಸ್ವಯಂ ವೇದವ್ಯಾಸನಾಗಿ ಜ್ಞಾನಾರ್ಜನೆ ಮಾಡಿದ ಸಾತ್ವಿಕಃ. ಸಾತ್ವಿಕರಲ್ಲಿ ನೆಲೆನಿಂತು ಅಲ್ಲಿ ಸಾತ್ವಿಕತೆಯನ್ನು ನೆಲೆಗೊಳಿಸುವ ಭಗವಂತ ಸಾತ್ವಿಕಃ.

೮೭೪) ಸತ್ಯಃ

ಸತ್ತಂ ಯಾಪಯತಿ ಇತೀ ಸತ್ಯಃ. ಸತ್ ಎಂದರೆ ಇರುವಿಕೆ, ಅದನ್ನು ಕೊಡುವವ ಸತ್ಯಃ; ಸತ್ ಎಂದರೆ ನಾಶ, ಅದನ್ನು ಕೊಡುವವ ಸತ್ಯಃ; ಸತ್ ಎಂದರೆ ನಿಯಮನ, ಅದನ್ನು ಕೊಡುವವ ಸತ್ಯಃ; ಸತ್ ಎಂದರೆ ಜ್ಞಾನ, ಅದನ್ನು ಕೊಡುವವ ಸತ್ಯಃ; ಸತ್ ಎಂದರೆ ಅಜ್ಞಾನ, ಅದನ್ನು ಕೊಡುವವ ಸತ್ಯಃ; ಸತ್ ಎಂದರೆ ವಿಷಾದ ರೂಪದ ಸಂಸಾರ, ಅದನ್ನು ಕೊಡುವವ ಸತ್ಯಃ; ಸತ್ ಎಂದರೆ ಮೋಕ್ಷ, ಅದನ್ನು ಕೊಡುವವ ಸತ್ಯಃ. ಹೀಗೆ ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷಗಳನ್ನು ಕೊಡತಕ್ಕ ಭಗವಂತ ಸತ್ಯಃ.

       
೮೭೫) ಸತ್ಯಧರ್ಮಪರಾಯಣಃ

ಪರಂ ಅಯನಂ-ಪರಾಯಣಂ; ಅಂದರೆ ಪೂರ್ಣ ಪ್ರಮಾಣದ ರಕ್ಷಣೆ.  ಭಗವಂತ ಸತ್ಯ ಮತ್ತು ಧರ್ಮದ ದಾರಿಯಲ್ಲಿ ನಡೆಯುವವರಿಗೆ ಪೂರ್ಣ ಪ್ರಮಾಣದ ರಕ್ಷಕ.

೮೭೬) ಅಭಿಪ್ರಾಯಃ

ಸಮಸ್ತ ವೇದಗಳ ಅಭಿಪ್ರಾಯ ಭಗವಂತ. ಒಂದು ಸೂಕ್ತದಲ್ಲಿ ಅಗ್ನಿ, ಒಂದು ಸೂಕ್ತದಲ್ಲಿ ಕರ್ಮ, ಒಂದು ಸೂಕ್ತದಲ್ಲಿ ಇಂದ್ರ, ಆದರೆ ಎಲ್ಲಾ ವೇದಗಳ ಏಕ ಅಭಿಪ್ರಾಯ ಭಗವಂತನೊಬ್ಬನೆ.

 ಭಾಗವತದ  ೧೧ನೇ ಸ್ಕಂದದಲ್ಲಿ ಬರುವ 'ಉದ್ಧವ ಗೀತೆಯಲ್ಲಿ ಶ್ರೀ ಕೃಷ್ಣ ಈ ರೀತಿ ಹೇಳಿದ್ದಾನೆ:

ಮಾಂ ವಿಧತ್ತೇ ಅಭಿಧತ್ತೇ ಮಾಂ ವಿಕಲ್ಪ್ಯ ಅಪೋಹ್ಯೈತ್ಯಹಂ |
ಇತ್ಯಸ್ಯ ಹೃದಯಂ ಸಾಕ್ಷಾತ್ ನಾನ್ಯೋ ಮದ್ವೇದ ಕಸ್ಚನಃ  ||

ಅಂದರೆ "ಸಮಸ್ತ ವೇದವೂ ನನಗೋಸ್ಕರ ಇದೆ. ಅದು ನನ್ನನ್ನು ಹೇಳುತ್ತದೆ. ಇನ್ಯಾವುದನ್ನೋ ಹೇಳಿದರೆ ಅದು ನನ್ನ ಹಿರಿಮೆಯನ್ನು ಸಾರುವುದಕ್ಕೊಸ್ಕರ ಹೇಳುತ್ತದೆ".

