ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಉದೀರ್ಣಃ ಸರ್ವತಶ್ಚಕ್ಷುರನೀಶಃ ಶಾಶ್ವತಃ ಸ್ಥಿರಃ |
ಭೂಷಯೋ ಭೂಷಣೋ ಭೂತಿರ್ವಿಶೋಕಃ ಶೋಕನಾಶನಃ || 67 ||
೬೨೯) ಉದೀರ್ಣಃ
ಉಪ - ಉಪರಿ ಅಂದರೆ ಎತ್ತರದಲ್ಲಿರುವ ವಸ್ತು. ಓದಿನಲ್ಲಿ, ಅಧ್ಯಾಯನದಲ್ಲಿ ಎತ್ತರದಲ್ಲಿರುವವರು ಉಪಾಧ್ಯಾಯರು, ಭೌದ್ಧಿಕವಾಗಿ ಎತ್ತರದಲ್ಲಿರುವವರು ಉದೀರ್ಣರು. ಗುಣಪೂರ್ಣನಾದ ಭಗವಂತ ಉದೀರ್ಣಃ.
೬೩೦) ಸರ್ವತಶ್ಚಕ್ಷುಃ
ಚಕ್ಷು ಎಂದರೆ 'ಕಣ್ಣು'; ಎಲ್ಲೆಡೆ ಕಣ್ಣುಳ್ಳವನು ಹಾಗೂ ಎಲ್ಲೆಡೆ ಕಣ್ಣಿಟ್ಟವನು ಸರ್ವತಶ್ಚಕ್ಷುಃ.
೬೩೧) ಅನೀಶಃ
ತನಗೆ ಇನ್ನೊಬ್ಬ ಒಡೆಯನಿಲ್ಲದವನು ಅನೀಶಃ. ಭಗವಂತನಿಗಿಂತ ಎತ್ತರದಲ್ಲಿರುವವನು ಇನ್ನೊಬ್ಬನಿಲ್ಲ.
೬೩೨) ಶಾಶ್ವತಸ್ಥಿರಃ
ಯಾವತ್ತೂ ಒಂದೇ ರೀತಿ ಇರುವವನು; ಬದಲಾವಣೆ ಇಲ್ಲದೆ ಆಚಲನಾಗಿರುವ ಭಗವಂತ ಶಾಶ್ವತಸ್ಥಿರಃ.
೬೩೩) ಭೂಶಯಃ
ಭೂಮಿಯಲ್ಲಿ ವ್ಯಾಪಿಸಿದವ, ನಾನಾ ರೀತಿಯ ಅವತಾರದಿಂದ ಭೂಮಿಯಲ್ಲಿ ಬಂದು ನೆಲೆಸಿದ ಭಗವಂತ ಭೂಶಯಃ.
೬೩೪) ಭೂಷಣಃ
ಎಲ್ಲಕ್ಕೂ ಚೆಲುವು ನೀಡುವ ಭಗವಂತ ಭೂಷಣಃ. ಅವನ ಅವತಾರ ಭೂಮಿಗೆ ಶೋಭೆ.
೬೩೫) ಭೂತಿಃ
ಉನ್ನತಿಯ ಸ್ವರೂಪ(ಸಾಕಾರ ಮೂರ್ತಿ)
೬೩೬) ವಿಶೋಕಃ
ಭಗವಂತನಿಗೆ ಎಂದೂ ದುಃಖವಿಲ್ಲ, ಅವತಾರದಲ್ಲಿ ಮಾತ್ರ ದುಃಖಪಟ್ಟವನಂತೆ ತೋರಿರುವುದನ್ನು ಕಾಣುತ್ತೇವೆ, ಆದರೆ ಇದು ಕೇವಲ ನಟನೆ ಅಷ್ಟೇ. ಮಾನವ ಅವತಾರದಲ್ಲಿದ್ದಾಗ ಮಾನವರಂತೆ ನಟಿಸಿ ಮಾನವನ ನಿಜವಾದ ಜೀವನ ಶೈಲಿಯನ್ನು ತೋರಿಸಿಕೊಡುವುದಕ್ಕಾಗಿ ಅಂತಹ ಶೋಕವನ್ನು ತೋರ್ಪಡಿಸಿದ್ದಾನೆಯೇ ಹೊರತು, ಅವನಿಗೆ ನಿಜವಾದ ಶೋಕವಿಲ್ಲ.
೬೩೭) ಶೋಕನಾಶನಃ
ದುಃಖವಿರದಂತೆ ಮಾಡುವವ.
ಮುಂದುವರೆಯುವುದು....✍️💐
No comments:
Post a Comment