ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ |
ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ || 65 ||
೬೧೦) ಶ್ರೀದಃ
ಸಿರಿಯನ್ನೀಯುವವನು.
೬೧೧) ಶ್ರೀಶಃ
ಸರ್ವ ಸಿರಿಯ ಸರ್ವ ವೇದದ ಅಧಿಪತಿ
೬೧೨) ಶ್ರೀನಿವಾಸಃ
ವೇದದಲ್ಲಿ ಸನ್ನಿಹಿತನಾದ, ಲಕ್ಷ್ಮಿಯ ಅಂತರ್ಗತ ಭಗವಂತ.
೬೧೩) ಶ್ರೀನಿಧಿಃ
ನಮಗೆ ಅಮೂಲ್ಯವಾದ ಐದು ನಿಧಿಯನ್ನು (ಕಣ್ಣು, ಮೂಗು, ಬಾಯಿ, ಕಿವಿ, ಮನಸ್ಸು) ಕರುಣಿಸಿದ ಸಿರಿಯ ನೆಲೆ ಭಗವಂತ ಶ್ರೀನಿಧಿಃ.
೬೧೪) ಶ್ರೀವಿಭಾವನಃ
ಶ್ರಿದೇವಿಗೂ ಕಾರಣಪುರುಷ, ಜಗತ್ತಿಗೆ ಐದು ಬಗೆಯ ಶ್ರೀಯನ್ನು ಕೊಟ್ಟು ಉದ್ಧಾರ ಮಾಡಿದ ಭಗವಂತ ಶ್ರೀವಿಭಾವನಃ
೬೧೫) ಶ್ರೀಧರಃ
ಶ್ರೀಯನ್ನು ಧರಿಸಿದವನು.ಎದೆಯಲ್ಲಿ ಹಾಗು ತೊಡೆಯಲ್ಲಿ ಶ್ರಿಲಕ್ಷ್ಮಿಯನ್ನು ಧರಿಸಿದ ಭಗವಂತ ಸಮಸ್ಥ ವೇದವನ್ನು ಧಾರಣೆ ಮಾಡಿದ ಶ್ರೀಧರಃ.
೬೧೬) ಶ್ರೀಕರಃ
ನಮಗೆ ಇಂದ್ರಿಯವನ್ನು, ಜ್ಞಾನ ಸಂಪತ್ತನ್ನು ಕೊಟ್ಟ ಭಗವಂತ ಶ್ರೀಕರಃ.
೬೧೭) ಶ್ರೇಯಃ
ಭಗವಂತ ಶ್ರೇಯಸ್ಸಿನ ಸ್ವರೂಪ. ಜಗತ್ತಿನ ಪರಮಕಲ್ಯಾಣ ಮಂಗಳ ಸ್ವರೂಪ, ಎಲ್ಲಕ್ಕಿಂತ ಹಿರಿಯ ಹಿತಕಾರಿ ಭಗವಂತ ಶ್ರೇಯಃ.
೬೧೮) ಶ್ರೀಮಾನ್
ಸಿರಿವಂತ; ಅರಿವಿನ ನೆಲೆ.
೬೧೯) ಲೋಕತ್ರಯಾಶ್ರಯಃ
ಮೂರು ಲೋಕದ ಆಸರೆ; ಬ್ರಹ್ಮಾಂಡವನ್ನು ಧಾರಣೆ ಮಾಡಿದ ಶಕ್ತಿ.
ಮುಂದುವರೆಯುವುದು....
No comments:
Post a Comment