ವೇದವ್ಯಾಸರು ಇದನ್ನು ಹೀಗೆ ಹೇಳಿದ್ದಾರೆ:

“ವೇದೇ ರಾಮಾಯಣಂಚೈವ ಪುರಾಣೇ ಭಾರತೇ ತಥಾ, ಆದೌ ಅಂತೇ ಚ  ಮಧ್ಯೆ  ಚ, ವಿಷ್ಣುಃ ಸರ್ವತ್ರಗೀಯತೆ ”

ಸರ್ವ ವೇದದ ಅಭಿಪ್ರಾಯ ಭಗವಂತ, ಆತ ಅಭಿಪ್ರಾಯಃ.

೮೭೭) ಪ್ರಿಯಾರ್ಹಃ

ಎಲ್ಲರ ಪ್ರೀತಿಗೆ ಅರ್ಹವಾದ, ಎಲ್ಲರೂ ಪ್ರೀತಿಸುವ ಅತ್ಯಂತ ಯೋಗ್ಯವಾದ ವಸ್ತು ಭಗವಂತ ಪ್ರಿಯಾರ್ಹಃ.

೮೭೮) ಅರ್ಹಪ್ರಿಯಕೃತ್

ಅತ್ಯಂತ ಪ್ರೀಯಾರ್ಹವಾದ, ಎಲ್ಲರಿಂದ ಪೂಜಿಸಲ್ಪಡುವ,ಎಲ್ಲರ ಪ್ರೀತಿಗೆ ಯೋಗ್ಯವಾದ, ಎಲ್ಲರಿಗೂ ಪ್ರಿಯವಾದುದ್ದನ್ನು ಮಾಡುವ ಭಗವಂತ ಅರ್ಹಪ್ರಿಯಕೃತ್.

೮೭೯) ಪ್ರೀತಿವರ್ಧನಃ

ಪ್ರೀತಿ ಹುಟ್ಟಿಸುವ ಹಾಗು ಅದಕ್ಕೆ ವ್ಯತಿರಿಕ್ತವಾಗಿ ಪ್ರೀತಿ ಕುಗ್ಗಿಸುವ ಭಗವಂತ ಪ್ರೀತಿವರ್ಧನಃ. ನಮಗೆ ಕೆಲವರನ್ನು ನೋಡಿದಾಗ ಪ್ರೀತಿಸಬೇಕು ಎನ್ನಿಸುತ್ತದೆ. ಆದರೆ ಇನ್ನು ಕೆಲವರನ್ನು ನೋಡಿದರೆ ಅಸಹ್ಯವೆನಿಸುತ್ತದೆ. ಪ್ರೀತಿಯನ್ನು ಸೆಳೆಯುವ ವ್ಯಕ್ತಿತ್ವವನ್ನು ಕೊಡುವ ಅಥವಾ ಕಸಿದುಕೊಳ್ಳುವ   ಭಗವಂತ ಪ್ರೀತಿವರ್ಧನಃ.

ಮುಂದುವರೆಯುವುದು...✍️💐

Saturday, June 10, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -92


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಧನುರ್ಧರೋ ಧನುರ್ವೇದೋ ದಂಡೋ ದಮಯಿತಾ ದಮಃ |
ಅಪರಾಜಿತಃ ಸರ್ವಸಹೋ ನಿಯಂತಾ ನಿಯಮೋsಯಮಃ || 92 ||

೮೬೨) ಧನುರ್ಧರಃ

ಭಗವಂತ ನಮ್ಮನ್ನು  ರಕ್ಷಣೆ ಮಾಡುವುದಕ್ಕೋಸ್ಕರ ಒಮ್ಮೊಮ್ಮೆ ಬಿಲ್ಲನ್ನು ಹಿಡಿದು ಅವತಾರ ರೂಪದಲ್ಲಿ ಬರುತ್ತಾನೆ. ಹೀಗೆ ಧನುಸ್ಸನ್ನು ಧರಿಸಿ ನಮ್ಮನ್ನು ರಕ್ಷಣೆ ಮಾಡುವ ಕೋದಂಡಪಾಣಿ ಭಗವಂತ ಧನುರ್ಧರಃ.

೮೬೩) ಧನುರ್ವೇದಃ

ಭಗವಂತ ಕೇವಲ ಬಿಲ್ವಿದ್ಯೆ ತಿಳಿದವನಷ್ಟೇ ಅಲ್ಲ, ಗುರುವಾಗಿ ಜಗತ್ತಿಗೆ ಬಿಲ್ವಿದ್ಯೆಯನ್ನು ಕಳಿಸಿ ಕೊಟ್ಟವನು ಪರಶುರಾಮರೂಪೀ ಭಗವಂತ. ಆತ ದ್ರೋಣಾಚಾರ್ಯ, ಭೀಷ್ಮ ಹಾಗು ಕರ್ಣರಿಗೆ ಬಿಲ್ವಿದ್ಯೆಯನ್ನು ಕಳಿಸಿಕೊಟ್ಟ ಗುರು. ಇತರರು ಬಿಲ್ವಿದ್ಯೆಯನ್ನು ಕಲಿತದ್ದು ದ್ರೋಣಾಚಾರ್ಯರಿಂದ. ಭಗವಂತ ಗುರುವಿನ ಗುರು.

ನಾಲ್ಕು ಉಪವೇದಗಳಲ್ಲಿ ಧನುರ್ವೇದ ಕೂಡಾ ಒಂದು. ಬದುಕಿಸುವ ಶಾಸ್ತ್ರ ಆಯುರ್ವೇದ ಹಾಗೂ ಸಾಯಿಸುವ ಶಾಸ್ತ್ರ ಧನುರ್ವೇದ. ಬದುಕಿ ಸಾಯುವ ತನಕ ಲಲಿತ ಕಲೆಗಳ ಹವ್ಯಾಸಕ್ಕಾಗಿ - ಸಂಗೀತಕ್ಕೆ ಸಂಬಂಧಪಟ್ಟ ಗಾಂಧರ್ವವೇದ ಹಾಗೂ ಶಿಲ್ಪಿಕಲೆ ಮತ್ತು ಚಿತ್ರಕಲೆಗೆ ಸಂಬಂಧಪಟ್ಟ ಸ್ಥಾಪತ್ಯವೇದ. ಈ ನಾಲ್ಕು ಉಪವೇದಗಳಲ್ಲಿ ಧನುರ್ವೇದ ಕೇವಲ ಸಾಯಿಸುವ ವೇದವಷ್ಟೇ ಅಲ್ಲ, ಜಗತ್ತಿನ ದುಷ್ಟ ಶಕ್ತಿಗಳ ನಿರ್ನಾಮ ಮಾಡಿ ಸಜ್ಜನರು ಬದುಕುವಂತೆ ಮಾಡುವ ಆಯುರ್ವೇದಕ್ಕೆ ಪೂರಕವಾದ ವೇದ. ಇಂತಹ ವೇದವನ್ನು ಪ್ರವರ್ತನೆ ಮಾಡಿ ಜಗತ್ತಿನ ಆರೋಗ್ಯಕ್ಕೂ ಹಾಗೂ ಸುವ್ಯವಸ್ಥೆಗೂ ಕಾರಣನಾದ ಭಗವಂತ ಧನುರ್ವೇದಃ.

೮೬೪) ದಂಡಃ

ದಂಡ ಎಂದರೆ ಶಿಕ್ಷೆ. ಸಂಸ್ಕೃತದಲ್ಲಿ ಶಿಕ್ಷೆ ಎನ್ನುವುದಕ್ಕೆ ಶಿಕ್ಷಣ ಎನ್ನುವ ಅರ್ಥವಿದೆ. ಆದರೆ ಇಲ್ಲಿ ದಂಡ ಎಂದರೆ ದಂಡಿಸುವುದು. ತಪ್ಪು ಮಾಡಿದವರಿಗೆ ದೇವರ ರಾಜ್ಯದಲ್ಲಿ ಕ್ಷಮೆ ಇಲ್ಲ. ನಾವು ಮಾಡಿದ ಕರ್ಮವನ್ನು ನಾವು ಅನುಭವಿಸಲೇಬೇಕು. ತಪ್ಪು ಮಾಡಿದವರಿಗೆ ನಿರ್ಧಾಕ್ಷಿಣ್ಯ ಹಾಗೂ ನಿಷ್ಠುರವಾದ ದಂಡನೆಯನ್ನು ಕೊಡುವ ಭಗವಂತ ದಂಡಃ.

೮೬೫) ದಮಯಿತಾ

ಯಾರು ಸಮಾಜ ಕಂಟಕರು, ಯಾರು ಧರ್ಮದ ವಿರುದ್ಧ ನಡೆಯುತ್ತಾರೋ ಅಂಥವರನ್ನು ದಮನ ಮಾಡುವ ಭಗವಂತ ದಮಯಿತಾ. ಇದಕ್ಕೋಸ್ಕರ ಆತ ಅನೇಕ ರೂಪ ಧರಿಸಿ ಭೂಮಿಯಲ್ಲಿ ಅವತರಿಸುತ್ತಾನೆ. ನಾವು ಕೃಷ್ಣಾಷ್ಟಮಿಯಂದು ಕೃಷ್ಣನಿಗೆ ಅರ್ಘ್ಯವನ್ನು ಕೊಡುವಾಗ ಈ ರೀತಿ ಹೇಳುತ್ತೇವೆ:

ಜಾತಃ ಕಂಸ ವಧಾರ್ಥಾಯ ಭೂಭಾರ ಹರಣಾಯ ಚ |
ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ ||
ಪಾಂಡವಾನಾಂ ಹಿತಾರ್ಥಾಯ ಧರ್ಮ ಸಂಸ್ಥಾಪನಾಯಚ |
ಗೃಹಾಣಾರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇ ||

ಎಲ್ಲಾ  ದುಷ್ಟ ಶಕ್ತಿಗಳ ದಮನ ಮಾಡಿ ಭೂಮಿಯ ಭಾರವನ್ನು ಇಳಿಸುವುದಕ್ಕೊಸ್ಕರ ಭಗವಂತ ಇಳಿದು ಬರುತ್ತಾನೆ. ಈ ಕಾರಣಕ್ಕಾಗಿ ಆತನನ್ನು ದಮಯಿತಾ ಎನ್ನುತ್ತಾರೆ. ಇದನ್ನೇ ಗೀತೆಯಲ್ಲಿ ಶ್ರೀಕೃಷ್ಣ ಹೀಗೆ ಹೇಳಿದ್ದಾನೆ:

ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ    ।
ಅಭ್ಯುತ್ಥಾನಮಧರ್ಮಸ್ಯ ತದಾssತ್ಮಾನಂ ಸೃಜಾಮ್ಯಹಮ್ ||

೮೬೬) ದಮಃ

'ದಮ' ಎಂದರೆ ಇಂದ್ರಿಯ ನಿಗ್ರಹ. ಅವತಾರ ರೂಪದಲ್ಲಿ ಇಂದ್ರಿಯ ನಿಗ್ರಹದ ಪರಾಕಾಷ್ಠೆಯನ್ನು ತೋರಿಸಿಕೊಟ್ಟ ಭಗವಂತ ದಮಃ. ನರ-ನಾರಾಯಣ ರೂಪದಲ್ಲಿ, ಸನತ್ಕುಮಾರನಾಗಿ, ಕಪಿಲನಾಗಿ, ದತ್ತಾತ್ರೇಯನಾಗಿ, ಹೀಗೆ ಅನೇಕ ಅವತಾರದಲ್ಲಿ ಭಗವಂತ ಇಂದ್ರಿಯ ನಿಗ್ರಹದ ಪರಾಕಾಷ್ಠೆಯನ್ನು ತೋರಿಸಿಕೊಟ್ಟಿದ್ದಾನೆ.

೮೬೭) ಅಪರಾಜಿತಃ

ಭಗವಂತನನ್ನು  ಯಾರಿಂದಲೂ ಸೋಲಿಸಲು ಅಸಾಧ್ಯ. ಇದಕ್ಕೊಂದು ಅಪವಾದವೆಂದರೆ "ಭಗವಂತ ಭಕ್ತ ಪರಾಧೀನ" !  ಯಾವುದಕ್ಕೂ ಸೋಲದ ಎಲ್ಲಕ್ಕಿಂತ ಎತ್ತರದಲ್ಲಿರುವ ಭಕ್ತವತ್ಸಲ ಭಗವಂತ ಅಪರಾಜಿತಃ.

೮೬೮) ಸರ್ವಸಹಃ

ಅಸಹನೆಯಿಲ್ಲದೆ, ಎಲಾ ಹೊಣೆಗಾರಿಕೆಯನ್ನು ಹೊರುವ ಸಹನಾಮೂರ್ತಿ ಭಗವಂತ ಸರ್ವಸಹಃ.

೮೬೯) ನಿಯಂತಾ

ಸಮಸ್ಥ ಪ್ರಪಂಚವನ್ನು, ಚರಾಚರಾತ್ಮಕವಾದ ವಿಶ್ವವನ್ನು ನಿಯಮನ ಮಾಡುವ ಶಕ್ತಿ ಭಗವಂತ ನಿಯಂತಾ.

೮೭೦) ನಿಯಮಃ(ಅನಿಯಮಃ)

ಜಗತ್ತಿನಲ್ಲಿ  ಯಾವುದು ಸರಿ, ಯಾವುದು ತಪ್ಪು ಎಂದು ನಿಯಮ ಮಾಡಿದವನು, ಆ ನಿಯಮದಂತೆ ಶಿಕ್ಷೆ ಕೊಟ್ಟು, ರಕ್ಷೆ ಕೊಟ್ಟು, ಪಾಲನೆ ಮಾಡುವ ಭಗವಂತ ನಿಯಮಃ. ಇಂತಹ ಭಗವಂತ ಇನ್ನೊಂದು ನಿಯಮಕ್ಕೆ ಬದ್ಧನಲ್ಲ. ಆದ್ದರಿಂದ ಆತ ಅನಿಯಮಃ. ಆತ ತನ್ನ ನಿಯತಿಗೆ ತಕ್ಕಂತೆ ತಾನೇ ಬದ್ಧನಾಗಿ ನಡೆಯುತ್ತಾನೆ.

೮೭೧) ಯಮಃ(ಅಯಮಃ)

ಯೋಗಶಾಸ್ತ್ರದಲ್ಲಿ ಯಮ ಎನ್ನುವ ಪದವನ್ನು ವಿಶಿಷ್ಟ ಅರ್ಥದಲ್ಲಿ ಬಳಸಿದ್ದಾರೆ. ಅದು ನಾವು ಮಾಡಬಾರದ ಐದು ನಿಯಮಗಳನ್ನು ಹೇಳುತ್ತದೆ. (೧) ಹಿಂಸೆ, (೨) ಸುಳ್ಳು ಹೇಳುವುದು,(೩) ಕದಿಯುವುದು, (೪) ಅತಿಯಾದ ಕಾಮ ಮತ್ತು (೫) ಇನ್ನೊಬ್ಬರ ಮುಂದೆ ಕೈಚಾಚುವುದು.

 ಭಗವಂತನ ಉಪಾಸನೆಯ ಮಾರ್ಗದಲ್ಲಿ ಬಿಡಬೇಕಾದ ಈ ಐದು ನಿಯಮಗಳನ್ನು ಕೊಟ್ಟ ಭಗವಂತ ಯಮಃ. ಇಡೀ ಜಗತ್ತನ್ನು ನಿಯಂತ್ರಿಸುವ, ಯಮಧರ್ಮನನ್ನೂ ನಿಯಂತ್ರಿಸುವ ಭಗವಂತ ಯಮಃ. ಇಂತಹ ಭಗವಂತನಿಗೆ ಇನ್ನೊಬ್ಬ ಯಮನಿಲ್ಲ ಆದ್ದರಿಂದ ಆತ ಅಯಮಃ.

ಮುಂದುವರೆಯುವುದು...✍️💐